ಕಲಬುರಗಿ –
ವಾಹನ ಬಿಡುಗಡೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಡಿವೈಎಸ್ಪಿ ಗೆ ನಾಲ್ಕು ವರುಷ ಜೈಲು ಶಿಕ್ಷೆ ವಿಧಿಸಲಾಗಿದೆ. ಹೌದು 2015 ರಲ್ಲಿ ಕಲಬುರಗಿಯ ಶಹಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪೆಟ್ರೋಲ್ ಬಂಕ್ ನಲ್ಲಿ ಡಿಸೆಲ್ ತುಂಬಿಸುವ ವಿಚಾರಕ್ಕೆ ಗಲಾಟೆವೊಂದು ನಡೆದಿತ್ತು. ಈ ಪ್ರಕರಣ ಸಂಬಂಧ ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2015 ರಲ್ಲಿ ನಡೆದಿದ್ದ ಗಲಾಟೆ ಪ್ರಕರಣ ಸಂಬಂದ ಟಾಟಾ ಸುಮೋ ಬಿಡುಗಡೆಗೆ 25 ಸಾವಿರ ರೂಪಾಯಿಗೆ ಅಂದಿನ ಸಿಪಿಐ ವಿಜಯಲಕ್ಷ್ಮೀ 25 ಸಾವಿರ ರೂಪಾಯಿ ಹಣಕ್ಕೇ ಬೇಡಿಕೆ ಇಟ್ಟಿದ್ದರು. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಂದಿನ ಸಿಪಿಐ ವಿಜಯಲಕ್ಷ್ಮಿ ಟಾಟಾ ಸುಮೋ ಮಾಲೀಕ ರಾಜು ಎಂಬಾತನ ಬಳಿ ಹಣಕ್ಕೆ ಬೇಡಿಕೆ ಇಟ್ಟು ಲಂಚದ 25 ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.
ಸಿಪಿಐ ವಿಜಯಲಕ್ಷ್ಮಿ. ಪ್ರಕರಣದ ವಾದ ವಿವಾದವನ್ನು ಈವರೆಗೆ ಸುಧಿರ್ಘವಾಗಿ ವಿಚಾರಣೆ ನಡೆಸಿದ ಕೋರ್ಟ್ ಗೆವಚಾರ್ಜ್ ಶೀಟ್ ಲೋಕಾ ಪೊಲೀಸ್ ಪ್ರಕರಣದಲ್ಲಿ ವಿಚಾರಣೆ ನಡೆಸಿ ಆರೋಪ ಸಾಬಿತಾದ ಹಿನ್ನಲೆಯಲ್ಲಿ ಅಂದಿನ ಸಿಪಿಐ ಸಧ್ಯ ಡಿವೈಎಸ್ಪಿ ವಿಜಯಲಕ್ಷ್ಮಿ ಗೆ ನಾಲ್ಕು ವರ್ಷ ಜೈಲು ಶಿಕ್ಷೆ ಹತ್ತು ಸಾವಿರ ದಂಡವನ್ನು ವಿಧಿಸಿ ಜಿಲ್ಲಾ ಸತ್ರ ವಿಶೇಷ ನ್ಯಾಯಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಸತೀಶ್ ಸಿಂಗ್ ಆದೇಶವನ್ನು ಹೊರಡಿಸಿದ್ದಾರೆ. ಇಂದು ಈ ತೀರ್ಪು ಪ್ರಕಟವಾಗುತ್ತಿದ್ದಂತೆ ಇತ್ತ ಪೊಲೀಸರು ಪೊಲೀಸ್ ಅಧಿಕಾರಿಯನ್ನು ನ್ಯಾಯಾಲಯದ ಸೂಚನೆಯಂತೆ ಜೈಲಿಗೆ ಕಳಿಸಿದ್ರು.