ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆ – ಸರ್ವ ಸದಸ್ಯರ ವಿಶೇಷ ಮಹಾಸಭೆ ನಡೆಯನ್ನು ಯಶಸ್ವಿಗೊಳಿಸಲು ಕರೆ ನೀಡಿದ್ದಾರೆ ವಿಜಯನಗರ ಜಿಲ್ಲೆಯ ಸರ್ಕಾರಿ ನೌಕರರ ಸಂಘಟನೆಯ ನಾಯಕರು…..

Suddi Sante Desk
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆ – ಸರ್ವ ಸದಸ್ಯರ ವಿಶೇಷ ಮಹಾಸಭೆ ನಡೆಯನ್ನು ಯಶಸ್ವಿಗೊಳಿಸಲು ಕರೆ ನೀಡಿದ್ದಾರೆ ವಿಜಯನಗರ ಜಿಲ್ಲೆಯ ಸರ್ಕಾರಿ ನೌಕರರ ಸಂಘಟನೆಯ ನಾಯಕರು…..

ಬೆಂಗಳೂರು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆ ದಿನಾಂಕ 01/10/2023 ಭಾನುವಾರ ಬೆಳಿಗ್ಗೆ 11 ಗಂಟೆಗೆ ವಾಸ್ತವ ಮತ್ತು ವರ್ಚುವಲ್ ಮೂಲಕ ಮಹಾ ವೀರ ಸಮುದಾಯ ಭವನ, ಹಿರೇ ಸಿಂದೋಗಿ ರಸ್ತೆ, ಗೋಶಾಲೆ ಹತ್ತಿರ ಕೊಪ್ಪಳ ದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆ ಯನ್ನು ರಾಜ್ಯಾಧ್ಯ ಕ್ಷರಾದ ಸಿ, ಎಸ್, ಷಡಾಕ್ಷರಿ ಇವರ ಅಧ್ಯಕ್ಷತೆ ಯಲ್ಲಿ ಕರೆಯಲಾಗಿದೆ.

ಸಭೆಯಲ್ಲಿ ಉದ್ದೇಶಿತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉದ್ದೇಶಿತ ಬೈಲಾದ ಉಪ ವಿಧಿಗಳ ತಿದ್ದುಪಡಿಯ ಕರಡು ಮಂಡನೆ ಮಾಡಿ ಸರ್ವ ಸದಸ್ಯರ ಮಹಾಸಭೆಯ ಅನುಮೋದನೆ ಪಡೆದು ಕಾರ್ಯ ರೂಪಕ್ಕೆ ತರುವುದಾಗಿದ್ದು ಈ ಬಗ್ಗೆ ರಾಜ್ಯ ಸಂಘದಿಂದ ಈಗಾಗಲೇ ಪತ್ರಿಕಾ ಪ್ರಕಟಣೆ ಮತ್ತು ಸಾಮಾಜಿಕ ಜಾಲ ತಾಣಗಳ ಮೂಲಕ ಮತ್ತು ನೋಟೀಸು ಗಳ ಮೂಲಕ ಸರ್ವ ಸದಸ್ಯರ ಗಮನಕ್ಕೆ ತರಲಾಗಿದೆ.

ವಿಜಯನಗರ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರು ಸದರಿ ಸಭೆಯಲ್ಲಿ ವಾಸ್ತವ/ವರ್ಚುವಲ್ ಮೂಲಕ ಸಭೆಗೆ ಹಾಜ ರಾಗಿ ಚರ್ಚೆಯಲ್ಲಿ ಭಾಗವಹಿಸುವುದರ ಮೂಲಕ ಯಶಸ್ವಿ ಮಾಡಲು ವಿನಂತಿಸಿದರು ಮತ್ತು ಕೊಟ್ಟೂರು, ಕೂಡ್ಲಿಗಿ, ಹರಪನಹಳ್ಳಿ, ಹಡಗಲಿ, ಮತ್ತು ಹಗರಿಬೊಮ್ಮನಹಳ್ಳಿ ತಾಲೂಕು ಶಾಖೆ ಯ ಅಧ್ಯಕ್ಷರು/ಪದಾಧಿಕಾರಿಗಳು ಈ ಬಗ್ಗೆ ತಮ್ಮ ತಾಲೂಕು ಹಂತಗಳಲ್ಲಿ ಸರ್ವ ಸದಸ್ಯರ ಗಮನಕ್ಕೆ ಪತ್ರಿಕೆ/ಮಾಧ್ಯಮ ಗಳ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕ ಪ್ರಚಾರ ಮಾಡಿ ರಾಜ್ಯ ಸಂಘಕ್ಕೆ ವರದಿ ಮಾಡಲು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.

ಇಂದ.ಜಿ, ಮಲ್ಲಿಕಾರ್ಜುನ ಗೌಡ ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ವಿಜಯನಗರ ಜಿಲ್ಲೆ ಕಡ್ಲಿ, ವೀರಭದ್ರೇಶ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು ಸರ್ವ ಸದಸ್ಯರ ಟೀಮ್.

ಸುದ್ದಿ ಸಂತೆ ನ್ಯೂಸ್ ಹೊಸಪೇಟೆ……

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.