ನವಲಗುಂದ –
ತೆರೆ ಕಂಡಿತು ಮೂರು ದಿನಗಳ ಸಂಸದ ಕ್ರೀಡಾ ಮಹೋತ್ಸವದ ಕಬಡ್ಡಿ ಪಂದ್ಯಾವಳಿ – ಪ್ರಥಮ ಸ್ಥಾನ ಪಡೆದುಕೊಂಡ ಕೋಳಿವಾಡದ ಕುಮಾರ ವ್ಯಾಸ ಟೀಮ್…..ರಾಜಕೀಯದೊಂದಿಗೆ ಕ್ರೀಡಾ ಸ್ಪೂರ್ತಿಗೆ ಸಾಕ್ಷಿಯಾದ್ರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೌದು
ಸದಾ ಒಂದಿಲ್ಲೊಂದು ವಿಶೇಷವಾದ ಕಾರ್ಯ ಕ್ರಮಗಳ ಮೂಲಕ ಜನರ ಒಡನಾಟದಲ್ಲಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.ಹೌದು ರಾಜಕೀಯದೊಂದಿಗೆ ರಾಜಕಾರಣಿಗಳು ಹೇಗೆ ಇರಬೇಕು ಇರಬಹುದು ಸಮಾಜಕ್ಕೆ ಏನೇಲ್ಲಾ ಮಾಡಬಹುದು ಎಂಬೊದನ್ನು ಪ್ರಹ್ಲಾದ್ ಜೋಶಿ ಯವರನ್ನು ನೋಡಿ ಕಲಿಯಬೇಕಿದೆ.
ಚುನಾವಣೆ ಮುಗಿದ ಮೇಲೆ ಕೇವಲ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಐದು ವರ್ಷಗಳ ಅಧಿಕಾರವನ್ನು ಮಾಡಿದ್ರಾಯಿತು ಎಂದು ಕೊಂಡು ಸುಮ್ಮನೆ ಇರದ ಇವರು ಸದಾ ಒಂದಿಲ್ಲೊಂದು ವಿಶೇಷವಾದ ಕೆಲಸ ಕಾರ್ಯ ಗಳ ಮೂಲಕ ಕ್ಷೇತ್ರದಲ್ಲಿ ಜನರ ಮಧ್ಯೆ ಇದ್ದಾರೆ.
ಸಮಸ್ಯೆಗಳನ್ನು ತಗೆದುಕೊಂಡು ಬಂದವರಿಗೆ ಸ್ಥಳದಲ್ಲಿಯೇ ಪರಿಹಾರ ನೀಡುತ್ತಾ ಸಮಸ್ಯೆ ಗಳನ್ನು ಹೊತ್ತುಕೊಂಡು ಬಂದವರಿಗೆ ಸ್ಪಂದಿಸಿ ಕ್ಷೇತ್ರದಲ್ಲಿ ಹೇಳಲಾರದಷ್ಟು ಕೆಲಸ ಕಾರ್ಯಗ ಳನ್ನು ಮಾಡುತ್ತಾ ಸರಳ ಸಜ್ಜನಿಕೆಯ ರಾಜಕಾ ರಣಿ ಎಂದು ಗುರುತಿಸಿಕೊಂಡಿರುವ ಪ್ರಹ್ಲಾದ್ ಜೋಶಿಯವರು
ಗ್ರಾಮೀಣ ಪ್ರದೇಶದಲ್ಲಿನ ಕ್ರೀಡಾ ಪ್ರತಿಭೆಗಳನ್ನು ಅದರಲ್ಲೂ ಗ್ರಾಮೀಣ ಕ್ರೀಡೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಬಡ್ಡಿ ಪಂದ್ಯಾವಳಿಗಳನ್ನು ಕೂಡಾ ಆಯೋಜನೆ ಮಾಡಿಕೊಂಡು ಬರುತ್ತಿದ್ದು ಈ ಒಂದು ನಿಟ್ಟಿನಲ್ಲಿ ನವಲಗುಂದ ದಲ್ಲಿ ಸಂಸದ ಕ್ರೀಡಾ ಮಹೋತ್ಸವದ ಅಂಗವಾಗಿ ದೇಶಿ ಕ್ರೀಡೆ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ಬಲಿಷ್ಠ ಭಾರತಕ್ಕೆ ಬುನಾದಿ ಆರೋಗ್ಯವಂತ ಯುವ ಸಮೂಹ ಎನ್ನುತ್ತಾ ಕ್ರೀಡೆ ಸ್ಪರ್ಧಾ ಮನೋಭಾವದ ಜೊತೆಗೆ ಆರೋಗ್ಯವನ್ನು ಸದೃಢಗೊಳಿಸುತ್ತದೆ ಅದರಲ್ಲೂ ಗ್ರಾಮೀಣ ಕ್ರೀಡೆಗಳು ನಮ್ಮ ಮನಗಳನ್ನು ಮುದಗೊಳಿ ಸುತ್ತವೆ ಎಂಬ ಒಂದು ನಿಟ್ಟಿನಲ್ಲಿ ಸಂಸದ ಕ್ರೀಡಾ ಮಹೋತ್ಸವದ ಅಂಗವಾಗಿ ಸತತವಾಗಿ ಮೂರು ದಿನಗಳಿಂದ ಧಾರವಾಡದ ನವಲಗುಂದ ಪಟ್ಟಣದಲ್ಲಿ ಈ ಒಂದು ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ಧಾರವಾಡ ಲೋಕಸಭಾ ಕ್ಷೇತ್ರದ ನವಲಗುಂ ದದಲ್ಲಿ ನಡೆದ ದೇಸಿ ಕ್ರೀಡೆ ಕಬಡ್ಡಿ ಪಂದ್ಯಾವಳಿ ಮುಕ್ತಾಯಗೊಂಡಿದೆ.108 ತಂಡಗಳ ಗ್ರಾಮೀಣ ಪ್ರತಿಭೆಗಳು ರಣರೋಚಕ ಆಟಗಳಲ್ಲಿ ಅಭೂತ ಪೂರ್ವ ಪ್ರದರ್ಶನ ಮೆರೆದು ಕ್ರೀಡಾ ಪ್ರೇಮಿಗಳ ಮನಸ್ಸನ್ನು ತಣಿಸಿದರು.ಪೈನಲ್ ನಲ್ಲಿ ಕೋಳಿವಾ ಡದ ಕುಮಾರವ್ಯಾಸ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.
ರನ್ನರ್ ಅಪ್ ಆಗಿ ಬಸಾಪುರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಂಡ,ಫಸ್ಟ್ ರನ್ನರ್ ಅಪ್ ಆಗಿ ಅಣ್ಣಿಗೇರಿಯ ಅಮೃತೇಶ್ವರ ಸ್ಪೂರ್ತಿ ಕ್ಲಬ್ ತಂಡ ಹಾಗೂ ಸೆಕೆಂಡ್ ರನ್ನರ್ ಅಪ್ ಆಗಿ ಮೊರಬದ ಜೈ ಹನುಮಾನ್ ತಂಡ ಬಹುಮಾನ ಪಡೆದುಕೊಂಡಿತು.ಈ ಸ್ಪರ್ಧೆ 3 ದಿನಗಳ ಕಾಲ ಯಶಸ್ವಿಯಾಗಿ ನಡೆಯಲು ಪ್ರತ್ಯಕ್ಷವಾಗಿ ಪರೋ ಕ್ಷವಾಗಿ ಕಾರಣರಾದ
ಎಲ್ಲಾ ಬಿಜೆಪಿ ಪಕ್ಷದ ಮುಖಂಡರಿಗೂ, ಕಾರ್ಯ ಕರತರಿಗೂ ಹಾಗು ಕಬ್ಬಡ್ಡಿ ಅಸ್ಸೊಸಿಯೆಷನ್ ಗು ಕೇಂದ್ರ ಸಚಿವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ ಇನ್ನೂ ಈ ಒಂದು ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲಾ ತಂಡಗಳಿಗೂ ಅಭಿನಂದನೆಗಳನ್ನು ಕೂಡಾ ಹೇಳಿದ್ದು ಈ ಬಾರಿ ಸೋತ ತಂಡಗಳು ಕೂಡಾ ಮುಂದಿನ ಸ್ಪರ್ಧೆಗಳಲ್ಲಿ ಗೆಲುವಿಗಾಗಿ ಹೆಚ್ಚಿನ ತಯಾರಿಗಳನ್ನು ಮಾಡುವಂತೆ ಕರೆ ನೀಡಿದ್ದಾರೆ.
ಇನ್ನೂ ಇದೇ ವೇಳೆ ವಿಜೇತ ತಂಡಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ಬಹುಮಾನ ಗಳನ್ನು ನೀಡಿ ಗೌರವಿಸಿದ್ರು.ಈ ಒಂದು ಕಾರ್ಯ ಕ್ರಮದಲ್ಲಿ ಶಾಸಕರಾದ ಅರವಿಂದ ಬೆಲ್ಲದ,ಮಾಜಿ ಸಚಿವರಾದ ಸಿ ಸಿ ಪಾಟೀಲ್ ಸೇರಿದಂತೆ ಹಲ ವರು ಉಪಸ್ಥಿತರಿದ್ದು ಸಮಾರೋಪ ಸಮಾರಂ ಭಕ್ಕೆ ಮೆರಗು ನೀಡಿದ್ರು.
ಸುದ್ದಿ ಸಂತೆ ನ್ಯೂಸ್ ನವಲಗುಂದ…..