ಪತ್ರಕರ್ತ ಮಲ್ಲಿಕಾರ್ಜುನ ಪುರದನಗೌಡರ ಇನ್ನೂ ನೆನಪು ಮಾತ್ರ – ಬೆಳಿಗ್ಗೆ ಇದ್ದ ಜೀವ ಈಗ ಇಲ್ಲ ಪತ್ರಕರ್ತನ ನಿಧನಕ್ಕೆ ಜಿಲ್ಲೆಯ ನಾಡಿನ ಪತ್ರಕರ್ತ ಬಂಧುಗಳಿಂದ ಸಂತಾಪ ಭಾವಪೂರ್ಣ ನಮನ

Suddi Sante Desk
ಪತ್ರಕರ್ತ ಮಲ್ಲಿಕಾರ್ಜುನ ಪುರದನಗೌಡರ ಇನ್ನೂ ನೆನಪು ಮಾತ್ರ – ಬೆಳಿಗ್ಗೆ ಇದ್ದ ಜೀವ ಈಗ ಇಲ್ಲ ಪತ್ರಕರ್ತನ ನಿಧನಕ್ಕೆ ಜಿಲ್ಲೆಯ ನಾಡಿನ ಪತ್ರಕರ್ತ ಬಂಧುಗಳಿಂದ ಸಂತಾಪ ಭಾವಪೂರ್ಣ ನಮನ

ಧಾರವಾಡ

ಓ ದೇವರೇ ನೀನೆಷ್ಟು ಕ್ರೂರಿ ಬೆಳಿಗ್ಗೆ ಇದ್ದ ಜೀವ ಈಗ ಇಲ್ಲದಂತಾಗಿದೆ ಈ ಒಂದು ಮಾತಿಗೆ ಕಲಘಟಗಿಯ ಯುವ ಪತ್ರಕರ್ತ ಮಲ್ಲಿಕಾರ್ಜುನ ಪುರದನಗೌಡರ ನಿಧನವೇ ಸಾಕ್ಷಿಯಾಗಿದೆ.ಸದಾ ನಗು ನಗುತ್ತಾ ಉತ್ಸಾಹಿ ಯಾಗಿದ್ದ ಇವರು ನಿಧನರಾಗಿದ್ದು ಈ ಒಂದು ಸುದ್ದಿ ಯನ್ನು ನಂಬಲು ಸಾಧ್ಯವಾಗುತ್ತಿಲ್ಲ

ಕಲಘಟಗಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕ ಅಧ್ಯಕ್ಷರಾಗಿ ವಿಜಯ ಕರ್ನಾಟಕ ಪತ್ರಿಕೆ ತಾಲ್ಲೂಕ ವರದಿಗಾರರು ಇದರೊಂದಿಗೆ ಕಾಲೇಜು ಉಪನ್ಯಾಸಕರಾಗಿ ಜೊತೆಗೆ ಸಾಹಿತಿಗಳಾಗಿ ತಮ್ಮ ಬರವಣಿಗೆ ಮೂಲಕ ತಾಲ್ಲೂಕಿನ ಹಲವು ಸಮಸ್ಯೆಗಳ ಪರಿಹಾರಕ್ಕೆ ಬೆಳಕು ಚೆಲ್ಲುತ್ತಾ ಸಾಕಷ್ಟು ಪ್ರಮಾಣದಲ್ಲಿ ಉತ್ಸಾಹಿಯಾಗಿ ಕೆಲಸ ಕಾರ್ಯವನ್ನು ಮಾಡುತ್ತಿದ್ದು ಮಲ್ಲಿಕಾರ್ಜುನ ಪುರದನಗೌಡರ ಹೃದಯಾಘಾತದಿಂದ ನಿಧನ ರಾಗಿದ್ದಾರೆ

ಸಮಾಜ ಸೇವಕರು ಸದಾ ಹಸನ್ಮುಖಿಯಾಗಿದ್ದ ಇವರ ಅಕಾಲಿಕ ನಿಧನದಿಂದಾಗಿ ಕಲಘಟಗಿ ತಾಲ್ಲೂಕಿಗೆ ತುಂಬಲಾರದ ನಷ್ಟವಾಗಿದ್ದು ಬಹಳ ನೋವಿನ ಸಂಗತಿಯ ವಿಚಾರವಾಗಿದ್ದು ನಿಧನಕ್ಕೆ ತಾಲ್ಲೂಕಿನ ಜಿಲ್ಲೆಯ ಕಾರ್ಯನಿರತ ಪತ್ರಕರ್ತ ಬಂಧುಗಳು ಸಂತಾಪವನ್ನು ಸೂಚಿಸಿದ್ದಾರೆ.ಇವರ ನಿಧನರಿಂದಾಗಿ ಸಾಹಿತಿಯ ಮತ್ತೊಂದು ಕೊಂಡಿ ಯೊಂದು ಕಳಚಿದಂತಾಗಿದ್ದು ಅವರ ಆತ್ಮಕ್ಕೆ ಆ ಭಗವಂತ ಚಿರಶಾಂತಿ ನೀಡಲಿ ಹಾಗೂ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ತಾಲ್ಲೂಕಿನ ಮತ್ತು ಜಿಲ್ಲೆಯ ನಾಡಿನ ಪತ್ರಕರ್ತ ಬಂಧುಗಳು ದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.ಮೃತರು ಇಬ್ಬರು ಮಕ್ಕಳು ಪತ್ನಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.