ಜೈಲು ಸೇರಿದ BEO – ಇಲಾಖೆಗೆ ಇಂತವರಿಂದಲೇ ಕೆಟ್ಟ ಹೆಸರು ಮಾಜಿ HM ಪ್ಲಾನ್ ಸಕ್ಸ್ ಸ್..

Suddi Sante Desk
ಜೈಲು ಸೇರಿದ BEO – ಇಲಾಖೆಗೆ ಇಂತವರಿಂದಲೇ ಕೆಟ್ಟ ಹೆಸರು ಮಾಜಿ HM ಪ್ಲಾನ್ ಸಕ್ಸ್ ಸ್..

ಕುಂದಗೋಳ

ಲೋಕಾಯುಕ್ತ ಬಲೆಗೆ ಬಿದ್ದ ಲೇಡಿ BEO ಜೈಲು ಸೇರಿದ್ದಾರೆ ಹೌದು ನಿವೃತ್ತ ಶಿಕ್ಷಕರೊಬ್ಬರಿಗೆ ಪಿಂಚಿಣಿ ಸೆಟಲ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ವಿದ್ಯಾ ಕುಂದರಗಿ ಟ್ರ್ಯಾಪ್ ಅವರು. ಹೌದು ನಿವೃತ್ತ ಶಿಕ್ಷಕರೊಬ್ಬರ ಪಿಂಚಣಿ ಹಣವನ್ನು ಸೆಟಲ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ಲೋಕಾಯಕ್ತ ಬಲೆಗೆ ಬಿದ್ದ ಘಟನೆ ಕುಂದಗೋಳದಲ್ಲಿ ನಿನ್ನೆ ನಡೆದಿದೆ

ಇತ್ತೀಚಿಗಷ್ಟೇ ಶಿಕ್ಷಕರೊಬ್ಬರು ನಿವೃತ್ತಗೊಂಡಿದ್ದರು ಇವರು ತಮ್ಮ ಪಿಂಚಣಿ ದಾಖಲೆ ಮತ್ತು ವೇತನ ಕುರಿತಂತೆ ಬಿಇಓ ಕಚೇರಿಗೆ ಅರ್ಜಿಯನ್ನು ಸಲ್ಲಿಸಿ ದ್ದರು.ಈ ಒಂದು ಕುರಿತಂತೆ ಸಮಸ್ಯೆಯನ್ನು ಸರಿ ಮಾಡಲು ಬಿಇಓ ವಿದ್ಯಾ ಕುಂದರಗಿ 10 ಸಾವಿರ ಲಂಚಕ್ಕೆ ಬೇಡಿಕೆಯನ್ನು ಇಟ್ಟಿದ್ದರುಅಂತಿಮವಾಗಿ 8 ಸಾವಿರ ರೂಪಾಯಿ ತೆಗೆದುಕೊಳ್ಳುವಾಗ ಬಲೆಗೆ ಬಿದ್ದಿದ್ದರು

ಈ ಒಂದು ವಿಚಾರ ಕುರಿತಂತೆ ನಿವೃತ್ತ ಶಿಕ್ಷಕ ಧಾರವಾಡ ಲೋಕಾಯುಕ್ತ ರಿಗೆ ದೂರನ್ನು ನೀಡಿದ್ದರು.ದೂರಿನ ಹಿನ್ನಲೆಯಲ್ಲಿ ಕಾರ್ಯಾ ಚರಣೆ ಮಾಡಿದ ಲೋಕಾಯುಕ್ತರು 8 ಸಾವಿರ ರೂಪಾಯಿ ಹಣವನ್ನು ತಗೆದುಕೊಳ್ಳುವಾಗ ಬಿಇಓ ವಿದ್ಯಾ ಕುಂದರಗಿ ಲೋಕಾಯುಕ್ತ ಬಲೆಗೆ ಬಿದ್ದದ್ದಾರೆ.ಲೋಕಾಯುಕ್ತ ಎಸ್ಪಿ ಸತೀಶ ಚಿಟ ಗುಬ್ಬಿ ಅವರ ಮಾರ್ಗದರ್ಶನದಲ್ಲಿ ಡಿಎವೈಎಸ್ಪಿ ಶಂಕರ ರಾಗಿ ಪಿಐ ಬಸವರಾಜ ಮುಕರ್ತಿಹಾಳ ಸೇರಿದಂತೆ ಹಲವು ಸಿಬ್ಬಂದಿಗಳು ಈ ಒಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸಧ್ಯ 8 ಸಾವಿರ ರೂಪಾಯಿಗಳೊಂದಿಗೆ ಬಿಇಓ ಅವರನ್ನು ವಶಕ್ಕೆ ತಗೆದುಕೊಂಡಿರುವ ಲೋಕಾ ಯುಕ್ತ ಅಧಿಕಾರಿಗಳು ತನಿಖೆಯನ್ನು ಕೈಗೊಂಡು ಸಮಗ್ರವಾಗಿ ತನಿಖೆ ನಂತರ ನ್ಯಾಯಾಧೀಶರ ಮುಂದೆ ಹಾಜರು ಮಾಡಿದ್ದು ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೀಗಾಗಿ ಬಿಇಒ ಜೈಲು ಸೇರಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕುಂದಗೋಳ…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.