ಧಾರವಾಡ –
ಇಂದು ಜಯಕರ್ನಾಟಕ ಜನಪರ ವೇದಿಕೆಯಿಂದ ಧಾರವಾಡದ ಶ್ರೀನಗರ ವೃತ್ತದಲ್ಲಿ ಸುತ್ತ ಮುತ್ತಲಿನ ಬಡ ಜನರು ಸುಮಾರು 2,ವರ್ಷ ಗಳಿಂದ ಬೀದಿ ಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ ಆದರೆ ಪಾಲಿಕೆ ಲಯ ಕೆಲ ಅಧಿಕಾರಿಗಳು ಕೆಲ ರಾಜಕೀಯ ಮುಖಂಡರ ಮಾತು ಕೇಳಿ ನೀವು ಇಲ್ಲಿ ವ್ಯಾಪಾರ ಮಾಡಬೇಡಿ ಎಂದು ತೊಂದರೆ ಕೊಡುತ್ತಿದ್ದಾರೆ
ಆದಕಾರಣ ಬಡ ಜನರಿಗೆ ತರಕಾರಿ ವ್ಯಾಪಾರ ಮಾಡಲು ಪರ್ಯಾಯ ವ್ಯವಸ್ಥೆ ಮಾಡಿಕೊಡ ಬೇಕೆಂದು ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು, ಹಾಗೂ ವಲಯ ಒಂದು ಕಚೇರಿ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ರಾದ ಜಗದೀಶ್ ಜಾದವ, ಕಮಲೂ ಪೂಲವಾಲೆ, ಸುರೇಶ್ ಮಾಡರಗಿ,ಮಂಜು ಅಂಗಡಿ, ಎಲ್ಲಪ್ಪ ತಳವಾರಾ,ಗಂಗವ್ವ ಬೆಳಗಟ್ಟಿ,ಅಣ್ಣಾಜಿ ಬಿರಾದಾರ್, ಬಿರಾದಾರ್ ರವಿ ಕಪಾಸೆ,ಹಾಗೂ ವಿವಿಧ ಬಡಾವ ಣೆಗಳ ಮಹಿಳಾ ಸಂಘಟನೆಯ ಸದಸ್ಯರು ಉಪಸ್ಥಿ ತರಿದ್ದರು.