ಬೆಂಗಳೂರು –
ಕೆಎಎಸ್ ಅಧಿಕಾರಿಯೊಬ್ಬರ ಮೇಲೆ ಕೊಲೆ ಆರೋಪವೊಂದು ಕೇಳಿ ಬಂದಿದೆ. ನನ್ನ ಕೊಲೆಗೆ ಪತಿಯೇ ಕಾರಣವೆಂದು ಅಧಿಕಾರಿಯ ಪತ್ನಿ ಸಧ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಹೌದು ಕೆಎಎಸ್ ಅಧಿಕಾರಿ ಜಿ.ಟಿ. ದಿನೇಶ್ ಕುಮಾರ್ ವಿರುದ್ಧ ಇಂಥಹದೊಂದು ಆರೋಪ ಕೇಳಿ ಬಂದಿದೆ. ಮಂಗಳೂರಿನ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಆಯುಕ್ತರಾಗಿದ್ದಾರೆ ದಿನೇಶ್.
ಇವರಿಂದಲೇ ನನ್ನ ಕೊಲೆಗೆ ಯತ್ನ ನಡೆದಿದೆ ಎಂದು ಇವರ ಪತ್ನಿ ದೀಪ್ತಿ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಸಿದ್ದಾರೆ.
ನನ್ನನ್ನ ಕೊಲ್ಲಲು ಸಂಚು ರೂಪಿಸಿ ಮಾತ್ರೆ ಬೆರೆಸಿದ್ದ ನೀರನ್ನು ನನ್ನ ಗಂಡನೇ ಕುಡಿಸಿದ್ದಾನೆ ಎಂದು ಕೆಎಎಸ್ ಅಧಿಕಾರಿ ಪತ್ನಿ ಕೆ.ಪಿ.ದೀಪ್ತಿ ದೂರು ನೀಡಿದ್ದಾರೆ.
ಸದ್ಯ ಬಿಜಿಎಸ್ ಆಸ್ಪತ್ರೆಯಲ್ಲಿ ದೀಪ್ತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಸಂತೆಬೆನ್ನೂರು ನಿವಾಸಿ ದಿನೇಶ್ ಕುಮಾರ್ ಜೊತೆ ದೀಪ್ತಿ 2015ರಲ್ಲಿ ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ ದಿನೇಶ್ ವರದಕ್ಷಿಣೆ ಪಡೆದಿದ್ದರು. ಪುನಃ ವರದಕ್ಷಿಣೆ ತರುವಂತೆ ನನ್ನ ಗಂಡ ಕಿರುಕುಳ ಕೊಡುತ್ತಿದ್ದರು ಎಂದು ದೀಪ್ತಿ ದೂರಿನಲ್ಲಿ ಬರೆದು ಉಲ್ಲೇಖಿಸಿದ್ದಾರೆ.
ಈ ಸಂಬಂಧ ದಿನೇಶ್ ಕುಮಾರ್ ಹಾಗೂ ಅವರ ಸಹೋದರನ ಪತ್ನಿ ರಮ್ಯ ವಿರುದ್ಧ ದೂರು ನೀಡಿದ್ದಾರೆ.ವರದಕ್ಷಿಣೆ ಎಂಬುದು ಸಾಮಾಜಿಕ ಪಿಡುಗಾಗಿದೆ. ಇದನ್ನು ಬೇರು ಸಮೇತ ಕಿತ್ತೆಸೆಯಬೇಕಿದ್ದ ಜವಾಬ್ದಾರಿಯುತವಾದ ಅಧಿಕಾರಿ ವಿರುದ್ಧವೇ ಈಗ ಅವರ ಪತ್ನಿಯೇ ವರದಕ್ಷಿಣೆ ಕಿರುಕುಳದ ಆರೋಪವನ್ನು ಮಾಡಿದ್ದಾರೆ.
ಅಲ್ಲದೇ ಕೊಲೆ ಯತ್ನ ಕೇಸ್ ದಾಖಲಾಗಿರುವುದನ್ನ ನೋಡಿದ್ರೆ ಹೆಣ್ಮಕ್ಕಳ ಮೇಲಿನ ಶೋಷಣೆಗೆ ಕೊನೆ ಎಂದು ಎಂಬ ಪ್ರಶ್ನೆ ಮೂಡಲಿದೆ.ಸಧ್ಯ ಪ್ರಕರಣವನ್ನು ದಾಖಲು ಮಾಡಿಕೊಂಡಿರು ಆರ್ ಆರ್ ನಗರ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದು ತನಿಖೆ ಬಳಿಕೆ ಎಲ್ಲಾ ಸತ್ಯಾಸತ್ಯತೆಗಳು ತಿಳಿಯಲಿದ್ದು ಏನೆಂಬುದು ಗೊತ್ತಾಗಲಿದೆ. ಒಟ್ಟಾರೆ ಏನೇ ಆಗಲಿ ಒಂದು ದೊಡ್ಡ ಸ್ಥಾನದಲ್ಲಿರುವವರು ಹೀಗೆ ಮಾಡೊದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಜನ ಸಾಮಾನ್ಯರನ್ನು ಕಾಡುತ್ತಿವೆ.