ಬೆಂಗಳೂರು –
ಗೆ,
ಮಾನ್ಯ ಷಡಕ್ಷರಿ ಯವರು
ರಾಜ್ಯಾಧ್ಯಕ್ಷರು,
ಮಾನ್ಯ ಜಗದೀಶ್ ಗೌಡಪ್ಪ ಪಾಟೀಲ್ ರವರು
ಮಹಾಪ್ರಧಾನ ಕಾರ್ಯದರ್ಶಿಗಳು
ಕ.ರಾ.ಸ.ನೌಕರರ ಸಂಘ(ರಿ)ಬೆಂಗಳೂರು
ಈ ಮೇಲಿನ ವಿಷಯವಾಗಿ ಸಮಸ್ತ ಭಾರತ ದೇಶದ ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ 2020 ಜನವರಿಯಿಂದ ಜನವರಿ 2021 ರವರೆಗೆ ತಡೆಹಿಡಿ ದಿದ್ದ 3ಕಂತುಗಳ ಸರ್ಕಾರಿ ನೌಕರರ DA ಯನ್ನು ಹೆಚ್ಚಳ ಮಾಡಿ ಮಂಜೂರು ಮಾಡಿರುತ್ತದೆ

ಹಾಗೇಯೇ ದಿನಾಂಕ-20-07-2021 ರಂದು ಕೇಂದ್ರ ಸರಕಾರವು ತನ್ನ ಕೇಂದ್ರ ಸರಕಾರದ ನೌಕರರಿಗೆ DA ಹೆಚ್ಚಳ ಮಾಡಿರುವ ಅಧಿಕೃತ ಆದೇಶ ಪತ್ರವನ್ನೂ ಹೊರಡಿಸಿರುತ್ತದೆ
ಹಾಗೇಯೇ ಕೇಂದ್ರ ಸರ್ಕಾರ ದಿನಾಂಕ-17-07-2021 ರಂದು ಕೇಂದ್ರ ಸರ್ಕಾರಿ ನೌಕರರ HRAಯನ್ನು ಸಹ ಹೆಚ್ಚಳ ಮಾಡಿರುತ್ತದೆ
ಕೇರಳ ರಾಜ್ಯತನ್ನ ನೌಕರರಿಗೆ DA ಹೆಚ್ಚಳ ಮಂಜೂರು ಮಾಡಿ ತನ್ನ ನೌಕರರಿಗೆ ನೀಡಬೇಕಾದ ಹಿಂಬಾಕಿಯನ್ನು ನೀಡಿದೆ.
ಹಾಗೂ ರಾಜಸ್ತಾನ ರಾಜ್ಯವು ಸಹ ಈಗಾಗಲೇ ತನ್ನ ನೌಕರರಿಗೆ ತಡೆಹಿಡಿದಿದ್ದ DA ಹೆಚ್ಚಳ ಮಾಡಿ ಮಂಜೂರು ಮಾಡಿದೆ.

ದಿನೇ ದಿನೇ ಎಲ್ಲಾ ರೀತಿಯ ವಸ್ತುಗಳ ಬೆಲೆ ಹೆಚ್ಚು ಹೆಚ್ಚು ಆಗುತ್ತಾ ಇದೆ.ಪೆಟ್ರೋಲ್. ಡೀಸಲ್,ಹಾಗೂ ಅಡುಗೆಎಣ್ಣೆ(ಒನ್ ಟೂ ಡಬಲ್)ಬೆಲೆ ಹೆಚ್ಚು ಆಗಿದೆ.
ಹಾಗೇಯೇ ಕೋರೋನಾ ಸಂಕಷ್ಟಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಮನೆಯ ಇತರ ಸದಸ್ಯರ ಅನಾರೋಗ್ಯ ದಿಂದ ತುಂಬ ಖರ್ಚ ವೆಚ್ಚವಾಗಿ ಆರ್ಥಿಕ ಸಮಸ್ಯೆ ಉಂಟಾಗಿದೆ.
ಮಕ್ಕಳ ವಿದ್ಯಾಭ್ಯಾಸ ಕುಟುಂಬ ಸದಸ್ಯರ ಅನಾರೋಗ್ಯ,ಕುಟುಂಬ ನಿರ್ವಹಣೆಗೆ ಹೆಚ್ಚಿನ ಖರ್ಚುಗಳಿಂದ ಕಷ್ಟವಾಗುತ್ತಾ ಇದೆ.
ಸರ್ಕಾರಿ ನೌಕರರು ಕೋರೋನಾ 1ನೇ ಅಲೆ ಹಾಗೂ 2ನೇ ಅಲೆಯಲ್ಲಿ ಸರ್ಕಾರ ವಹಿಸಿದ ಕೋರೋನಾ ನಿರ್ವಹಣೆಯ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಪ್ರತಿ ತಿಂಗಳ ಮನೆಬಾಡಿಗೆ ಹೆಚ್ಚಾಗಿದೆ.
ಕೋರೋನಾ 2ನೇ ಅಲೆಯು ಈಗ ಕಡಿಮೆಯಾಗಿದೆ.ಹಾಗೂ 3ನೇ ಅಲೆಯು ಬರುವ ಮುನ್ಸೂಚನೆಯನ್ನು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ನೀಡಿದೆ.
ಈಗ ಕೋರೋನಾ 3ನೇ ಅಲೆ ಬರುವ ಮುನ್ನ ರಾಜ್ಯ ಸರ್ಕಾರಿ ನೌಕರರ DA ಹಾಗೂ HRA ಯನ್ನು ಹೆಚ್ಚು ಮಾಡದಿದ್ದರೆ ನೌಕರರು ದಿನ ನಿತ್ಯದ ವಸ್ತುಗಳ ಬೆಲೆ ಹೆಚ್ಚಳದಿಂದ ಹಾಗೂ ಮನೆಬಾಡಿಗೆ ಹೆಚ್ಚಳದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ.
ಸರ್ಕಾರಿ ನೌಕರರು ಕೋರೋನಾ 1ನೇ ಅಲೆಯಲ್ಲಿ ಹಾಗೂ 2ನೇ ಅಲೆಯಲ್ಲಿ ನೌಕರರು ಶ್ರಮವಹಿಸಿ ಕೆಲಸ ನಿರ್ವಹಣೆ ಮಾಡಿದ್ದಾರೆ.
ಅನೇಕ ನೌಕರರು ಕೋರೋನಾ ದಿಂದ ತಮ್ಮ ಪ್ರಾಣ ಕಳೆದುಕೊಂಡದ್ದನ್ನು ಈ ಸಂದರ್ಭದಲ್ಲಿ ಸ್ಮರಿಸ ಬಹುದು.
ಹಾಗೂ ಅನೇಕ ನೌಕರರು ಕೋರೋನಾ ಸೋಂಕಿಗೆ ಒಳಗಾಗಿ ಚೇತರಿಸಿ ಕೊಂಡರೂ ಸಹ ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುತಿದ್ದಾರೆ.
ಕೋರೋನಾ 3ನೇ ಅಲೆಯು ಬರುವುದಕ್ಕಿಂತ ಮುಂಚಿತ ವಾಗಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಸಂಖ್ಯೆ ಹೆಚ್ಚಳ,ಆಕ್ಸಿಜನ್ ಶೇಖರಣೆ, ವೈದಕೀಯ ಸೌಲಭ್ಯ ಹಾಗೂ ಜನರಿಗೆ ಲಸಿಕೆ ನೀಡುವಿಕೆ ಹೆಚ್ಚಳ ಮಾಡುತ್ತಾ ಇದ್ದಾರೆ.
ಇದೇ ರೀತಿ ನೌಕರರ DA ಹಾಗೂ HRA ಹೆಚ್ಚಳ ಮಾಡುವುದರ ಮೂಲಕ ಸರ್ಕಾರಿ ನೌಕರರ ಆತ್ಮಸೈರ್ಯವನ್ನು ಹೆಚ್ಚಿಸಬೇಕಾಗಿದೆ.
ಆದ್ದರಿಂದ ಎಲ್ಲಾ ರೀತಿಯ ಸಮಸ್ಯೆಗಳನ್ನು ಕರ್ನಾಟಕ ಘನ ಸರ್ಕಾರಕ್ಕೆ ಪತ್ರ ಬರೆದು ಮನವರಿಕೆ ಮಾಡಿ ಕೇಂದ್ರಸರ್ಕಾರವು DA ಹೆಚ್ಚಳ ಮಾಡಿ ಅಧಿಕೃತವಾದ ಆದೇಶ ಪತ್ರವನ್ನೂ ದಿನಾಂಕ 20-07-2021 ರಂದು ಹೊರಡಿಸಿರುವುದರಿಂದ ತಕ್ಷಣ ಕರ್ನಾಟಕ ರಾಜ್ಯಸರ್ಕಾರಿ ನೌಕರರಿಗೆ ಜನವರಿ 2020 ರಿಂದ ತಡೆಹಿಡಿದಿರುವ DA ಯನ್ನು ಹೆಚ್ಚಾಳ ಮಾಡಿಸಿ ಮಂಜೂರು* ಮಾಡಿಸಬೇಕೇಂದು ಕರ್ನಾಟಕ ರಾಜ್ಯ ಸಮಸ್ತ ಸರ್ಕಾರಿ ನೌಕರರು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ
ಇಂತಿ ತಮ್ಮ ಅಭಿಮಾನಿಗಳ ಬಳಗದ
ಮಹೇಶ ಬೂದನೂರು ಮಂಡ್ಯ
G.ರಂಗಸ್ವಾಮಿ ಮಧುಗಿರಿ
ಅರುಣ್ ಹುಡೇದ್ ಗೌಡ್ರು(ಉತ್ತರ ಕರ್ನಾಟಕ)
ಮಹಾಂತ ಗೌಡ ಪಾಟೀಲ್
ಸಿದ್ದಲಿಂಗ ಮೂರ್ತಿ ತುಮಕೂರು
ಸತೀಶ್ ಚಿತ್ರದುರ್ಗ
ರಾಜಶೇಖರ ಗೌರಿಬಿದನೂರು
ಸಿದ್ದೇಶ್ವರಪ್ಪ ದಾವಣಗೆರೆ
ಮಹೇಶ ನಂಜನಗೂಡು
ಹಾಗೂ ಸಮಸ್ತ ಅಭಿಮಾನಿಗಳ ಬಳಗ.