ESI ಆಸ್ಪತ್ರೆಯಲ್ಲೂ ಕನ್ನಡ ರಾಜ್ಯೋತ್ಸವದ ಸಡಗರ ಸಂಭ್ರಮ – ಕನ್ನಡ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿದ ESI ಆಸ್ಪತ್ರೆಯ ಟೀಮ್…..
68ನೇ ಕನ್ನಡ ರಾಜ್ಯೋತ್ಸವದ ಸಡಗರ ಸಂಭ್ರಮ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಕಂಡು ಬಂದಿತು ನಗರದ ತುಂಬೆಲ್ಲಾ ಕನ್ನಡ ಹಬ್ಬದ ವಾತಾವರಣ ಕಳೆಗಟ್ಟಿದ್ದು ನಗರದೆಲ್ಲೇಡೆ ಸಡಗರ. ದಿಂದ ಈ ಒಂದು ಹಬ್ಬವನ್ನು ಆಚರಣೆ ಮಾಡಿದ್ದು ಕಂಡು ಬಂದಿತು. ಇನ್ನೂ ಈ ಒಂದು ಕನ್ನಡ ರಾಜ್ಯೋತ್ಸವವನ್ನು ESI ಆಸ್ಪತ್ರೆಯಲ್ಲೂ ಆಚರಣೆ ಯನ್ನು ಮಾಡಲಾಯಿತು
ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಈ ಒಂದು ಆಸ್ಪತ್ರೆಯಲ್ಲಿ ಕನ್ನಡ ನುಡಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ರಾಜ್ಯೋತ್ಸವದ ಹಿನ್ನಲೆಯಲ್ಲಿ ಆಸ್ಪತ್ರೆಯನ್ನು ವಿಶೇಷವಾಗಿ ಅಲಂಕಾರವನ್ನು ಮಾಡಲಾಗಿತ್ತು. ಎಲ್ಲಿ ನೋಡಿದಲ್ಲಿ ತಳಿಲು ತೋರಣ ರಂಗೋಲಿ ಬಲೂನ್ ಗಳಿಂದ ಶೃಂಗಾರ ಮಾಡಿರುವ ಚಿತ್ರಣ ವು ಕಂಡು ಬಂದಿತು.ಸಿಬ್ಬಂದಿಗಳು ಕೂಡಾ ವಿಶೇಷವಾದ ಸಾಂಪ್ರದಾಯಿತ ಉಡುಗೆಗಳಲ್ಲಿ ತೋಟ್ಟು ಧ್ವಜಾರೋಹಣವನ್ನು ಮಾಡಿದ್ದು ಕಂಡು ಬಂದಿತು.ಇದರೊಂದಿಗೆ ಈ ಒಂದು ಆಸ್ಪತ್ರೆಯ ತುಂಬೆಲ್ಲಾ ಕನ್ನಡ ಹಬ್ಬದ ಆಚರಣೆ ಕಂಡು ಬಂದಿತು.
ಈ ಮೂಲಕ 68ನೇ ಕನ್ನಡ ರಾಜ್ಯೋತ್ಸವನ್ನು ಮತ್ತು ಕರ್ನಾಟಕ ಎಂದು ನಾಮಕರಣಗೊಂಡ 50ನೇ ವರ್ಷದ ಪ್ರಯುಕ್ತ ಹಳದಿ ಮತ್ತು ಕೆಂಪು ಬಣ್ಣಗಳಿಂದ ಶೃಂಗಾರ ಮಾಡಲಾಗಿತ್ತು ಕನ್ನಡ ಪದ್ಯಗಳನ್ನು ಮಾಡಲಾಯಿತು.ಈ ಒಂದು ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ ಯುನುಸ್ ನಜ್ಮಿ,ಡಾ ಕುಸುಮಾ, ಕಟ್ಟಿ, ಶ್ರೀಮತಿ ಮಂಜುಳಾ,ರಮೇಶ ಕರಬಸಣ್ಣನ ವರ,ಸೇರಿದಂತೆ ಆಸ್ಪತ್ರೆಯ ಸಮಸ್ತ ಸಿಬ್ಬಂದಿ ಗಳು ಪಾಲ್ಗೊಂಡು ಶ್ರದ್ಧೆಯಿಂದ ಕನ್ನಡ ಹಬ್ಬವನ್ನ ಆಚರಿಸಿದ್ದು ಕಂಡು ಬಂದಿತು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..