ಬೆಂಗಳೂರು –
ತೆರಿಗೆಯನ್ನು ಪಾವತಿಸದ ರಾಜ್ಯದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿಯನ್ನು ಮಾಡಿ ಶಾಕ್ ನೀಡಿದ್ದಾರೆ ಹೌದು ಬೆಂಗಳೂರು ಮತ್ತು ಮೈಸೂರಿ ನಲ್ಲಿ ಅಧಿಕಾರಿ ಗಳು ಬೆಳ್ಳಂ ಬೆಳಿಗ್ಗೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರೇವಾ ಮತ್ತು ದಿವ್ಯಾ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ಆದಾಯ ತೆರಿಗೆ ಪಾವತಿಸದೇ ಮರೆಮಾಚಿದ ಆರೋಪ ಮೇಲೆ ಈ ದಾಳಿ ನಡೆದಿದೆ.ಶುಲ್ಕ ವಸೂಲಿ ಸುಳ್ಳು ಲೆಕ್ಕ ತೋರಿಸಿ ತೆರಿಗೆ ವಂಚನೆ ಮಾಡಿದ ಆರೋಪವು ಕೂಡ ರೇವಾ ಹಾಗೂ ದಿವ್ಯಾ ಗ್ರೂಪ್ ಮೇಲೆ ಇದೆ.ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೇಲೆ ಸುಮಾರು 70 ವಾಹನಗಳಲ್ಲಿ ಅಧಿಕಾರಿ ಗಳು ಆಗಮಿಸಿ ದಾಳಿ ಮಾಡಿದ್ದಾರೆ.ಕರ್ನಾಟಕ ಹಾಗೂ ಗೋವಾ ವಲಯದ ಐಟಿ ಅಧಿಕಾರಿಗಳಿಂದ ಈ ದಾಳಿ ನಡೆದಿದೆ.