ಬೆಂಗಳೂರು –

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀನಾರಾ ಯಣ ರಾಜೀನಾಮೆ ನೀಡಿದ್ದಾರೆ.ಈ ಕುರಿತು ರಾಜ್ಯದ ಎಲ್ಲಾ ಜಿಲ್ಲೆಗಳ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಅಧ್ಯಕ್ಷರು ರಾಜ್ಯ ಪದಾಧಿಕಾರಿಗಳು ಹಾಗೂ ಬ್ಲಾಕ್ ಅಧ್ಯಕ್ಷರುಗಳಿಗೆ ರಾಜೀನಾಮೆ ನೀಡುವ ಸಂದೇಶವನ್ನು ಕಳಿಸಿದ್ದಾರೆ.

ಪ್ರದೇಶ ಕಾಂಗ್ರೆಸ್ ಸಮಿತಿಯ ಸನ್ಮಾನ್ಯ ಅಧ್ಯಕ್ಷ ರಾದ ಡಿ.ಕೆ. ಶಿವಕುಮಾರ್ ಅವರು ದೆಹಲಿಯಿಂದ ದೂರವಾಣಿ ಮೂಲಕ ಮಾತನಾಡಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಅಧ್ಯಕ್ಷರ ಹುದ್ದೆಗೆ ಬೇರೊಬ್ಬರನ್ನು ನೇಮಕ ಮಾಡುವುದಾಗಿ ತಿಳಿಸಿ ದ್ದಾರೆ ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದಿ ದ್ದಾರೆ.ಕಳೆದ ಮೂರುವರೆ ವರ್ಷಗಳ ಅವಧಿಯಲ್ಲಿ ತಮ್ಮಗಳ ಜೊತೆಯಲ್ಲಿ ಪಕ್ಷದ ಸಂಘಟನೆ, ಚುನಾ ವಣೆ,ಕಾರ್ಯಕ್ರಮಗಳು ಹೀಗೆ ಎಲ್ಲಾ ಜಿಲ್ಲೆಗಳ ಪ್ರವಾಸ ಇತ್ಯಾದಿ.ತಾವೆಲ್ಲರೂ ಪಕ್ಷಕ್ಕೊಸ್ಕರ ಯಾರೊಬ್ಬರ ಸಹಾಯವಿಲ್ಲದೆ ಸ್ವಂತ ಖರ್ಚಿನಲ್ಲಿ ತ್ಯಾಗದ ರೂಪದಲ್ಲಿ ಪಕ್ಷದ ಸಂಘಟನೆಗೆ ನನ್ನ ಜೊತೆ ಯಲ್ಲಿ ಕೆಲಸ ಮಾಡಿದ್ದೀರಿ.ತಮಗೆ ಹೃದಯ ತುಂಬಿ ದ ಧನ್ಯವಾದಗಳು ಎಂದಿದ್ದಾರೆ.
ಇನ್ನೂ ಯಾರಾದರೂ ಪದಾಧಿಕಾರಿಗಳು ಅಥವಾ ಜಿಲ್ಲಾ ಅಧ್ಯಕ್ಷರು ರಾಜ್ಯ ಅಧ್ಯಕ್ಷರಾಗಲು ತಮಗೆ ಅಪೇಕ್ಷೆ ಇದ್ದಲ್ಲಿ ಕೂಡಲೇ kpcc ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಮಾಡಬಹುದು.ಮತ್ತೊಮ್ಮೆ ತಮಗೆ ಧನ್ಯವಾದಗಳು ಎಂದು ಸಂದೇಶ ಕಳಿಸಿದ್ದಾರೆ.
ಎಂ.ಡಿ.ಲಕ್ಷ್ಮೀನಾರಾಯಣ (ಅಣ್ಣಯ್ಯ) ಮಾಜಿ ಶಾಸಕರು ತುರುವೇಕೆರೆ ಕ್ಷೇತ್ರ.
ರಾಜ್ಯ ಅಧ್ಯಕ್ಷರು- ಹಿಂದುಳಿದ ವರ್ಗಗಳ ವಿಭಾಗ ಪ್ರ.ಕಾ.ಸ. ಹಾಗೂ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ.