ಶಿವಮೊಗ್ಗ –

ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಿಣೆಗೆ ಇಂದಿ ನಿಂದ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಲಾಕ್ ಮಾಡಲಾಗಿತ್ತು ಲಾಕ್ ಡೌನ್ ನಂತ್ರದ ಸಧ್ಯ ಹಂತ ಹಂತವಾಗಿ ಸಡಿಲಿಕೆ ಆಗುತ್ತಿರುವ ಹಿನ್ನಲೆಯಲ್ಲಿ ವೀಕ್ಷಣೆಗೆ ಅವಕಾಶವನ್ನು ನೀಡಲಾಗಿದೆ. ಇವತ್ತಿ ನಿಂದ ಜೋಗದ ಸೊಬಗಿನ ವೀಕ್ಷಣೆಗೆ ಅವಕಾಶ ಸಿಗಲಿದ್ದು ಸಾರ್ವಜನಿಕರಿಗೆ ಜೋಗದ ಸೊಬಗ ಸವಿಯಲು ಬರುವಂತವರಿಗೆ ಕೆಲ ನಿಯಮಗಳನ್ನು ಪಾಲಿಸೋದು ಕಡ್ಡಾಯವಾಗಿದೆ.ಈ ಕುರಿತಂತೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇ ಶಕರಾದ ರಾಮಕೃಷ್ಣ ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಕೊರೋನಾ ಸೋಂಕಿನ ಹೆಚ್ಚಳದಿಂದಾಗಿ ಬಂದ್ ಆಗಿದ್ದಂತ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಜೋಗ ದ ಜಲಪಾತ ವೀಕ್ಷಿಸಲು ಇಂದಿನಿಂದ ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತಿದೆ. ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜಲಪಾತವನ್ನು ವೀಕ್ಷಿಸಬಹು ದಾಗಿದೆ.ಕೊರೋನಾ ಸೋಂಕಿನ ಭೀತಿಯ ನಡುವೆ ಯೂ ನಾಳೆಯಿಂದ ವೀಕ್ಷಕರಿಗಾಗಿ ಜೋಗದ ಸಿರಿಯ ಸೊಬಗಿನ ಸವಿಯ ಸವಿಯಲು ಅನುಮತಿ ಸಿರುವ ಕಾರಣ, ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಆಗಮಿಸಬೇಕು.ಜೊತೆಗೆ ವೀಕ್ಷಣೆಯ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡ ಬೇಕು.ಅಲ್ಲದೇ ಸ್ವಚ್ಛತಾ ನಿಯಮಗಳನ್ನು ಪಾಲಿ ಸೋದು ಕಡ್ಡಾಯವಾಗಿದೆ ಎಂದಿದ್ದಾರೆ.