ಬೀದರ್ –
ಸರಕಾರಿ ನೌಕರ ಸಂಘದ ನೂತನ ಪ್ರತಿನಿಧಿಗಳಿಗೆ ಬೀದರ್ ನಲ್ಲಿ ಸನ್ಮಾನಿಸಿ ಗೌರವಿಸಲಾಯಿತು ಹೌದು ಕರ್ನಾಟಕ ರಾಜ್ಯ ಪ್ರೌಢಶಾಲಾ ಮುಖ್ಯೋಪಾದ್ಯಯರ ಸಂಘ ಹಾಗೂ ಜಿಲ್ಲಾ ಅನುದಾನಿತ ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಮುಕ್ತಿ ಮಂದಿರದಲ್ಲಿ ಈ ಒಂದು ಕಾರ್ಯಕ್ರಮ ನಡೆಯಿತು
ಸರಕಾರಿ ನೌಕರರ ಸಂಘದ ನೂತನವಾಗಿ ಆಯ್ಕೆ ಯಾದ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಚುನಾಯಿತರಾದ ರಾಜಶೇಖರ್ ಮಂಗಲಗಿ, ಬಸವರಾಜ್ ಜಕ್ಕ ಪಾಂಡುರಂಗ ಬೆಲ್ದಾರ್, ಎಂ.ಡಿ.ಶಾಹಬೂದಿನ್, ಮನೋಹರ್ ಕಾಶಿ ಅವರನ್ನು ಸನ್ಮಾನಿಸಲಾಯಿತು.ಅನುದಾನಿತ ಪ್ರೌಢಶಾಲೆ ಮುಖ್ಯ ಗುರುಗಳ ಸಂಘದ ಜಿಲ್ಲಾಧ್ಯಕ್ಷರಾದ ವಿಜಯಕುಮಾರ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಮುಖ್ಯಗುರುಗಳ ಸಂಘದ ಜಿಲ್ಲಾಧ್ಯಕ್ಷರಾದ ಪ್ರಶಾಂತ ರಾಗ ಅವರು ವಹಿಸಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಸಿದ್ರಾಮ್ ನಿಜಾಂಪುರ ಸ್ವಾಗತಿಸಿದರು. ಲಕ್ಷ್ಮಣ್ ಪೂಜಾರ್ ನಿರೂಪಿಸಿದರು. ಸೈಯದ್ ಸಲಾವುದ್ದೀನ್ ವಂದಿಸಿದರು.ಕಾರ್ಯಕ್ರಮದಲ್ಲಿ ಸಂಘದ ಉಪಾ ಧ್ಯಕ್ಷರಾದ ಉಮೇಶ್ ಪಾಟೀಲ್, ಸಂಘಟನಾ ಕಾರ್ಯದರ್ಶಿಗಳಾದ ಪ್ರಲಾದ್ ತಳಗಟ್ಕರ್, ಬಳಿರಾಮ್ ಕುರ್‌ನಾಳೆ, ಬಾಲಾಜಿ ಪುಲ್ಲೆ, ರಾಜ ಕುಮಾರ್ ಕುಲಕರ್ಣಿ, ಮಹಮದ್ ಮಿಜ್ಬಾ ಹಾಗೂ ಇನ್ನೂ ಹಲವಾರು ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೀದರ್…..





















