ಬೆಂಗಳೂರು –
ಇನ್ನೇನು ಶಿಕ್ಷಕರ ವರ್ಗಾವಣೆ ಆರಂಭವಾಗುತ್ತದೆ ಈ ಕುರಿತಂತೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಇವೆಲ್ಲದರ ನಡುವೆ ಈ ಒಂದು ಶಿಕ್ಷಕರ ವರ್ಗಾವ ಣೆಗೆ ತಡೆಯಾಜ್ಞೆಯನ್ನು ತರಲಾಗಿದೆ ಎಂಬ ಮಾತು ಗಳು ಬಿಸಿ ಬಿಸಿಯಾಗಿ ಕೇಳಿ ಬರುತ್ತಿವೆ.ಹೌದು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಈ ಒಂದು ವರ್ಗಾವಣೆಗೆ ಕೆಲವು ಶಿಕ್ಷಕರು ಸೇರಿಕೊಂಡು ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಗೆದು ಕೊಂಡು ಬಂದಿದ್ದಾರೆ ಎಂಬ ಗಾಳಿ ಸುದ್ದಿ ಸಾಮಾ ಜಿಕ ಜಾಲ ತಾಣಗಳಲ್ಲಿ ಕೇಳಿ ಬರುತ್ತಿದೆ.ಇದು ನಿಜವೋ ಸುಳ್ಳೋ ತಡೆಯಾಜ್ಞೆಯನ್ನು ತಗೆದು ಕೊಂಡು ಬಂದವರಿಗೆ ಗೊತ್ತು ಇದು ಸುಳ್ಳು ಸುದ್ದಿನಾ ಸತ್ಯನಾ ಎಂಬೊದು ಸುದ್ದಿಯನ್ನು ಹರಿಡಿಸಿದವರಿಗೆ ಗೊತ್ತು.
ಕಳೆದ ಹಲವು ದಿನಗಳಿಂದ ವರ್ಗಾವಣೆ ವರ್ಗಾವಣೆ ಎನ್ನುತ್ತಾ ದೂರ ದೂರದ ಊರು ಕೇರಿಗಳಲ್ಲಿ ದಿಕ್ಕಾಪಾಲಾಗಿ ಕೆಲಸವನ್ನು ಮಾಡುತ್ತಿರುವ ಶಿಕ್ಷಕರ ಪರಸ್ಥಿತಿ ಅವರಿಗೆ ಗೊತ್ತು. ಇಂತಹ ಪರಸ್ಥಿತಿಯಲ್ಲಿ ಕೆಲವು ಶಿಕ್ಷಕರು ಏನಾದರೂ ಮಾಡಿ ಇದ್ದ ವ್ಯವಸ್ಥೆ ಯಲ್ಲಿ ಬದಲಾವಣೆ ಮಾಡುವ ಪ್ರಯತ್ನದಲ್ಲಿ ಇದ್ದಾರೆ ಬೆಂಗಳೂರು ಚಲೋ ಎನ್ನುತ್ತಾ ಒಂದು ಬಾರಿ ಕೇಳಿದ್ದಲ್ಲಿ ವರ್ಗಾವಣೆ ಗೆ ಬೇಡಿಕೆ ಇಟ್ಟಿದ್ದು ಇನ್ನೂ ಕೆಲವು ಶಿಕ್ಷಕರು ಇದ್ದ ವ್ಯವಸ್ಥೆಯಲ್ಲಿಯೇ ನಡೆಯಲಿ ಏನಾದರೂ ಮಾಡಿ ಆಗಲಿ ಎನ್ನುತ್ತಿದ್ದಾರೆ ಹೀಗಿರುವಾಗ ಇಂತಹ ಸಂದಿಗ್ದವಾದ ಪರಸ್ಥಿತಿಯಲ್ಲಿ ಏಕಾಏಕಿಯಾಗಿ ವರ್ಗಾವಣೆಯ ಪ್ರಕ್ರಿಯೆಗೆ ತಡೆಯಾಜ್ಞೆ ತಗೆದುಕೊಂಡು ಬಂದರೆ ಸರಿನಾ. ಇನ್ನೂ ಈ ಒಂದು ಸುದ್ದಿ ಬಿಸಿ ಬಿಸಿಯಾಗಿ ಚರ್ಚೆ ಯಾಗುತ್ತಿದ್ದು ಇದು ನಿಜನಾ ಸುಳ್ಳೋ ಎಂಬ ಮಾತಿಗೆ ಸುದ್ದಿ ಹಬ್ಬಿಸಿದವರನ್ನೇ ಕೇಳಬೇಕು.
ಇದು ಬಿಗ್ ಬ್ರೇಕಿಂಗ್ ಸುದ್ದಿ ಆಗದೇ ಅತ್ತ ಬೆಂಗಳೂರು ಚಲೋ ಆಗದೇ OTS ಆಗಲಿ ಇದರೊಂದಿಗೆ ವರ್ಗಾವಣೆ ಪ್ರಕ್ರಿಯೇ ನಡೆಯಲಿ ಒಟ್ಟಾರೆ ಸಮಸ್ಯೆಗಳ ನಡುವೆ ಕರ್ತವ್ಯವನ್ನು ಮಾಡುತ್ತಿರುವ ನಾಡಿನ ಶಿಕ್ಷಕ ಬಂಧುಗಳಿಗೆ ಏನಾದರೂ ಮಾಡಿ ವರ್ಗಾವಣೆ ಸಮಸ್ಯೆಯಿಂದ ಮುಕ್ತಿ ಸಿಗಲಿ ಎಂಬೋದೆ ನಿಮ್ಮ ಪ್ರೀತಿಯ ಸುದ್ದಿ ಸಂತೆಯ ಆಶಯವಾಗಿದೆ.