ಬೆಂಗಳೂರು –
ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ದಿನದಿಂದ ದಿನಕ್ಕೆ ದೊಡ್ಡ ಸಮಸ್ಯೆ ಯಾಗುತ್ತಿದೆ.ವರ್ಗಾವಣೆ ಎಂದ ರೇನು ಎಂಬ ಪದದ ಅರ್ಥವನ್ನೇ ಮರೆತಿರುವ ಶಿಕ್ಷಕರು ನರಕಯಾತನೆಯ ವೃತ್ತಿ ಬದುಕು ಅನುಭವಿ ಸುತ್ತಿದ್ದಾರೆ. ನೌಕರಿ ಒಂದು ಕಡೆ ಗಂಡ ಮತ್ತೊಂದು ಕಡೆ ಮಕ್ಕಳು ತಂದೆ ತಾಯಿ ಬಳಿ ಹೀಗೆ ದಿಕ್ಕಿಗೊಂದು ಬದುಕಿನಲ್ಲಿ ಶಿಕ್ಷಕರ ಬದುಕು ಸಾಗುತ್ತಿದೆ

ಮೂರು ದಿನಗಳಲ್ಲಿ ವರ್ಗಾವಣೆ ಆಗುತ್ತದೆ ಎಂದು ದೊಡ್ಡ ದೊಡ್ಡ ಮಾತುಗಳನ್ನು ಹೇಳಿದ ಕೆಲವರು ಮೂರು ನಾಲ್ಕು ತಿಂಗಳಾದರೂ ಇನ್ನೂ ವರ್ಗಾವಣೆ ಆಗುತ್ತಿಲ್ಲ ಆ ಒಂದು ಸಂದೇಶ ಬರುತ್ತಿಲ್ಲ

ವರ್ಗಾವಣೆ ವಿಚಾರ ಕುರಿತು ಶಿಕ್ಷಕರು ಎಲ್ಲರಿಗೂ ಮನವಿ ನೀಡಿ ಒತ್ತಾಯ ಮಾಡಿದರು ಆದರೂ ಕೂಡಾ ಇವರ ಕೂಗಿಗೆ ಯಾರು ಸ್ಪಂದಿಸುತ್ತಿಲ್ಲ ಸಮಸ್ಯೆ ಪರಿಹಾರ ಮಾಡುತ್ತಿಲ್ಲ


ಶಿಕ್ಷಕರ ಸಮಸ್ಯೆ ಕುರಿತು ಸ್ಪಂದಿಸಲು ಸಂಘದ ಮುಖ್ಯಸ್ಥರು ಇದ್ದಾರೆ ಇವರಿಂದ ಆಯ್ಕೆಯಾದ ಜನಪ್ರತಿನಿಧಿ ಗಳಿದ್ದಾರೆ ಆದರೂ ಕೂಡಾ ವರ್ಗಾವ ಣೆ ಕುರಿತು ಸ್ಪಷ್ಟವಾದ ಚಿತ್ರಣದ ಸಂದೇಶವನ್ನು ನೀಡುತ್ತಿಲ್ಲ

ಮನಸ್ಸು ಮಾಡಿದರೆ ಇದೇನು ದೊಡ್ಡ ಸಮಸ್ಯೆ ಯಲ್ಲ ಆದರೆ ಮಾಡುವ ಮನಸ್ಸು ಮಾತ್ರ ಇಲ್ಲ ಹೀಗಾಗಿ ಶಿಕ್ಷಕರ ವರ್ಗಾವಣೆ ದೊಡ್ಡ ಸಮಸ್ಯೆ ಯಾಗಿದೆ.ಇನ್ನೂ ವರ್ಗಾವಣೆ ವರ್ಗಾವಣೆ ಎನ್ನುತ್ತಾ ನಮ್ಮ ಶಿಕ್ಷಕರು ಅಲ್ಲಲ್ಲಿ ಜಪ ಮಾಡುತ್ತಾ ಕಾಯತಾ ಇದ್ದಾರೆ

ಒಂದಲ್ಲ ಒಂದು ಕಾರಣವನ್ನು ಹೇಳುತ್ತಾ ಅದನ್ನು ಮುಂದಿಟ್ಟುಕೊಂಡು ಕಾಲಹರಣ ಮಾಡುತ್ತಿರುವ ಶಿಕ್ಷಣ ಸಚಿವರು ಅಧಿಕಾರಿಗಳು ಶಿಕ್ಷಕರ ಸಂಘಟನೆ ಮುಖಂಡರು ಇನ್ನಾದರೂ ಎಚ್ಚೆತ್ತುಕೊಂಡು ವರ್ಗಾ ವಣೆ ಗೆ ಸಂದೇಶ ನೀಡಿ ಶಿಕ್ಷಕರಿಗೆ ನೆಮ್ಮದಿ ನೀಡು ತ್ತಾರೆ ಎಂಬುದನ್ನು ಕಾದು ನೋಡಬೇಕು