ಬೀದರ –
ರಾಜ್ಯದ ಸರ್ಕಾರಿ ನೌಕರರ ಕೆಲ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾರ್ಚ್ 1 ರಂದು ಕರೆ ನೀಡಿರುವ ನೌಕರರ ಹೋರಾಟಕ್ಕೆ ಕಲ್ಯಾಣ ಕರ್ನಾಟಕ ಶಿಕ್ಷಕರ ಸಂಘವು ಬೆಂಬಲವನ್ನು ಘೋಷಣೆ ಮಾಡಿದೆ.ಹೌದು ವೇತನ, ಭತ್ಯೆ ಪರಿಷ್ಕರಣೆ ಹಾಗೂ ಹಳೆಯ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘವು ಮಾ 1 ರಿಂದ ನಡೆಸಲಿರುವ ಅನಿರ್ದಿ ಷ್ಟಾವಧಿ ಮುಷ್ಕರದಲ್ಲಿ ಜಿಲ್ಲೆಯ 1,600 ಸರ್ಕಾರಿ ಪ್ರೌಢಶಾಲಾ ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಹೇಳಿದರು.
ಪ್ರಸಕ್ತ ಸಾಲಿನ ರಾಜ್ಯ ಬಜೆಟ್ನುಲ್ಲಿ ನೌಕರರ ವೇತನ ಹಾಗೂ ಭತ್ಯೆ ಪರಿಷ್ಕರಣೆ ಕುರಿತು ಸರ್ಕಾರ ಯಾವುದೇ ಪ್ರಸ್ತಾಪ ಮಾಡಿರುವುದು ನೌಕರರಲ್ಲಿ ಬೇಸರ ಉಂಟು ಮಾಡಿದೆ.ರಾಜ್ಯ ಸರ್ಕಾರಿ ನೌಕರರ ಸಂಘವು ನೌಕರರ ನ್ಯಾಯೋ ಚಿತ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ನಡೆಸಲಿ ರುವ ಮುಷ್ಕರದಲ್ಲಿ ನೌಕರರು ಸ್ವಯಂ ಪ್ರೇರಣೆ ಯಿಂದ ಭಾಗವಹಿಸಬೇಕೆಂದು ಮನವಿ ಮಾಡಿ ದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು ಬೇಡಿಕೆ ಈಡೇರಿಕೆಗಾಗಿ ಕರೆ ನೀಡಿರುವ ಈ ಒಂದು ಮುಷ್ಕರದಲ್ಲಿ ಪಾಳ್ಗೊಳ್ಳಿ ಎಂದು ಕರೆ ನೀಡಿದರು.ಇನ್ನೂ ಬಹು ದಿನಗಳ ವಿವಿಧ ಬೇಡಿಕೆ ಗಳ ಈಡೇರಿಕೆಗಾಗಿ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋ ಪಾಧ್ಯಾಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಕಪಲಾಪುರೆ ಮನವಿ ಮಾಡಿದರು.
ವೇತನ, ಭತ್ಯೆ ಪರಿಷ್ಕರಣೆ ಹಾಗೂ ಹಳೆಯ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ನೌಕರರ ಸಂಘವು ಮಾ. 1 ರಿಂದ ನಡೆಸಲು ನಿರ್ಧರಿಸಿ ರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಂಘದ ಸಂಪೂರ್ಣ ಬೆಂಬಲ ಇದೆ.ಎನ್.ಪಿ.ಎಸ್ ರದ್ದತಿ ಗಾಗಿ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬರಲಾಗಿದೆ.ಆದರೆ, ಯಾವುದೇ ಪ್ರಯೋಜನ ವಾಗಿಲ್ಲ.ಹೀಗಾಗಿ ಸಂಘ ಅನಿವಾರ್ಯವಾಗಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದೆ ಎಂದರು.
ಸುದ್ದ ಸಂತೆ ನ್ಯೂಸ್ ಬೀದರ…..