ಮಂಗಳೂರು –
ಲಂಚ ಸ್ವೀಕಾರ ಪ್ರಕರಣವೊಂದಕ್ಕೆ ಸಂಬಂಧಿಸಿ ದಂತೆ ಮಂಗಳೂರು ವಿವಿಯ ಸಹಾಯಕ ಪ್ರೊಫೆ ಸರ್ ಡಾ.ಅನಿತಾ ರವಿಶಂಕರ್‌ಗೆ ಮಂಗಳೂರು ನ್ಯಾಯಾಲಯ 5 ವರ್ಷದ ಶಿಕ್ಷೆ ಪ್ರಕಟಿಸಿದೆ. ಪಿಎಚ್ ಡಿ ವಿದ್ಯಾರ್ಥಿನಿ ಪ್ರೇಮಾ ಡಿಸೋಜ ಎಂಬವರಿಂದ ಪ್ರಬಂಧ ಅಂಗೀಕಾರಗೊಳಿಸಲು ಮೈಸೂರಿನಿಂದ ಬರುವ ಬಾಹ್ಯ ಪರಿವೀಕ್ಷಕರಿಗೆ ಕೊಡಲು ಡಾ. ಅನಿತಾ ರವಿಶಂಕರ್ 16,800 ರೂ.ಲಂಚದ ಬೇಡಿಕೆ ಯನ್ನಿಟ್ಟಿದ್ದರು.ಹಾಗೇ 2012ರ ಡಿ.4ರಂದು ಡಾ. ಅನಿತಾ ಮುಂಗಡ ಹಣ 5,000 ರೂ. ಪಡೆಯುತ್ತಿ ದ್ದಾಗ ಮಂಗಳೂರು ಲೋಕಾಯುಕ್ತ ನಿರೀಕ್ಷಕ ಉಮೇಶ್ ಜಿ. ಶೇಟ್ ಮತ್ತು ಸಿಬ್ಬಂದಿ ವರ್ಗವು ದಾಳಿ ನಡೆಸಿದ್ದರು.ಅಲ್ಲದೆ ಡಾ.ಅನಿತಾ ರವಿಶಂಕರ್ ರನ್ನು ಬಂಧಿಸಲಾಗಿತ್ತು.

ಲೋಕಾಯುಕ್ತದ ಪರವಾಗಿ 9 ಮಂದಿ ಸಾಕ್ಷಿ ಹೇಳಿ ದ್ದರು.ವಿಚಾರಣೆ ನಡೆಸಿದ ಮಂಗಳೂರು ಲೋಕಾ ಯುಕ್ತ ವಿಶೇಷ ನ್ಯಾಯಾಲಯವು ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್.ರಾಜೇಶ್‌ರ ವಾದ ವನ್ನು ಪುರಸ್ಕರಿಸಿ ಆರೋಪಿಯ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಕ್ಕೆ ಬಂದಿದೆ. ಅಲ್ಲದೆ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲ ಯದ ನ್ಯಾಯಾಧೀಶ ಬಿ.ಬಿ. ಜಕಾತಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಕಲಂ 7ರ ಅಡಿಯಲ್ಲಿ ಎಸಗಿದ ಅಪರಾಧಕ್ಕೆ 2 ವರ್ಷ ಸಾದಾ ಸಜೆ ಮತ್ತು 15,000 ರೂ.ದಂಡ. ಕಲಂ 13 (1) (ಡಿ) ಯಲ್ಲಿ ಎಸಗಿದ ಅಪರಾಧಕ್ಕೆ 3 ವರ್ಷ ಸಾದಾ ಸಜೆ ಮತ್ತು 15,000 ರೂ. ದಂಡ, ಆರೋಪಿ ದಂಡ ತೆರಲು ತಪ್ಪಿದ್ದಲ್ಲಿ ತಲಾ ಒಂದು ತಿಂಗಳ ಸಾದಾ ಸಜೆ ಅನುಭವಿಸಬೇ ಕೆಂದು ಆದೇಶಿಸಿದ್ದಾರೆ.