ಧಾರವಾಡ –
ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತಿನಿಂದ ಧಾರವಾಡ ದಲ್ಲಿ ನಡೆಯಿತು ರಾಜ್ಯ ಕಾರ್ಯ ಕಾರಣಿ ಸಭೆ – ನೂತನ ಪದಾಧಿಕಾರಿಗಳಿಗೆ ನಡೆಯಿತು ಸನ್ಮಾನ ಗೌರವ ಹೌದು
ಟೀಚರ್ಸ್ ಸೊಸಾಯಿಟಿ ಧಾರವಾಡದಲ್ಲಿ ಜರುಗಿದ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತು ಇದರ ರಾಜ್ಯ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಅವಿರೋಧವಾಗಿ ಪರಿಷತ್ತಿಗೆ ನೂತನ ರಾಜ್ಯಾಧ್ಯಕ್ಷರಾಗಿ ಸಂಗಮೇಶ್ವರ ಖನ್ನಿನಾಯ್ಕರ (ಬೆಳಗಾವಿ ಜಿಲ್ಲೆ) ರವರನ್ನು, ಕಾರ್ಯಾಧ್ಯಕ್ಷರಾಗಿ ರಾಮಪ್ಪ ಹಂಡಿ (ಬಾಗಲಕೋಟಿ ಜಿಲ್ಲೆ)ಯವರನ್ನು ಉಪಾಧ್ಯಕ್ಷ ರಾಗಿ ವಿಜಯಕುಮಾರ (ತುಮಕೂರ ಜಿಲ್ಲೆ) ರವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಆರ್.ಎಸ್.ಹಿರೇಗೌಡರ(ಧಾರವಾಡ ಜಿಲ್ಲೆ) ರವರನ್ನು ಆಯ್ಕೆ ಮಾಡಲಾಯಿತು.
ಪರಿಷತ್ತಿಗೆ ನೂತನವಾಗಿ ಆಯ್ಕೆಯಾಗಿರುವ ಈ ಎಲ್ಲ ಪದಾಧಿಕಾರಿಗಳಿಗೆ ವೈಯಕ್ತಿಕವಾಗಿ ಹಾಗೂ ಪರಿಷತ್ತಿನ ಬಳಗದ ವತಿಯಿಂದ ಅಭಿನಂದನೆಗ ಳನ್ನು ಗುರು ತಿಗಡಿಯವರು ಸಲ್ಲಿಸಿದ್ದಾರೆ
ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರು ಮತ್ತು ಹಾಲಿ ಗೌರವಾಧ್ಯಕ್ಷರಾದ ಗುರು ತಿಗಡಿ ಇವರ ಅಧ್ಯಕ್ಷತೆ ಯಲ್ಲಿ ಜರುಗಿದ ಈ ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಆರ್ ನಾರಾಯಣ ಸ್ವಾಮಿ ಚಿಂತಾಮಣಿ, ಪರಿಷತ್ತಿನ ಕೋಶಾಧ್ಯಕ್ಷರಾದ ಶಂಕರ ಘಟ್ಟಿ ಪೋಷಕರುಗಳಾದ ಗುರು ಪೋಳ, ಸಿ.ಎಂ ಕಿತ್ತೂರ , ಎಚ್.ಎಸ್.ಬಡಿಗೇರ,
ಪರಿಷತ್ತಿನ ಹಾವೇರಿ ಜಿಲ್ಲಾಧ್ಯಕ್ಷರಾದ ಹೆಗ್ಗೇರಿ ಮತ್ತು ಅವರ ಬಳಗ , ರಾಯಚೂರ ಜಿಲ್ಲಾಧ್ಯಕ್ಷ ರಾದ ಪರಸಪ್ಪ ಹಾಗೂ ಅವರ ಬಳಗ ಮತ್ತು ವಿವಿಧ ಹಂತದ/ವಿವಿಧ ಸಂಘಗಳ ಪದಾಧಿಕಾರಿ ಗಳಾದ ಅಕ್ಬರ ಅಲಿ ಸೊಲ್ಲಾಪುರ, ಕಾಶಪ್ಪ ದೊಡವಾಡ, ಎಸ್ .ಬಿ.ಶಿವಶಿಂಪಿ, ಎ.ಎಚ್. ನದಾಫ, ಎಸ್.ಎಸ್ ಧನಿಗೊಂಡ, ಶ್ರೀ ಮತಿ ಗಂಗವ್ವ ಕೋಟಿಗೌಡರ,
ಶ್ರೀಮತಿ ಮಹಾದೇವಿ ದೊಡಮನಿ, ಶ್ರೀಮತಿ ರಂಜನಾ ಪಂಚಾಳ, ಶ್ರೀಮತಿ ಅನಸೂಯಾ ಡಬ್ಬು, ಚಂದ್ರಶೇಖರ ತಿಗಡಿ, ರಾಜು ಮಾಳವಾಡ, ರಮೇಶ್ ಸಣಮನಿ,ಹನುಮಂತ ಡೊಕ್ಕನವರ, ಸೇರಿದಂತೆ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರು, ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು,ವಿವಿಧ ಶಿಕ್ಷಕರ ಸಂಘಗಳ ಪ್ರತಿನಿಧಿಗಳು ಪರಿಷತ್ತಿನ ಪದಾಧಿಕಾರಿಗಳು ಹಾಗೂ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರುಗಳು,
ಗುರು ಬಳಗ ಭಾಗವಹಿಸಿ ಸಭೆಯನ್ನು ಯಶಸ್ವೀಗೊಳಿಸಿದ್ದಕ್ಕಾಗಿ ಈ ಎಲ್ಲ ಸರ್ವ ಮಹನೀಯರಿಗೂ ನಾನು ವೈಯಕ್ತಿಕವಾಗಿ ಪರಿಷತ್ತಿನ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ
ಸಭೆಯ ಆರಂಭದಲ್ಲಿ ಸೇವಾ ನಿವೃತ್ತಿ ಹೊಂದಿದ ಪರಿಷತ್ತಿನ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ನಾರಾಯಣ ಸ್ವಾಮಿ ಚಿಂತಾಮಣಿ ಇವರನ್ನು ಪರಿಷತ್ತಿನ ವತಿಯಿಂದ ಸನ್ಮಾನಿಸಿ, ಗೌರವಿಸ ಲಾಯಿತು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..