ವಿಜಯನಗರ –
ಹೌದು ನಾಗರಾಜ ಎಂಬ 14 ವರ್ಷದ ಬಾಲಕನನ್ನು ಶಿಕ್ಷಕ ರೊಬ್ಬರು ಥಳಿಸಿದ್ದಾರೆಂದು ಆರೋಪಿಸಿ ಅವರ ಮೇಲೆ ದೂರು ದಾಖಲಿಸಿದ ಘಟನೆ ವಿಜಯನಗರ ದಲ್ಲಿ ನಡೆದಿದೆ ಹಿರೇಕುಂಬಳಗುಂಟೆಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದ.ವಿದ್ಯಾರ್ಥಿಯನ್ನ ಶಿಕ್ಷಕ ಶಾಮಸುಂದರ್ ಥಳಿಸಿದ್ದಾರೆ ನಂತರ ಮಗ ಕಾಣೆಯಾಗಿದ್ದಾನೆಂದು ತಂದೆ ದೊಡ್ಡಯ್ಯ ದೂರು ದಾಖಲಿಸಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ಹೊಡೆದಿದ್ದರಿಂದ ತನ್ನ ಮಗ ಕಾಣೆಯಾಗಿದ್ದನೆಂದು ತಂದೆ ನೀಡಿದ ದೂರಿನ ಮೇರೆಗೆ ಶಿಕ್ಷಕನ ವಿರುದ್ಧ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ದಾಸೋಬನ ಹಳ್ಳಿ ಗೊಲ್ಲರಹಟ್ಟಿ ನಾಗರಾಜ ಎಂಬ 14 ವರ್ಷದ ಬಾಲಕ ಹಿರೇಕುಂಬಳಗುಂಟೆಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದ.ಬಾಲಕ ನಾಗರಾಜ ದಾಸೋಬನಹಳ್ಳಿ ಗೊಲ್ಲರಹಟ್ಟಿಯಿಂದ ಶಾಲೆಗೆ ತೆರಳಿದ್ದ.ನಂತರ ಮಧ್ಯಾಹ್ನ ದೊಡ್ಡಯ್ಯನಿಗೆ ಬಾಲಕನ ತಾಯಿ ಫೋನ್ ಮಾಡಿ ಮಗನು ಶಾಲೆಯಲ್ಲಿ ಶಿಕ್ಷಕರೊಬ್ಬರು ಹೊಡೆದಿದ್ದರಿಂದ ಕಾಣೆಯಾಗಿ ದ್ದನೆಂದು ಹೇಳಿದ್ದಾರೆ.ವಿಷಯ ತಿಳಿಯುತ್ತಿದ್ದಂತೆ ಕುಟುಂಬ ಸ್ಥರು ಊರೆಲ್ಲ ಹುಡುಕಾಡಿದ್ದಾರೆ.ಆದರೆ ಬಾಲಕ ಎಲ್ಲೂ ಸಿಕ್ಕಿಲ್ಲ.ಹೀಗಾಗಿ ಮಗನು ಕಾಣೆಯಾಗಲು ಶಿಕ್ಷಕನೇ ಕಾರಣ ಎಂದು ಕಾಣೆಯಾದ ಮಗನ ತಂದೆ ದೊಡ್ಡಯ್ಯ ದೂರು ನೀಡಿದ್ದಾರೆ. ಹೊಸಹಳ್ಳಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಪ್ರಕರಣ ದಾಖಲಿಸಿಕೊಂಡಿದ್ದಾರೆ.