ಮುನವಳ್ಳಿ –
ಕರುನಾಡ ಕಣ್ಮಣಿ ವಿರೇಶ ಬ್ಯಾಹಟ್ಟಿಯವರಿಗೆ ಮುನವಳ್ಳಿಯಲ್ಲಿ ಗೌರವ ಅಭಿನಂದನಾ ಸಮಾರಂಭ – ಸಮಸ್ತ ಅಭಿಮಾನಿ ಬಳಗದಿಂದ ಕಾರ್ಯಕ್ರಮ ಆಯೋಜನೆ
ಸರಳ ಸಜ್ಜನಿಕೆಯ ವ್ಯಕ್ತಿತ್ವದ ಸದಾ ನಗುಮೋಗದಿಂದ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಕೊಡುಗೈದಾನಿ ಎಂದೇ ಹೆಸರಾಗಿರುವ ವಿರೇಶ ಬ್ಯಾಹಟ್ಟಿಯವರಿಗೆ ಪ್ರತಿಷ್ಠಿತ ಪವರ್ ಟಿವಿಯ ಕರುನಾಡ ಕಣ್ಮಣಿ ಪ್ರಶಸ್ತಿ ಲಭಿಸಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಒಂದು ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಇನ್ನೂ ನಾಡಿನ ಮನೆ ಮಾತಾಗಿರುವ ಪವರ್ ಟಿವಿಯ ಈ ಒಂದು ಪ್ರಶಸ್ತಿಯ ಲಭಿಸಿದ ಹಿನ್ನಲೆಯಲ್ಲಿ ಕರುನಾಡ ಕಣ್ಮಣಿ ವಿರೇಶ ಬ್ಯಾಹಟ್ಟಿಯವರಿಗೆ ಅಭಿಮಾನಿ ಬಳಗದವರು ಅಭಿಮಾನದಿಂದ ಅಭಿನಂದನಾ ಸಮಾರಂಭವನ್ನು ಆಯೋಜನೆ ಮಾಡಿದ್ದಾರೆ.
ಸವದತ್ತಿ ತಾಲ್ಲೂಕಿನ ಮುನವಳ್ಳಿ ಪಟ್ಟಣದಲ್ಲಿ ಸಮಸ್ತ ಮುನವಳ್ಳಿಯ ಅಭಿಮಾನಿ ಬಳಗದಿಂದ ಈ ಒಂದು ಗೌರವ ಅಭಿನಂದನಾ ಸಮಾರಂಭವನ್ನು ಆಯೋಜನೆ ಮಾಡಲಾಗಿದೆ.ಪಟ್ಟಣದ ಕಾಳಿಕಾದೇವಿ ದೇವಸ್ತಾನದಲ್ಲಿ ನವಂಬರ್ 11 ರಂದು ಸಂಜೆ 6 ಗಂಟೆಗೆ ಅದ್ದೂರಿ ಯಾದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು
ವಿವಿಧ ಮಠಾಧೀಶಕರು ಕ್ಷೇತ್ರದ ಶಾಸಕರು ಪಟ್ಟಣದ ಗುರು ಹಿರಿಯರು ಅಭಿಮಾನಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಕರುನಾಡ ಕಣ್ಮಣಿ ಪ್ರಶಸ್ತಿಯನ್ನು ಪಡೆದುಕೊಂಡಿರುವ ವಿರೇಶ ಬ್ಯಾಹಟ್ಟಿಯವರಿಗೆ ಅಭಿಮಾನದ ಅಭಿನಂದನೆಗ ಳೊಂದಿಗೆ ಗೌರವ ಸನ್ಮಾನ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅಭಿಮಾನಿ ಬಳಗದವರು ಕರೆ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಮುನವಳ್ಳಿ…..






















