ವಿನಯ ಕುಲಕರ್ಣಿಗೆ ಡಿಸೆಂಬರ್ 7 ರವರೆಗೆ ನ್ಯಾಯಾಂಗ ಬಂಧನ – ನ್ಯಾಯಾಲಯ ಆದೇಶ

Suddi Sante Desk

ಧಾರವಾಡ –

ಯೊಗೇಶಗೌಡ ಕೊಲೆ ಪ್ರಕರಣದಲ್ಲಿ ಈಗಾಗಲೇ ಬಂಧನವಾಗಿರುವ ವಿನಯ ಕುಲಕರ್ಣಿ ಅವರಿಗೆ ಮತ್ತೇ 15 ದಿನಗಳ ಕಾಲ ನ್ಯಾಯಾಂಗ ಬಂಧನವಾಗಿದೆ. ನ್ಯಾಯಾಂಗ ಬಂಧನದ ಅವಧಿ ಇಂದು ಮುಕ್ತಾಯವಾದ ಹಿನ್ನಲೆಯಲ್ಲಿ ವಿಡಿಯೋ ಕಾನ್ಪರನ್ಸ್ ಮೂಲಕ ವಿಚಾರಣೆ ಮಾಡಿದ ನ್ಯಾಯವಾದಿಗಳು ಡಿಸೆಂಬರ್ 7 ರವರೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶವನ್ನು ನೀಡಿದರು.

ಇನ್ನೂ ಇತ್ತ ಸಿಬಿಐ ವಿನಂತಿ ಮಾಡಿಕೊಂಡ ಸಿಬಿಐ ಅಧಿಕಾರಿಗಳು ಮನವಿಯಿಂದ ಮಾಜಿ ಸಚಿವ ವಿನಯ ಕುಲಕರ್ಣಿಗೆ ಮತ್ತೇ 15 ದಿನಗಳ ನ್ಯಾಯಂಗ ಬಂಧನಕ್ಕೇ ಒಪ್ಪಿಸಲಾಗಿದೆ.ಈ ಕುರಿತಂತೆ ವಿಚಾರಣೆ ಮಾಡಿದ ಮೂರನೇಯ ಅಧಿಕ ಸಿಬಿಐ ವಿಶೇಷ ನ್ಯಾಯಾಧೀಶೆ ಪಂಚಾಕ್ಷರಿ ಹದಿನೈದು ದಿನಗಳ ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡಿ ಆದೇಶವನ್ನು ನೀಡಿದ್ದಾರೆ.

ಡಿಸೆಂಬರ್ 7 ವರೆಗೆ ನ್ಯಾಯಾಂಗ ಬಂಧನಕ್ಕೇ ಒಪ್ಪಿಸಿ ಮತ್ತೇ ವಿಚಾರಣೆಯನ್ನು ನ್ಯಾಯಾಧೀಶರು ಮುಂಡೂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.