ಹುಬ್ಬಳ್ಳಿ –
ಕರ್ನಾಟಕ ರಾಜ್ಯ ನದಾಫ್,ಪಿಂಜಾರ ಸಂಘದಿಂದ ನಾಳೆ ಭಾವೈಕ್ಯತೆಯ ಅರ್ಥಪೂರ್ಣ ಕಾರ್ಯಕ್ರಮ – ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸದವರಿಗೆ ನಡೆಯಲಿದೆ ಸನ್ಮಾನ ಗೌರವ……ಹುಬ್ಬಳ್ಳಿಯ ಆನಂದ ನಗರದ ಶಾದಿ ಮಹಲ್ ನಲ್ಲಿ ಕಾರ್ಯಕ್ರಮ ಹೌದು
ಗೌರಿ ಗಣೇಶ ಹಬ್ಬ ಮತ್ತು ಈದ್ ಮೀಲಾದ್ ಹಬ್ಬದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ನದಾಫ್ ,ಪಿಂಜಾರ ಸಂಘವು ಹುಬ್ಬಳ್ಳಿಯಲ್ಲಿ ವಿಶೇಷವಾದ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದೆ.ಹೌದು ಸೆಪ್ಬಂಬರ್ 14 ರಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ರಾಜ್ಯ ನದಾಫ ಮತ್ತು ಪಿಂಚಾರ ಸಂಘವು ಈ ಒಂದು ಭಾವೈಕ್ಯತೆಯ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ
ಹುಬ್ಬಳ್ಳಿ ತಾಲ್ಲೂಕು ಶಹರ ಮತ್ತು ಗ್ರಾಮೀಣ ಘಟಕ ದಿಂದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಇನ್ನೂ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಭಾವೈಕ್ಯತೆ ಗಾಗಿ ಆಯೋಜನೆ ಮಾಡಲಾಗಿದ್ದು ಇದೇ ವೇಳೆ ಜಿಲ್ಲೆಯ ಪತ್ರಕರ್ತರಿಗೆ ಸನ್ಮಾನ ಮತ್ತು ಗೌರವ ಕಾರ್ಯಕ್ರಮವನ್ನು ಕೂಡಾ ಆಯೋಜನೆ ಮಾಡಲಾಗಿದೆ.ಕಾರ್ಯಕ್ರಮದ ಉದ್ಘಾಟಕರಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿರುವ ಡಾ ಈಶ್ವರ ಉಳ್ಳಾಗಡ್ಡಿ ಯವರು ಮಾಡಲಿದ್ದು
ಸಮಾಜದ ಹುಬ್ಬಳ್ಳಿ ಶಹರ ಘಟಕದ ಅಧ್ಯಕ್ಷರಾಗಿರುವ ಖದಾನಸಾಬ ಗೊಗ್ಗಲ ಅಧ್ಯಕ್ಷತೆಯನ್ನು ವಹಿಸಲಿದ್ದು ಇದರೊಂದಿಗೆ ಹಲವಾರು ಗಣ್ಯರು ಸಮಾಜದ ಮುಖಂಡರು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದು ಸರ್ವರೂ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿ ಸುವಂತೆ ಸಂಘದ ಸರ್ವ ಸದಸ್ಯರು ಕೋರಿದ್ದಾರೆ.
ಶನಿವಾರ ಬೆಳಿಗ್ಗೆ 10-30 ಕ್ಕೆ ಆನಂದ ನಗರದಲ್ಲಿರುವ ಹೂಬಳ್ಳಿ ಶಾದಿ ಮಹಲ ಸೈಯ್ಯದ ಫತೇಶಾವಲಿ ನಗರದಲ್ಲಿ ನಡೆಯವಲಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……






















