ವಿಜಯಪುರ –
ಮಹಾಮಾರಿ ಕೊರೊನಾಗೆ ಪತ್ರಕರ್ತ ರೊಬ್ಬರು ಸಾವಿಗೀಡಾದ ಘಟನೆ ವಿಜಯಪುರದಲ್ಲಿ ನಡೆದಿದೆ. ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದು ಜಾಫರ್ ಕಲಾದಗಿ (42) ಕೋವಿಡ್ ನಿಂದ ಸಾವಿಗೀ ಡಾದ ಪತ್ರಕರ್ತರಾಗಿದ್ದಾರೆ.

ಬಿಜಾಪುರ ಮಿರರ್ ಇಂಗ್ಲೀಷ್ ದಿನ ಪತ್ರಿಕೆಯನ್ನು ನಡೆಸುತ್ತಿದ್ದರು ಜಾಫರ್ ಕಲಾದಗಿ.ಕೋರೊನಾ ಒಂದನೇ ಅಲೆ ವೇಳೆ ಜಾಫರ್ ಸಹೋದರನಿಗೂ (ಖಾಸಗಿ ವಾಹಿನಿ ಕ್ಯಾಮರಾಮ್ಯಾನ್ ಆಗಿದ್ದ) ಅವರಿಗೂ ಕೊರೊನಾ ಒಕ್ಕರಿಸಿತ್ತು.

ಕಳೆದ ಒಂದು ವಾರದಿಂದ ಉಸಿರಾಟ ತೊಂದರೆ ಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.ನಿನ್ನೆ ಸಂಜೆ ಖಾಸಗಿ ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.ಕೋರೋನಾ ಸೋಂಕಿನಿಂದ ಇಂ ದು ಬೆಳಿಗ್ಗೆ ಸಾವಿಗೀಡಾಗಿದ್ದು ಅಗಲಿದ ಪತ್ರಕರ್ತ ನಿಗೆ ವಿಜಯಪುರ ಜಿಲ್ಲೆಯ ಪತ್ರಕರ್ತ ಮಿತ್ರರು ಭಾವಪೂರ್ಣ ನಮನ ಸಲ್ಲಿಸಿದರು