ಧಾರವಾಡ –
ಧಾರವಾಡದಲ್ಲಿ ಕನ್ನಡ ನುಡಿ ಸಂಭ್ರಮ, ರಾಜ್ಯಮಟ್ಟದ ಕವಿಗೊeಷ್ಟಿ, ಕವಿಕಾವ್ಯ ಸಮ್ಮಿಲನ.ಹೌದು ಒಬ್ಬ ಅಗಸ ನೀರಲ್ಲಿ ನಿಂತು ನೀರು,ನೀರು ಎಂದು ಜೀವ ಬಿಟ್ಟ ಹಾಗೇ ಕನ್ನಡದ ನೆಲದಲ್ಲಿ,ಕನ್ನಡದ ಮಣ್ಣಿನಲ್ಲಿ ಇದ್ದು ಕನ್ನಡ ಬೆಳಿ ಯಬೇಕು ಅನ್ನುತ್ತಿದ್ದೇವೆ, ಕನ್ನಡ ಬೆಳೆಯಲು ಅನ್ನುವ ಬದಲಿಗೆ ಕನ್ನಡ ಬಳಸಿ ಅಂದರೆ ಸೂಕ್ತ ಎಂದು ಸಿದ್ದಪ್ಪ ಸಾಬಣ್ಣ ಬಿದರಿ ಹೇಳಿದರು.
ಧಾರವಾಡದಲ್ಲಿ ಕರ್ನಾಟಕ ಸೋಸಿಯಲ್ ಕ್ಲಬ್ ಹಾಗೂ ಚೇತನ ಫೌಂಡೇಶನ್ ವತಿಯಿಂದ ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ಭವನದಲ್ಲಿ, ಜರುಗಿದ ಕನ್ನಡ ನುಡಿ ಸಂಭ್ರಮ ಹಾಗೂ ರಾಜ್ಯ ಮಟ್ಟದ ಕವಿ ಕಾವ್ಯ ಸಮ್ಮಿಲನದ ಅಧ್ಯಕ್ಷತೆಯನ್ನು ವಹಿಸಿ,ಕನ್ನಡ ಭಾಷೆಯನ್ನು ಪ್ರತಿಯೊಬ್ಬರೂ ಬಳಸುವುದು ಅತೀ ಅವಶ್ಯಕ ವಿದೆ ನುಡಿ ಮುತ್ತಿನ ಸರವನ್ನು ತಮ್ಮ ಸಾಹಿತ್ಯದ ಮೂಲಕ ಕನ್ನಡಾಂಬೆಯ ಮುಡಿಗೆ ಅರ್ಪಿಸಿದ ಕನ್ನಡ ನಾಡಿನ ಸಮಸ್ತ ಕವಿ ಸಾಹಿತಿಗಳಾದ ಡಾ, ದ ರಾ ಬೇಂದ್ರ, ಡಾ, ಚೆನ್ನವೀರ ಕಣವಿ, ಡಾ, ವಿ ಸಿ ಐರಸಂಗ ಅಂತಹ ಪವಿತ್ರ ನೆಲದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ ಸಂಘಟಕರಿಗೆ ಧನ್ಯವಾದಗಳನ್ನು ತಿಳಿಸಿದರು
ಸಮಾರಂಭ ಉದ್ಘಾಟಿಸಿ ಮಾತನಾಡಿದ ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ ಕನ್ನಡ ನಾಡಿಗೆ ವಿಶೇಷ ಸ್ಥಾನ ಮಾನ ಗೌರವವಿದೆ, ಗಂಧದ ಗುಡಿ ಈ ನನ್ನ ಕನ್ನಡ ನಾಡು,ಕವಿಗಳ ಬೀಡು ಅನ್ನ ಚಿನ್ನ ನೀಡುವ ಈ ಕನ್ನಡ ನಾಡಿನಲ್ಲಿ ಹುಟ್ಟಿದ ನಾವೇ ಪುಣ್ಯವಂತರು ಎಂದರು, ಅಮೀರ ಬನ್ನೂರ ಪ್ರಕಾಶ ಬಾಳಿಕಾಯಿ ಶ್ರೀಮತಿ ವಿ ವಿ ಹಿರೇಮಠ, ಡಾ, ರತ್ನ ಐರಸಂಗ ಶೇಖರ ಹಾದಿಮನಿ ವೀಣಾ ಹೊಸಮನಿ ಮುಂತಾದವರು ಮಾತನಾಡಿದರು,ಪ್ರಸಾದ ಕುಲಕರ್ಣಿ, ಸಂದೀಪ ಕುಮಾರ ಶೆಟ್ಟಿ, ರೇಣುಕಾ ಮಾಳಗೆ,ಮುರಳೀಧರ ಕೆ ವಿ ರಾಮಚಂದ್ರ ಗುತ್ತೇದಾರ,ಕೆ ಶಾಂತಾ ಬಸವ ರಾಜ, ಬಸವರಾಜ ಮನಗುಂಡಿ, ಎಂ ಆರ್ ಕಬ್ಬೇರ ಸುಜಾತಾ ಪರೋಲಿಕರ, ಪವಿತ್ರ ಕಮ್ಮಾರ ಅಮಜವ್ವ ಭೋವಿ ಅಶ್ವಿನಿ ಅಂಗಡಿ,ಮಹಾದೇವಿ ಬಡಿಗೇರ ಇವರುಗಳಿಗೆ ಕನ್ನಡದ ಹೆಮ್ಮೆಯ ಕನ್ನಡಿಗ ಕನ್ನಡತಿ ಗಂಧದ ಗುಡಿ ನುಡಿಸಿರಿ ಪ್ರಶಸ್ತಿ ಪ್ರದಾನ ಪ್ರಧಾನ ಮಾಡಲಾಯಿತು
ವಿದ್ಯಾ ದೇವಗಿರಿ ಪ್ರಾರ್ಥಿಸಿದರು ಭಾಗ್ಯಶ್ರಿ ರಜಪೂತ ಸ್ವಾಗತಿಸಿದರು ಚಂದ್ರಶೇಖರ ಮಾಡಲಗೇರಿ ಪ್ರಾಸ್ತಾವಿಕ ಮಾತನಾಡಿದರು, ಸಂತೋಷ ಭದ್ರಾಪೂರ ನಿರೂಪಿಸಿದರು, ಚಂದ್ರ ಶೇಖರ ಮಾಡಲಗೇರಿ ವಂದಿಸಿದರು