ಬೆಂಗಳೂರು –
ಮನಸ್ಸು ಮಾಡಿದರೆ ಏನಾದರೂ ಮಾಡಬಹುದು ಆದರೆ ಮಾಡಬೇಕು ಎನ್ನುವ ಮನಸ್ಸು ಇರಬೇಕು ಅಂದಾಗ ಯಾರಾದರೂ ಯಾವುದೇ ಸಮಸ್ಯೆ ಕುರಿತು ಧ್ವನಿ ಎತ್ತಿದಾಗ ಅವರಿಗೆ ಸ್ಪಂದಿಸಿದರೆ ಅದಕ್ಕೊಂದು ಅರ್ಥ ಬೆಲೆ ಬರುತ್ತದೆ. ಆದರೆ ಆ ಒಂದು ಕೂಗಿಗೆ ಸ್ಪಂದಿಸದಿದ್ದರೆ ಇದ್ದೂ ಇಲ್ಲದಂತೆ ಹೌದು ಇದಕ್ಕೆ ತಾಜಾ ಉದಾಹರಣೆ ರಾಜ್ಯದಲ್ಲಿನ ಶಿಕ್ಷಕರ ವರ್ಗಾವಣೆ.

ಅದ್ಯಾಕೋ ಏನೋ ಗೊತ್ತಿಲ್ಲ ಕಳೆದ ಹಲವಾರು ವರುಷಗಳಿಂದ ರಾಜ್ಯದಲ್ಲಿ ವರ್ಗಾವಣೆ ವಿಚಾರ ಕುರಿತು ನಮ್ಮ ಶಿಕ್ಷಕರು ಸಾಕಷ್ಟು ಪ್ರಮಾಣದಲ್ಲಿ ಕಷ್ಟ ನೋವುಗಳನ್ನು ಅನುಭವಿಸುತ್ತಿದ್ದಾರೆ. ನಮಗೆ ನಮ್ಮನ್ನು ವರ್ಗಾವಣೆ ಮಾಡಿ ಎನ್ನುತ್ತಿದ್ದಾರೆ ಆದರೂ ಇವರ ನೋವಿನ ಆ ಒಂದು ಧ್ವನಿಗೆ ಯಾರು ಸ್ಪಂದಿಸುತ್ತಿಲ್ಲ ತಿರುಗಿ ನೋಡುತ್ತಿಲ್ಲ

ಈವಾಗ ಆಗುತ್ತದೆ ಆವಾಗ ಆಗುತ್ತದೆ ಎಂದು ಕೊಂಡು ಕಾಯುತ್ತಾ ಕುಳಿತು ಕುಳಿತು ಬೇಸತ್ತ ನಮ್ಮ ಶಿಕ್ಷಕರ ಈವರೆಗೆ ತಾಳ್ಮೆಯಿಂದ ಕಾದು ಕಾದು ಬೇಸತ್ತು ರಾಜ್ಯದಲ್ಲಿ ವರ್ಗಾವಣೆ ವಿಚಾರದಲ್ಲಿ ಯಾರು ಸ್ಪಂದಿಸದ ಹಿನ್ನೆಲೆಯಲ್ಲಿ ಈಗ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಚಳುವಳಿ ಆರಂಭ ಮಾಡಲು ನಿರ್ಧಾರ ಕೈಗೊಂಡಿದ್ದಾರೆ

ಹೌದು ಈವರೆಗೆ ಜಾತಕ ಪಕ್ಷಿಯಂತೆ ಕಾದು ಕಾದು ಬೇಸತ್ತ ನಮ್ಮ ಶಿಕ್ಷಕರು ಇದೇ ಅಂತಿಮ ಮಾರ್ಗ ದಾರಿ ಎಂದುಕೊಂಡು ಪ್ರಧಾನ ಮಂತ್ರಿ ಅವರಿಗೆ ಈ ಕುರಿತು ಪತ್ರ ಬರೆದು ರಾಜ್ಯದಲ್ಲಿನ ವರ್ಗಾವಣೆಗೆ ಪ್ರಹಸನದ ಸಂದೇಶವನ್ನು ತಲುಪಿಸಲು ಮುಂದಾಗಿದ್ದಾರೆ

ಸಾಮಾನ್ಯವಾಗಿ ವರ್ಗಾವಣೆ ವಿಚಾರ ಏನೋ ದೊಡ್ಡ ವಿಷಯವಲ್ಲ ಆದರೆ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ದೊಡ್ಡದಾಗಿ ಮಾಡುತ್ತಿದೆ ಇದರಿಂದಾಗಿ ಈಗ ಇದೊಂದು ನಮ್ಮ ಶಿಕ್ಷಕ ಸಮುದಾಯಕ್ಕೆ ದೊಡ್ಡ ಸಮಸ್ಯೆಯಾಗಿದೆ

ಈವರೆಗೆ ಸಂಘಟನೆಯ ಅಧ್ಯಕ್ಷರಿಗೆ ರಾಜ್ಯದ ಶಿಕ್ಷಣ ಸಚಿವರಿಗೆ ನಮ್ಮನ್ನು ವರ್ಗಾವಣೆ ಮಾಡಿಸಿ ಮಾಡಿಸಿ ಎಂದು ಕೇಳಿಕೊಂಡು ಬೇಸತ್ತ ಶಿಕ್ಷಕರು ರಾಜ್ಯದಲ್ಲಿ ಯಾರೂ ಕೂಡಾ ಸ್ಪಂದಿಸದ ಹಿನ್ನೆಲೆಯಲ್ಲಿ ಈಗ ಅಂತಿಮವಾಗಿ ದೇಶದ ಪ್ರಧಾನಿ ಅವರಿಗೆ ತಮ್ಮ ಪತ್ರದ ಸಂದೇಶದ ಮೂಲಕ ಗಮನಕ್ಕೆ ತರಲು ಮುಂದಾಗಿದ್ದಾರೆ

ಒಟ್ಟಾರೆ ಏನೇ ಆಗಲಿ ದಿನದಿಂದ ದಿನಕ್ಕೆ ಶಿಕ್ಷಕರ ವರ್ಗಾವಣೆ ದೊಡ್ಡ ಸಮಸ್ಯೆಯಾಗುವ ಮುನ್ನವೇ ನಮ್ಮ ರಾಜ್ಯದ ನಾಯಕರು ಎಚ್ಚೆತ್ತುಕೊಂಡು ಸ್ಪಂದಿಸೊದು ಅವಶ್ಯಕತೆ ಇದೆ ಇಲ್ಲವಾದರೆ ರಾಜ್ಯಾದ್ಯಂತ ಶಿಕ್ಷಕರು ಬೀದಿಗಿಳಿಯಲಿದ್ದಾರೆ