ಬೆಂಗಳೂರು –
ಅದ್ಯಾಕೋ ರಾಜ್ಯದಲ್ಲಿನ ಶಿಕ್ಷಕರ ವರ್ಗಾವಣೆಗೆ ಯಾರು ಸ್ಪಂದಿಸುತ್ತಿಲ್ಲ. ಈವರೆಗೆ ಏನೋ ನಾವು ಶಾಂತಿಯುತವಾಗಿ ನಮ್ಮ ಬೇಡಿಕೆ ಈಡೇರಿಸಿ ಎಂದು ಕೇಳಿದರೆ ಇಲ್ಲ ನಮಗೆ ಆಗೊದಿಲ್ಲ ಎಂದುಕೊಂಡು ತಾವಾಯಿತು ತಮ್ಮ ಸರ್ಕಾರ ಎನ್ನುತ್ತಾ ರಾಜ್ಯ ಸರ್ಕಾರ ಮುಖ್ಯಮಂತ್ರಿ ಶಿಕ್ಷಣ ಸಚಿವರು ಸುಮ್ಮನಿ ದ್ದಾರೆ. ನೋಡಿ ಸ್ವಾಮಿ ಎಲ್ಲರ ಹಾಗೆ ನಮಗೂ ತಂದೆ ತಾಯಿ ಬಂಧುಗಳು ಬಳಗ ಆಪ್ತರು ಹೀಗೆ ಇದ್ದಾರೆ ಆಯಿತು ಈವರೆಗೆ ನಮ್ಮೂರು ಬಿಟ್ಟು ಬಂದು ನೌಕರಿ ಮಾಡಿದ್ದೇವೆ ಇನ್ಮಾದರೂ ಕಳೆದ ಹಲವು ವರ್ಷಗಳಿಂದ ನಾವು ಕೇಳುತ್ತಿರುವ ನಮ್ಮ ವರ್ಗಾವಣೆಗೆ ಸ್ಪಂದಿಸಿ ಎಂದರೆ ಕಣ್ತೇರೆದು ನೋಡು ತ್ತಿಲ್ಲ.
ಈವರೆಗೆ ಕೇಳಿ ಕೇಳಿ ಬೇಸತ್ತ ನಮ್ಮ ಶಿಕ್ಷಕರು ಈಗ ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮೇಲ್ ಮಾಡಿ ಸಮಸ್ಯೆಯನ್ನು ಗಮನಕ್ಕೆ ತಗೆದುಕೊಂಡು ಬಂದಿದ್ದಾರೆ.
ಇದಾದ ನಂತರ ಈಗ ಈಗ ಮಾಧ್ಯಮದವರಿಗೂ ಮೇಲ್ ಮೂಲಕ ತಮ್ಮ ಸಮಸ್ಯೆಯನ್ನು ಗಮನಕ್ಕೆ ತರುತ್ತಿದ್ದಾರೆ ಇದು ಒಂದೆಡೆ ನಡೆಯುತ್ತಿರುವ ವಿಚಾ ರವಾದರೆ ಇನ್ನೂ ಕಳೆದ ಮೂರು ನಾಲ್ಕು ದಿನಗಳಿಂ ದ ಗೂಗಲ್ ಮೀಟ್ ಸಭೆ ಆರಂಭ ಮಾಡಿದ್ದಾರೆ
ಹೌದು ಪ್ರತಿ ದಿನ ಸಂಜೆ ಸಮಯದಲ್ಲಿ ಒಂದು ಗಂಟೆಗಳ ಕಾಲ ಗೂಗಲ್ ಮೀಟ್ ಮಾಡುತ್ತಾ ವರ್ಗಾವಣೆ ವಿಚಾರ ಕುರಿತು ಚಿಂತನ ಮಂಥನ ಮಾಡತಾ ಇದ್ದಾರೆ. ಇನ್ನೂ ಇಂದು ಕೂಡಾ ಈ ಒಂದು ಮೀಟ್ ನಡೆಯಲಿದ್ದು ಇದರಲ್ಲಿ ಸಾವಿತ್ರಿ ಬಾಯಿ ಪುಲೆ ಸಂಘದ ರಾಜ್ಯಾಧ್ಯಕ್ಷರು, ಮಹಿಳಾ ಶಿಕ್ಷಕಿಯರ ಪರ ಹೋರಾಟಗಾರರು ಅದ ಶ್ರೀಮತಿ ಲತಾ ಮುಳ್ಳೂರು ರವರು ಹಾಗೂ ಪ್ರಧಾನ ಕಾರ್ಯ ದರ್ಶಿಗಳಾದ ಶ್ರೀಮತಿ ಜ್ಯೋತಿ ರವರು ಪಾಲ್ಗೊಳ್ಳು ತ್ತಿದ್ದಾರೆ.
ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರಾದ ಅಶೋಕ ಎಂ ಸಜ್ಜನ ಕೂಡಾ ಹೋರಾಟಕ್ಕೆ ಬೆಂಬಲ ನೀಡಿ ಗೂಗ ಲ್ ಮೀಟ್ ನಲ್ಲಿ ಭಾಗಿಯಾಗುತ್ತಿದ್ದಾರೆ
ಇನ್ನೂ ಹೆಚ್ಚಿನ ಶಿಕ್ಷಕರು ಇದರಲ್ಲಿ ಪಾಲ್ಗೊಂಡು ವರ್ಗಾವಣೆ ಹೋರಾಟದ ರೂಪುರೇಷೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಕೊಳ್ಳಬೇಕು. ಸಮಯ ಪ್ರತಿದಿನದಂತೆ ರಾತ್ರಿ 8:15pm ಕ್ಕೆ ಪ್ರಾರಂಭ