ಬೆಂಗಳೂರು –
ದುಬೈ ನಿಂದ ಅಕ್ರಮವಾಗಿ ತಗೆದುಕೊಂಡು ಬಂದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತಗಳನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ದುಬೈನಿಂದ ಬೆಂಗಳೂರಿಗೆ ತಂದಿದ್ದ ಚಿನ್ನ ಹಾಗೂ iPhone ಸೇರಿದಂತೆ ಒಟ್ಟು 75 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ದುಬೈನಿಂದ ಬೆಂಗಳೂರಿಗೆ ತಂದಿದ್ದ ಚಿನ್ನ, iPhone ಮತ್ತು ಡ್ರೋನ್ ಸೇರಿದಂತೆ 75 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೂ ಮತ್ತು ದೇಹದ ಮೇಲೆ ಪೇಸ್ಟ್ ರೂಪದಲ್ಲಿ ಚಿನ್ನ ಹಚ್ಚಿಕೊಂಡು ಬರಲಾಗಿತ್ತು. ದುಬೈನಿಂದ ಆಗಮಿಸಿದ್ದ ಪ್ರಯಾಣಿಕರು ಅನುಮಾನಾಸ್ಪದ ರೀತಿಯಲ್ಲಿ ಪ್ಯಾಸೆಂಜರ್ ಬ್ಯಾಗ್ ನಲ್ಲಿ iPhone ಗಳು ಮತ್ತು ಡ್ರೋನ್ ಗಳನ್ನು ತಗೆದುಕೊಂಡು ಬಂದಿದ್ದರು.
ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಶೂ ಮತ್ತು ಬ್ಯಾಗ್ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರು ಹಾಗೂ ಅವರ ಬ್ಯಾಗ್ ಲಗೇಜ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ, ಶೂ ಮತ್ತು ಪ್ರಯಾಣಿಕರ ದೇಹದ ಮೇಲೆ ಸುಮಾರು 62 ಲಕ್ಷ ರೂ. ಮೌಲ್ಯದ 1.3 ಕೆ.ಜಿ ಬಂಗಾರ, ಅಂದಾಜು 12 ಲಕ್ಷ ಮೌಲ್ಯದ ಡ್ರೋನ್ ಮತ್ತು iPhone ಗಳು ಪತ್ತೆಯಾಗಿದೆ. ಹೀಗಾಗಿ, ಇವೆಲ್ಲವುಗಳನ್ನು ತಂದಿದ್ದ ಇಬ್ಬರು ಪ್ರಯಾಣಿಕರನ್ನ ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.