ಬೆಂಗಳೂರು –
ಮಾರ್ಚ್ 1 ರ ಹೋರಾಟಕ್ಕೆ ಬೆಂಬಲ ನೀಡಿದ ಕರ್ನಾಟಕ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘ – ಕರ್ತವ್ಯಕ್ಕೆ ಗೈರಾಗಿ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಶಿಕ್ಷಕರು ರಾಜ್ಯಾಧ್ಯಕ್ಷ ಪವಾಡೆಪ್ಪ ಮಾಹಿತಿ ನೀಡಿದ್ದಾರೆ.
ಹೌದು 7ನೇ ವೇತನ ಆಯೋಗದೊಂದಿಗೆ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ಒತ್ತಾ ಯಿಸಿ ಮಾರ್ಚ್ 1 ರಂದು ಕರೆ ನೀಡಿರುವ ರಾಜ್ಯದ ಸರ್ಕಾರಿ ನೌಕರರ ಹೋರಾಟಕ್ಕೆ ಕರ್ನಾಟಕ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘ ಬೆಂಬಲವನ್ನು ಘೋಷಣೆ ಮಾಡಿದೆ.ನಾಳೆ ನಡೆಯಲಿರುವ ಈ ಒಂದು ಹೋರಾಟಕ್ಕೆ ರಾಜ್ಯದ ಸರ್ಕಾರಿ ಅನದಾನಿತ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಹೇಳಿದ್ದಾರೆ.
ಸುದ್ದಿ ಸಂತೆ ಯೊಂದಿಗೆ ಮಾತನಾಡಿದ ಅವರು ಮಹತ್ವದ ಈ ಒಂದು ಬೇಡಿಕೆಗಳ ಕುರಿತಂತೆ ರಾಜ್ಯ ಸರ್ಕಾರಿ ನೌಕರರ ಸಂಘಟನೆ ಕರೆ ನೀಡಿರುವ ಹೋರಾಟದಲ್ಲಿ ನಮ್ಮ ಸಂಘಟನೆ ಯಿಂದಲೂ ಕೂಡಾ ಪಾಲ್ಗೊಳ್ಳುವುದಾಗಿ ಹೇಳಿದರು.ಸಂಘಟನೆಯ ಕರೆ ಹಿನ್ನಲೆಯಲ್ಲಿ ನಮ್ಮ ಸಂಘಟನೆಯಿಂದಲೂ ಕೂಡಾ ಶಿಕ್ಷಕರು ಕರ್ತವ್ಯಕ್ಕೆ ಗೈರಾಗಿ ಹೋರಾಟದಲ್ಲಿ ಪಾಲ್ಗೊಂಡು ಶಕ್ತಿಯನ್ನು ತುಂಬಲಿದ್ದಾರೆ ಎಂದರು.
ರಾಜ್ಯದ ಮೂಲೆ ಮೂಲೆಗಳಿಂದ ಸ್ವಯಂ ಪ್ರೇರಿತ ವಾಗಿ ಸರ್ಕಾರಿ ಅನುದಾನಿತ ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರು ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದು ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಹೇಳಿದರು.ಇನ್ನೂ ಹೋರಾಟದಲ್ಲಿ ಎಲ್ಲರೂ ಪಾಲ್ಗೊಂಡು ನೌಕರರ ಪ್ರಮುಖ ಬೇಡಿಕೆಗಳ ಕುರಿತಂತೆ ಧ್ವನಿ ಎತ್ತುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಬಡಿಗೇರ,ಕಾರ್ಯಾಧ್ಯಕ್ಷರಾಗಿರುವ ಕೆ ಬಿ ಕುರಹಟ್ಟಿ, ಕೋಶಾಧ್ಯಕ್ಷರಾಗಿರುವ ನಿರ್ಮಲ ಸೋನ್ವಾಲ್ಕರ್ ಸೇರಿದಂತೆ ಹಲವರು ಕರೆ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..