ಬೆಂಗಳೂರು –
ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು ಒಕ್ಕೂ ಟದ ನೂತನ ರಾಜ್ಯಾಧ್ಯಕ್ಷರಾಗಿ ಎಚ್.ಎಸ್.ಜೈಕುಮಾರ್ ಪ್ರಧಾನ ಕಾರ್ಯದರ್ಶಿಗಳಾಗಿ ಅಭಿಜಿತ್ ಆಯ್ಕೆಯಾಗಿ ದ್ದಾರೆ.ನಗರದ ಗಾಂಧಿ ಭವನದಲ್ಲಿ ನಡೆದ ಒಕ್ಕೂಟದ ಸರ್ವ ಸದಸ್ಯರ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಕಾರ್ಯಾಧ್ಯಕ್ಷರಾಗಿ ಶೋಭಾ ಲೋಕನಾ ಗಣ್ಣ,ಕೋಶಾಧ್ಯಕ್ಷರಾಗಿ ವೇದವತಿ,ಉಪಾಧ್ಯಕ್ಷರಾಗಿ ಡಾ.ಎಂ.ವೆಂಕಟೇಶ್ ಅವರು ನೇಮಕಗೊಂಡಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಎಚ್.ಎಸ್.ಜೈಕುಮಾರ್,ಅಭಿಜಿತ್,ವೇದಾವತಿ ಹಾಗೂ ರಂಗನಾಥ ಹವಲ್ದಾರ್ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಏಳನೆ ವೇತನ ಆಯೋಗ ರಚನೆಗಾಗಿ ಆಗ್ರಹಿ ಸಿದ್ದು ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.80 ಲಕ್ಷ ಹುದ್ದೆಗ ಳನ್ನು ಕೂಡಲೇ ಭರ್ತಿ ಮಾಡಬೇಕು ಜೊತೆಗೆ ನೌಕರ ವಿರೋಧಿ ಆಡಳಿತ ಸುಧಾರಣೆ ಆಯೋಗ-2ರ ಶಿಫಾರಸ್ಸು ಗಳನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಲಾಗಿದೆ.


























