ವಿಜಯಪುರ –
ಸಧ್ಯ ಎಲ್ಲಿ ನೋಡಿದರೂ ಕೇಳಿದರು ಮಹಾಮಾರಿ ಕರೋನ ಆರ್ಭಟ ಅಬ್ಬರ.ದಿನದಿಂದ ದಿನಕ್ಕೆ ಈ ಒಂದು ಕೋವಿಡ್ ಹೆಚ್ಚಾಗುತ್ತಿದೆ ಇದರ ನಡುವೆ ಈಗಷ್ಟೇ ಮತ್ತೊಂದು ಬ್ಲಾಕ್ ಫಂಗಸ್ ಆರಂಭ ಗೊಂಡಿದ್ದು ಹೀಗಾಗಿ ಇಂತಹ ಸಂದರ್ಭದಲ್ಲಿ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಸಿಗೊದು ಇರಲಿ ಬೆಡ್ ಗಾಗಿ ಸಾಕಷ್ಟು ಪ್ರಮಾಣದಲ್ಲಿ ಪರದಾಟ ಸಮಸ್ಯೆ ಕಂಡು ಬರುತ್ತದೆ. ಇದನ್ನು ಅರಿತ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿಜಯಪುರ ಜಿಲ್ಲಾ ಘಟಕ ಶಿಕ್ಷಕರಿ ಗಾಗಿ ವಿಶೇಷವಾದ ಮನವಿ ಮಾಡಿಕೊಂಡಿದ್ದಾರೆ

ಹೌದು ಬೆಡ್ ಸಿಗಲಾರದ ಇಂತಹ ಕಠಿಣ ಪರಿಸ್ಥಿತಿ ಯಲ್ಲಿ ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಜಿ ಬಿ ಗೌಡರ ಪ್ರಧಾನ ಕಾರ್ಯದರ್ಶಿ ಜಗದೀಶ್ ಬೋಳಸೂರ ನೇತೃತ್ವದಲ್ಲಿ ಜಿಲ್ಲೆಯ ಸರ್ವ ಸದಸ್ಯರು ಒಮ್ಮತದ ತೀರ್ಮಾನವನ್ನು ತಗೆದುಕೊಂಡು ವಿಜಯಪುರದ ಬಿಎಲ್ ಡಿಇ ಆಸ್ಪತ್ರೆಯಲ್ಲಿ ಶಿಕ್ಷಕರಿಗಾಗಿ ಒಟ್ಟು ಬೆಡ್ ಗಳಲ್ಲಿ ಶೇಕಡಾ 20% ಮೀಸಲಿಡುವಂತೆ ಮಾಜಿ ಸಚಿವ ಎಮ್ ಬಿ ಪಾಟೀಲ್ ರಿಗೆ ಪತ್ರ ಬರೆದು ಒತ್ತಾಯವನ್ನು ಮಾಡಿದ್ದಾರೆ

ಎಮ್ ಬಿ ಪಾಟೀಲ ಶಾಸಕರು ಮಾಜಿ ಸಚಿವರು ಮತ್ತು ಅದ್ಯಕ್ಷರು BLDE ಸಂಸ್ಥೆ ವಿಜಯಪುರ ಅವರಿಗೆ ವಿಜಯಪುರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕದಿಂದ ರಾಜ್ಯ ಕೋಶಾ ಧ್ಯಕ್ಷರಾದ ಸುರೇಶ ಶೆಡಶ್ಯಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಬೋಳಸೂರ ಹಾಗೂ ಮಾನ್ಯ DDPI ಎನ್ ವ್ಹಿ ಹೊಸೂರ ಅವರ ನೇತ್ರತ್ವ ದಲ್ಲಿ ಶಿಕ್ಷಕರಿಗೆ BLDE ಆಸ್ಪತ್ರೆಯಲ್ಲಿ ಶಿಕ್ಷಕರಿಗೆ 20% ಆಕ್ಸಿಜನ್ ಬೆಡ್ ಮಿಸಲಿರಿಸಿ ವಿಶೇಷ ಚಿಕಿತ್ಸೆ ನೀಡಿ ಶಿಕ್ಷಕರ ಪಾಲಿನ ದೇವರಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ

ಮಾನ್ಯ ಶಾಸಕರ ವಿಶೇಷವಾಗಿ ಸ್ಪಂದಿಸಿ ಇದರ ಬಗ್ಗೆ ಸೂಕ್ತ ಕ್ರಮಕೈಕೊಳ್ಳುತ್ತೇನೆ ಭರವಸೆಯನ್ನು ಸಂಘ ಕ್ಕೆ ನೀಡಿದ್ದಾರಂತೆ.ಇದೇ ಸಂದರ್ಭದಲ್ಲಿ NGO ಕೋಶಾಧ್ಯಕ್ಷರಾದ ಜುಬೇರ ಕೆರೂರ, ಅನುದಾನಿತ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ರಾದ ಶಿವಾನಂದ ಗುಡ್ಡೋಡಗಿ, ಅನುದಾನಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಿವಾನಂದ ಹೀರೆಕುರಬರ ಅವರು ಉಪಸ್ಥಿತಿ ಇದ್ದರು.ಇನ್ನೂ ಈ ಒಂದು ವಿಚಾರದಲ್ಲಿ ಒಳ್ಳೆಯ ತೀರ್ಮಾನವನ್ನು ತಗೆದುಕೊಂಡಿರುವ ಜಿಲ್ಲೆಯ ಸಂಘದ ಕಾರ್ಯ ವನ್ನು ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಜಿಲ್ಲೆಯ ಸರ್ವ ಸದಸ್ಯರನ್ನು ಅಭಿನಂದಿಸಿ ಈ ಒಂದು ವಿಚಾರ ಕುರಿತು ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ಮಾತನಾಡಿದ್ದಾರೆ.

ಇದೇ ವೇಳೆ ಜಿಲ್ಲಾಧಿಕಾರಿಗಳಿಗೂ ಕೂಡಾ ಮನವಿ ನೀಡಿ ಶಿಕ್ಷಕರಿಗಾಗಿ ವಿಶೇಷವಾದ ಕೋವಿಡ್ ಕೇರ್ ಕೇಂದ್ರ ಆರಂಭ ಮಾಡುವಂತೆ ಒತ್ತಾಯವನ್ನು ಮಾಡಿದ್ದಾರೆ.ಒಟ್ಟಾರೆ ಸಂಘದ ಸರ್ವ ಸದಸ್ಯರ ಈ ಒಂದು ಕಾರ್ಯ ನಿಜವಾಗಿಯೂ ಮೆಚ್ಚುವಂತದ್ದು