ಬೆಂಗಳೂರು –
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕದಿಂದ ನೂತನ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಸನ್ಮಾನ ಹಾಗೂ ರಾಜ್ಯದ ಶಿಕ್ಷಕಿಯರ ಬೇಡಿಕೆಗಳ ಕುರಿತು ಮನವಿ ಅರ್ಪಿಸಲಾಯಿತು. ಮಾನ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ ವತಿಯಿಂದ ಈ ಒಂದು ಕಾರ್ಯಕ್ರಮ ನಡೆಯಿತು
ಡಾ.ಲತಾ.ಎಸ್.ಮುಳ್ಳೂರ ಸಂಸ್ಥಾಪಕ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನೂತನ ಶಿಕ್ಷಣ ಸಚಿವರಾದ ಮಾನ್ಯ ಮಧು ಬಂಗಾರಪ್ಪನವರನ್ನು ಅವರ ನಿವಾಸದಲ್ಲಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಡಾ.ಲತಾ .ಎಸ್.ಮುಳ್ಳೂರ ಅವರು ಮಾತನಾಡಿ ಶಿಕ್ಷಕಿಯರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.ಹೆಚ್ಚುವರಿ,ಕೋರಿಕೆ ವರ್ಗಾವಣೆಯಲ್ಲಿ ಸೂಕ್ತ ಅವಕಾಶ,ಪರಸ್ಪರ ವರ್ಗಾವಣೆ ಗೆ ಅವಕಾಶ PST ಶಿಕ್ಷಕರಿಗೆ ಬಡ್ತಿ
ಹಳೆ ಪಿಂಚಣಿ ಯೋಜನೆ ಜಾರಿ ನಲಿ-ಕಲಿ ತರಗತಿ 1 ಹಾಗೂ 2 ತರಗತಿ ಗೆ ಮಾತ್ರ ಸೀಮಿತ ಮಾಡ ಬೇಕು ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ಶಿಕ್ಷಕಿಯರ ದಿನಾಚರಣೆ ಯಾಗಿ ಆಚರಿಸಲು ಸರ್ಕಾರದಿಂದ ಆದೇಶ ಮಾಡಿಸಲು ಮನವಿ ಮಾಡಿದರು
ನಿಯಮಿತವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ಪೂರೈಕೆ ಹಾಗೂ ಶಿಕ್ಷಕಿಯರ ತಂದೆ ತಾಯಿಗೂ ಜ್ಯೋತಿ ಸಂಜೀವಿನಿ ಅನ್ವಯಿಸಬೇಕು.ಹಾಗೂ ಒಂದು ಬಾರಿ ಶಿಕ್ಷಕಿಯರು ತಮ್ಮ ಸ್ವಂತ ಜಿಲ್ಲೆಗೆ ವರ್ಗಾವಣೆಯಾಗಿ ಹೋಗಲು ವರ್ಗಾವಣೆ ಕಾಯ್ದೆಯಲ್ಲಿ ಅನುಕೂಲ ಮಾಡಿಕೊಡಬೇಕು ಎಲ್ಲ ವಿಧವಾ ಶಿಕ್ಷಕಿಯರಿಗೆ ಹಾಗೂ. ಮಾರಣಾಂ ತಿಕ ಕಾಯಿಲೆ ಇರುವವರಿಗೆ ಹೆಚ್ಚುವರಿಯಲ್ಲಿ ವಿನಾಯತಿ ನೀಡಬೇಕು
ಇನ್ನೂ ಮುಂತಾದ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು ಸಚಿವರು ಮನವಿಯನ್ನು ಸ್ವೀಕರಿಸಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.ಶ್ರೀಮತಿ ರಾಜೇಶ್ವರಿ ಸಜ್ಜೇಶ್ವರ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಶ್ರೀಮತಿ ಅನಸೂಯಾದೇವಿ ರಾಜ್ಯ ಹಿರಿಯ ಉಪಾಧ್ಯಕ್ಷರು
ಶ್ರೀಮತಿ ಮಮತಾ ಬಂಗಾರಪೇಟ ರಾಜ್ಯ ಪದಾಧಿಕಾರಿಗಳು ರಾಮನಗರ ಜಿಲ್ಲಾಧ್ಯಕ್ಷರಾದ ಶ್ರೀಮತಿ ಡಾ.ರತ್ನಮ್ಮ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪ್ರಭಾವತಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಶ್ರೀಮತಿ ತೇಜೋವತಿ.ಕೆ.ಎಂ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜಯಶ್ರೀ
ಉಪಾಧ್ಯಕ್ಷರಾದ ಶ್ರೀಮತಿ ಕೆ.ಜಯಶ್ರೀ ಶ್ರೀಮತಿ ಅನ್ನಪೂರ್ಣ, ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ರಾದ ಶ್ರೀಮತಿ ಮುನಿಯಮ್ಮ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸುಮಲತಾ,ಖಜಾಂಚಿ ಶ್ರೀಮತಿ ಸವಿತಾ ದೊಡ್ಡಬಳ್ಳಾಪುರ ತಾಲೂಕಿನ ಅಧ್ಯಕ್ಷರಾದ ಶ್ರೀಮತಿ ಮಂಜುಳಾ.ಎನ್.ವಿ, ಸಂಘಟನಾ ಕಾರ್ಯದರ್ಶಿ
ಶ್ರೀಮತಿ ನಂದಿನಿ, ತುಮಕೂರು ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಸಿದ್ದಮ್ಮ ಸೇರಿದಂತೆ ಸಂಘದ ಸರ್ವ ಸದಸ್ಯರು ಹಲವರು ಉಪಸ್ಥಿತರಿದ್ದು ಮೆರಗು ನೀಡಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..