ಮಾಜಿ CM ಜಗದೀಶ್ ಶೆಟ್ಟರ್ ಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟ ಕರ್ನಾಟಕ ಚಾಣಕ್ಯ ಪ್ರಹ್ಲಾದ್ ಜೋಶಿ – ಕೇಂದ್ರ ಸಚಿವರ ಶಾಕ್ ನಿಂದ ಕಂಗಾಲಾದ ಕೈ ಪಡೆ…..

Suddi Sante Desk
ಮಾಜಿ CM  ಜಗದೀಶ್ ಶೆಟ್ಟರ್ ಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟ ಕರ್ನಾಟಕ ಚಾಣಕ್ಯ ಪ್ರಹ್ಲಾದ್ ಜೋಶಿ – ಕೇಂದ್ರ ಸಚಿವರ ಶಾಕ್ ನಿಂದ ಕಂಗಾಲಾದ ಕೈ ಪಡೆ…..

ಹುಬ್ಬಳ್ಳಿ –

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್​ ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ ಹೌದು ಕಾಂಗ್ರೆಸ್ ಸೇರ್ಪಡೆ ಯಾದ ಕೇವಲ ಹತ್ತೇ ದಿನದಲ್ಲಿ ಹುಬ್ಬಳ್ಳಿ ಘಟಾನುಘಟಿ ನಾಯಕರುಗಳು ಭೇಟಿ ನೀಡಿ ಸರಣಿ ಸಭೆಗಳನ್ನು ಮಾಡಿದ್ದು ಶೆಟ್ಟರ್​ ಸೋಲಿ ಸಲು ಬೇಕಾದ ಎಲ್ಲಾ ರಣತಂತ್ರಗಳನ್ನು ಕೇಂದ್ರ ಸಚಿವರು ಹೆಣೆದಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪಾಲಿಕೆ ಸದಸ್ಯರನ್ನು ಹಾಗೂ ಪಕ್ಷದ ಪದಾಧಿಕಾರಿಗಳನ್ನು ಜಗದೀಶ್ ಶೆಟ್ಟರ್​ ಹಿಂದೆ ಹೋಗದಂತೆ ಹಿಡಿದಿಟ್ಟುಕೊಂಡಿ ದ್ದಾರೆ. ಅಲ್ಲದೇ ಸ್ಥಳೀಯ ಕಾಂಗ್ರೆಸ್​​ ಮುಖಂಡ ರಿಗೆ ಗಾಳ ಹಾಕುತ್ತಿದ್ದು ಅಲ್ಲದೇ ಮೊದಲ ಹಂತ ವಾಗಿ ಹುಬ್ಬಳ್ಳಿ-ಧಾರವಾಡ ಪಾಲಿಕೆ ಮಾಜಿ ಮೇಯರ್​ ಪ್ರಕಾಶ್ ಕ್ಯಾರಕಟ್ಟಿ ಅವರನ್ನು ಬಿಜೆಪಿಗೆ ಸೆಳೆಯುವ ಮೂಲಕ ಜಗದೀಶ್ ಶೆಟ್ಟರ್​ಗೆ ಶಾಕ್ ಕೊಟ್ಟಿದ್ದಾರೆ.

ಇದರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಪರೇಶನ್ ಕಮಲ ಯಶಸ್ವಿಯಾಗಿದೆ.ಹೌದು ಹುಬ್ಬಳ್ಳಿ-ಧಾರವಾಡ ಪಾಲಿಕೆ ಮಾಜಿ ಮೇಯರ್​ ಪ್ರಕಾಶ್ ಕ್ಯಾರಕಟ್ಟಿ ಅವರು ಇಂದು ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಯಾದರು.ಹುಬ್ಬಳ್ಳಿ ಶ್ರೀನಿವಾಸ ಗಾರ್ಡನ್​ಲ್ಲಿ ಸಿಎಂ ಬಸವರಾಜ ಬೊಮ್ಮಾಯಿ,ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವ ಗೋವಿಂದ ಕಾರಜೋಳ ಸಮ್ಮುಖದಲ್ಲಿ ಪ್ರಕಾಶ್ ಕ್ಯಾರಕಟ್ಟಿ ಬಿಜೆಪಿ ಸೇರ್ಪಡೆಯಾದರು.

ಇದೇ ವೇಳೆ ಸದಾಶಿವ ಕಾರಡಗಿ, ಹನುಮಂತ ಸಾ ನಿರಂಜನ್ ಸಹ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಸದರು. ಈ ಮೂಲಕ ಜಗದೀಶ್ ಶೆಟ್ಟರ್​ಗೆ ಚುನಾವಣೆಗೂ ಮುನ್ನವೇ ಶಾಕ್ ಕೊಟ್ಟಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಜಗದೀಶ್ ಶೆಟ್ಟರ್​ ಅವರನ್ನು ಸೋಲಿಸಲು ಪ್ರಲ್ಹಾದ್ ಜೋಶಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಹೈಕಮಾಂಡ್ ನಾಯಕರು ಸಹ ತಣ ತೊಟ್ಟಿದ್ದಾರೆ.

ಹೀಗಾಗಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ ಕ್ಷೇತ್ರ ದಲ್ಲಿ ತಮ್ಮ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಅವರನ್ನು ಗೆಲ್ಲಿಸಿಕೊಳ್ಳಲು ಬಿಜೆಪಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.ಜಾತಿ, ಸಿದ್ಧಾಂತ ಸಂಘ ಪರಿವಾರ, ಹಿಂದುತ್ವ ಹೀಗೆ ನಾನಾ ಅಸ್ತ್ರಗ ಳನ್ನು ಜಗದೀಶ್ ಶೆಟ್ಟರ್ ವಿರುದ್ಧ ಪ್ರಯೋಗಳನ್ನು ನಡೆಸಿದ್ದಾರೆ ಬಿಜೆಪಿ ನಾಯಕರು

ಇನ್ನೂ ಶೆಟ್ಟರ್ ಕಾಂಗ್ರೆಸ್ ಸೇರಿದನ್ನು ಎಷ್ಟರ ಮಟ್ಟಿಗೆ ತಲೆ ಕೆಡಿಸಿಕೊಂಡಿದ್ದಾರೆ ಎಂದರೆ 10 ದಿನದ ಅವಧಿಯಲ್ಲಿ ಬರೋಬ್ಬರಿ 9 ಜನ ರಾಷ್ಟ್ರೀಯ ನಾಯಕರು,ರಾಜ್ಯ ನಾಯಕರು ಹುಬ್ಬಳ್ಳಿಗೆ ಭೇಟಿ ನೀಡಿ ಸ್ಥಳೀಯ ಮುಖಂಡರ ಜೊತೆ ಸರಣಿ ಸಭೆಗಳನ್ನು ಮಾಡಿದ್ದಾರೆ.

ಈ 10 ದಿನದಲ್ಲಿ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಸೇರಿ 8 ಜನ ಹುಬ್ಬಳ್ಳಿ ಯಲ್ಲಿ ಜಗದೀಶ್ ಶೆಟ್ಟರ್​ ಸೋಲಿಸಲು ಸಭೆ ಮೇಲೆ ಸಭೆ ಮಾಡಿ ಚುನಾವಣೆ ತಂತ್ರಗಳನ್ನು ರೂಪಿಸಿದ್ದಾರೆ.

ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಬಳಿಕ ಮೊದಲ ಬಾರಿಗೆ ಬಂದಿದ್ದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಲಿಂಗಾಯತ ಡ್ಯಾಮೇಜ್ ಕಂಟ್ರೋಲ್ ಗೆ ಕೈಹಾಕಿದ್ದರು. ಲಿಂಗಾಯತ ಮತಗಳ ಭೇಟಿ ಮೂಲಕ ನಡ್ಡಾ ಲಿಂಗಾಯತ ನಾಯಕರಿಗೆ ಅನ್ಯಾಯ ಮಾಡಿಲ್ಲ ಎನ್ನುವ ಸಂದೇಶ ರವಾನೆ ಮಾಡಿದ್ದರು.ಅದಾದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಹುಬ್ಬಳ್ಳಿಗೆ ಬಂದು ಶೆಟ್ಟರ್ ಗೆ ಅನ್ಯಾಯ ಆಗಿಲ್ಲ ಎನ್ನುವುದನ್ನು ಸಾರಿ ಸಾರಿ ಹೇಳಿದ್ದರು. ನಡ್ಡಾ,ಅಮಿತ್ ಶಾ,ಬಸವರಾಜ ಬೊಮ್ಮಾಯಿ,ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲು,ಈಶ್ವರಪ್ಪ ರಹಸ್ಯವಾಗಿ ಬಂದು ಸ್ಥಳೀಯ ನಾಯಕರೊಂದಿಗೆ ಚರ್ಚಿಸಿ ಹೋಗಿದ್ದಾರೆ.

ಬಿಎಲ್ ಸಂತೋಷ್, ಕೇಂದ್ರ ಸಚಿವ ಕೈಲಾಸ್ ಚೌಧರಿ, ಸಚಿವೆ ಸ್ಮೃತಿ ಇರಾನಿ ಕೂಡ ಹುಬ್ಬಳ್ಳಿಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನ ಕಾಯಿ ಗೆಲ್ಲಿಸುವಂತೆ ಕರೆ ಕೊಟ್ಟಿದ್ದಾರೆ. ಇನ್ನೂ ಶೆಟ್ಟರ್ ಸೋಲಿಸಲು ರಕ್ತದಲ್ಲಿ ಬರೆದುಕೊಡು ತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶಪಥ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.