ಬೆಂಗಳೂರು –
ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ ಶುರುವಾಗಿದ್ದು, ಈ ನಡುವೆ ರಾಸಲೀಲೆಯಿಂದ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿಯವರು ಇಂದು ಸದನಕ್ಕೆ ಗೈರು ಹಾಜರಾಗಿದ್ದಾರೆ.

ಇನ್ನೂ ಇತ್ತ ಇವರ ಇನ್ನಿಬ್ಬರು ಸಹೋದರರಾದ ಸತೀಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಕೂಡಾ ಇಂದು ಸದನಕ್ಕೆ ಗೈರಾಗಿದ್ದು ಕಂಡು ಬಂದಿತು.

ಸದನಕ್ಕೆ ರಮೇಶ್ ಜಾರಕಿಹೊಳಿ ಸಹೋದರರಾದ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ, ಹಾಗೂ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಕೂಡ ಸದನದಲ್ಲಿ ಕಂಡು ಬರಲಿಲ್ಲ.