ತುಮಕೂರು –
ಕೋವಿಡ್ ಮಹಾಮಾರಿಗೆ ಜಗವೇ ತಲ್ಲಣಗೊಂಡಿ ದ್ದು ಸಾವು ನೋವುಗಳೇ ಹೆಚ್ಚುತ್ತಿದೆ.ಕೊರೊನಾ ಅಟ್ಟಹಾಸಕ್ಕೆ ಇಂದು ದಕ್ಷ ಮಹಿಳಾ ಶಿಕ್ಷಣ ಅಧಿಕಾರಿ ಯೊಬ್ಬರು ರಾಜ್ಯದಲ್ಲಿ ಸಾವಗೀಡಾಗಿದ್ದಾರೆ.ಹೌದು ಶ್ರೀಮತಿ ಕಾಮಾಕ್ಷಿ.ಕೆ.ಎಂ ಮೃತ ಅಧಿಕಾರಿಯಾಗಿ ದ್ದಾರೆ.ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದ ಅವರು ಇಂದು ಕೊನೆ ಉಸಿರೆಳೆದಿದ್ದಾರೆ. ಈ ಹಿಂದೆ ಬಾಗಲಕೋಟೆ ಜಿಲ್ಲೆ ಹಾಗೂ ತುಮಕೂ ರು (ದಕ್ಷಿಣ) ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಯ ಉಪನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ ದಕ್ಷ ಪ್ರಾಮಾಣಿಕ ಆಡಳಿತದಿಂದ ಜಿಲ್ಲೆಗೆ ಹೆಸರಾಗಿದ್ದರು. ಕಳೆದ ವರ್ಷವಷ್ಟೇ ಚಿತ್ರದುರ್ಗ ಜಿಲ್ಲೆಯ ಸಿ.ಟಿ.ಇ ಶಿಕ್ಷಣ ಸಂಸ್ಥೆಗೆ ಹಿರಿಯ ಪ್ರವಾಚಕರಾಗಿ ವರ್ಗಾವಣೆ ಗೊಂಡು ಕೆಲಸ ನಿರ್ವಹಿಸುತ್ತಿದ್ದರು.ಅಲ್ಲಿಯೂ ಸಹ ಶಿಕ್ಷಕರ ಆನ್‌ಲೈನ್ ನಿಷ್ಟಾ ತರಬೇತಿಯ ಜವಾಬ್ದಾರಿ ಯನ್ನು ಬಹಳ ಅಚ್ಚುಕಟ್ಟಾಗಿ ನಿಬಾಯಿಸಿ ಎಲ್ಲ ಶಿಕ್ಷಕರ ಮನದಲ್ಲಿ ನೆಲೆಯಾಗಿ ನಿಂತವರಾಗಿದ್ದರು. ದುರಾದೃಷ್ಟವಶಾತ್ ಇಂದು ಕೋರೊನಾ ಮಹಾ ಮಾರಿಗೆ ಸಿಲುಕಿ ಮರಣ ಹೊಂದಿದ್ದಾರೆ.

ಇನ್ನೂ ಮೃತರಾದ ಮಹಿಳಾ ಅಧಿಕಾರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷರರ ಸಂಘದ ರಾಜ್ಯಾ ಧ್ಯಕ್ಷ ಶಂಭುಲಿಂಗಗೌಡ್ರು ಪಾಟೀಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ,ಸೇರಿದಂತೆ ಸಂಘದ ಸರ್ವ ಸದಸ್ಯರು ಅಗಲಿದ ಮಹಾನ್ ಶಿಕ್ಷಕ ಶಿಕ್ಷಣ ಪ್ರೇಮಿಗೆ ಭಾವಪೂರ್ಣ ನಮನವನ್ನು ಸಲ್ಲಿಸಿ ದ್ದಾರೆ