ಬೆಂಗಳೂರು –
ಅಂತೂ ಇಂತೂ ಕೊನೆಗೂ ರಾಜ್ಯದಲ್ಲಿ ಕಳೆದ ಹಲ ವಾರು ದಿನಗಳಿಂದ ನಿರೀಕ್ಷೆಯಲ್ಲಿದ್ದ ರಾಜ್ಯ ದಲ್ಲಿನ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ ಸಿಗುತ್ತಿದೆ.ಶಿಕ್ಷಕರ ವರ್ಗಾವಣೆಗೆ ಈಗಾಗಲೇ ರಾಜ್ಯಪಾಲರು ಅಂಕಿತ ನೀಡಿದ್ದು ಇನ್ನೇನು ವರ್ಗಾವಣೆ ಆರಂಭವಾಗೊದು ಅಷ್ಟೇ ಬಾಕಿ ಇದೆ.ಹೌದು ಇನ್ನೇನು ಶಿಕ್ಷಕರ ವರ್ಗಾವ ಣೆ ಆರಂಭವಾಗಲಿದ್ದು ಇದನ್ನು ಶಿಕ್ಷಕ ಮಿತ್ರ ಮೊಬೈ ಲ್ ಆ್ಯಪ್ ಮೂಲಕ ಶಿಕ್ಷಕರ ವರ್ಗಾವಣೆ ಮಾಡು ವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯ ಮಾಡಿದೆ.

ಹೌದು ಒಂದು ಕಡೆ ದಿನದಿಂದ ದಿನಕ್ಕೆ ಕೋವಿಡ್ ಆರ್ಭಟ ಮತ್ತೊಂದು ಕಡೆ ಸಧ್ಯ ಶಿಕ್ಷಕರ ವರ್ಗಾವಣೆ ವಿಚಾರ ಹೀಗಾಗಿ ಈ ಕೂಡಲೇ ಶಿಕ್ಷಕರ ವರ್ಗಾವಣೆ ಯನ್ನು ಈ ಬಾರಿ ಶಿಕ್ಷಕ ಮಿತ್ರ ಮೊಬೈಲ್ ಆ್ಯಪ್ ಮೂಲಕವೇ ಕೌನ್ಸಿಲಿಂಗ್ ಮಾಡುವಂತೆ ಸಂಘದ ಒತ್ತಾಯಿಸಿದೆ.ಈಗಾಗಲೇ ಈ ಒಂದು ಆ್ಯಪ್ ಜಾರಿ ಯಲ್ಲಿದ್ದು ಶೀಘ್ರದಲ್ಲೇ ಇದನ್ನು ಮತ್ತೆ ಆರಂಭಿಸು ವಂತೆ ಒತ್ತಾಯಿಸಿದರು.

ಈ ಕುರಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇ ಖರ ನುಗ್ಗಲಿ ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದು ಒತ್ತಾಯ ಮಾಡಿ ದರು.

ಇದೇ ವೇಳೆ ರಾಜ್ಯದ ಎಲ್ಲಾ ಶಿಕ್ಷಕರಿಗೆ ಈ ಕೂಡಲೇ HRMS ಸೌಲಭ್ಯ ಕೊಡುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯ ಮಾಡಿ ದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರ ಶೇಖರ ನುಗ್ಗಲಿ ಹೇಳಿದರು

ಒಟ್ಟಾರೆ ಶೀಘ್ರದಲ್ಲೇ ಶಿಕ್ಷಕರ ವರ್ಗಾವಣೆ ಮಾಡಿ ಎಂದು ಬೇಡಿಕೆ ಇಟ್ಟ ಸಂಘದ ಒತ್ತಡಕ್ಕೆ ಮಣಿದು ಈಗ ಮತ್ತೆ ಶಿಕ್ಷಕರ ಹಿತದೃಷ್ಟಿಯಿಂದ ವರ್ಗಾವಣೆ ಯನ್ನು ಆ್ಯಪ್ ಮೂಲಕ ಮಾಡಿ ಹಾಗೇ ಇನ್ನೂ ಕೆಲವೊಂದಿಷ್ಟು ಬೇಡಿಕೆ ಈಡೇರಿಸಲು ಆಗ್ರಹ ಮಾಡಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯ ನಿಜವಾಗಿಯೂ ಮೆಚ್ಚುವಂತದ್ದು
