ಹುಬ್ಬಳ್ಳಿ –
ಬ್ರಷ್ ಹಿಡಿದು ಶಾಲೆಗೆ ಬಣ್ಣ ಬಳಿದು ಸರಕಾರಿ ಶಾಲೆಯ ಅಂದ ಹೆಚ್ಚಿಸಿದ KAS ಅಧಿಕಾರಿ ಮಲ್ಲಿಕಾರ್ಜುನ – ಸರ್ಕಾರಿ ಶಾಲೆಗಳ ಅಂದ ಚೆಂದ ಹೆಚ್ಚಿಸುತ್ತಿದೆ ಪರಿಸರ ಪ್ರೇಮ ತಂಡ
ಪರಿಸರ ಪ್ರೇಮ ತಂಡವನ್ನು ಕಟ್ಟಿಕೊಂಡು, ತಮ್ಮ ಸ್ವಂತ ಹಣದಿಂದ, ಆ ತಂಡದ ಸಹಕಾರದೊಂ ದಿಗೆ, ಬಣ್ಣ ದರ್ಪಣ ಜೊತೆಗೆ ಸ್ವಚ್ಚತಾ ಕಾರ್ಯ ಹಾಗೂ ಆ ಶಾಲೆಗಳ ಮೈದಾನದಲ್ಲಿ, ಗಿಡಮರಗ ಳನ್ನು ನೆಟ್ಟು ಪೋಷಿಸುವ ವಿಶಿಷ್ಟ ಕಾರ್ಯದ ಜೊತೆಗೆ ಹೆಸರು ಮಾಡಿದ ಮಹಾನ್ ಚೇತನ ಮಲ್ಲಿಕಾರ್ಜುನ ತೊದಲಬಾಗಿ ಎಂದು ಮೊರಬ ಗ್ರಾಮದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಶಾಲಾಭಿವೃದ್ದಿ ಹಾಗೂ ಮೇಲು ಸ್ತುವಾರಿ ಸಮಿತಿಯ ಅಧ್ಯಕ್ಷರಾಗದ ಮಂಜುನಾಥ ಕಾಲವಾಡ ಹೇಳಿದರು,
ಕೊಪ್ಪಳ ಹಾಗೂ ಧಾರವಾಡದ ಪರಿಸರಪ್ರೇಮ ತಂಡದ ವತಿಯಿಂದ ಜರುಗಿದ ಬಣ್ಣದರ್ಪಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಂಜುನಾಥ ಕಾಲವಾಡ ರಜೆಯನ್ನು ಮನೆ ಯಲ್ಲಿ ಬಂಧುಬಳಗದ ಜೊತೆಗೆ ಕಳೆಯದೇ ಆ ರಜೆಯನ್ನು ಸಮಾಜದ ಹಿತಕ್ಕಾಗಿ ಮೀಸಲಿಟ್ಟ ಮಲ್ಲಿಕಾರ್ಜುನ ತೊದಲಬಾಗಿ
ಈ ಒಂದು ಸಮಾಜಮುಖಿ ಕಾಯಕದ ಜೊತೆಗೆ ಇಡೀ ನಾಡಿನಾದ್ಯಂತ ಜನಮನಗೆದ್ದ ಹೃದಯ ವಂತ,ಶಿಕ್ಷಣದ ಕೀರ್ತಿ ಇವರು ಎಂದರೆ ತಪ್ಪಾಗ ಲಾರದು ಎಂದರು, ಧಾರವಾಡದ ಪರಿಸರಪ್ರೇಮ ತಂಡದ ಮಹಾಪೋಷಕರು ಎಲ್ ಐ ಲಕ್ಕಮ್ಮ ನವರ ಮಾತನಾಡಿ ಇವರು ಮೂಲತ ಜಮಖಂಡಿ ತಾಲ್ಲೂಕಿನ ಕವಟಗಿ ಗ್ರಾಮದವರು
ಮೊದಲು ಇವರು ಪ್ರೌಢಶಾಲಾ ಶಿಕ್ಷಕರಾಗಿ ಸಾಕಷ್ಟು ವಿದ್ಯಾರ್ಥಿಗಳಿಗೆ ಅಕ್ಷರದ ಬೆಳಕು ನೀಡಿದ್ದಾರೆ, ಮುಂದೆ ಕೆಎಎಸ್ ಪರೀಕ್ಷೆ ಬರೆದು ಪಾಸಾಗಿ, ಅಧಿಕಾರಿಯಾಗಿ, ಪ್ರತಿ ರವಿವಾರ ಮತ್ತು ಎರಡು ಮತ್ತು ನಾಲ್ಕನೆಯ ಶನಿವಾರ ಇವರು ತಮ್ಮ ಪರಿಸರ ಪ್ರೇಮ ತಂಡದ ಮುಖೇನ ಬಣ್ಣ ಕಾಣದ ಸರಕಾರಿ ಶಾಲೆಗಳನ್ನು ಗುರುತಿಸಿ, ಬಣ್ಣ ದರ್ಪಣ ಮಾಡುತ್ತಿದ್ದಾರೆ,
ಸ್ವಂತ ತಾವೇ ಬ್ರಷ್ ಹಿಡಿದು ಬಣ್ಣ ಬಳಿಯುವ ಈ ನಾಡು ಕಂಡ ಅತ್ಯಂತ ಶ್ರೇಷ್ಠ ಶ್ರಮಿಕರತ್ನ ಇವರು, ಯಾವುದೇ ಪ್ರಚಾರ ಬಯಸದೇ, ತಮ್ಮ ತಂಡದ ಜೊತೆಗೆ ಪ್ರತಿ ರವಿವಾರ ಮತ್ತು ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರ ತಾವು ಗುರುತಿಸಿದ ಶಾಲೆ ಮತ್ತು ಅಂಗನವಾಡಿಗಳಿಗೆ ಹೋಗಿ, ಮೊದಲು, ಇತ್ತೀಚೆಗೆ ಜನಿಸಿದ ಹೆಣ್ಣು ಮಗುವಿನ ಹೆಸರಿನಲ್ಲಿ ೨೫ ಸಸಿಗಳನ್ನು ನೆಟ್ಟು, ಮಹಿಳಾ ಸಬಲೀಕರಣಕ್ಕಾಗಿ ಪ್ರೋತ್ಸಾಹಿಸುತ್ತಿ ದ್ದಾರೆ,
ಉಚಿತ ಆರೋಗ್ಯ ತಪಾಸಣೆ ಶಿಬಿರ, ಭಾರತೀಯ ಸಂಸ್ಕ್ರತಿ ಮತ್ತು ಸಂಸ್ಕಾರದ ಕುರಿತು ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಎಂದರು, ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಸಹಶಿಕ್ಷಕ ಮಲ್ಲಿಕಾರ್ಜುನ ಉಪ್ಪಿನ ಪರಿಸರ ಪ್ರೇಮ ತಂಡದ ಈ ನಮ್ಮ ಶಾಲೆಯ ಕಾರ್ಯ ಕ್ರಮ 216 ನೆಯ ಕಾರ್ಯಕ್ರಮವಾಗಿದೆ
ನಮ್ಮ ಕರೆಗೆ ಓಗೊಟ್ಟು ನಮ್ಮ ಗ್ರಾಮಕ್ಕೆ ಆಗಮಿಸಿ, ಶಾಲೆಗೆ ಬಣ್ಣದರ್ಪಣ ಮಾಡುವುದರ ಜೊತೆ ಚಿತ್ರಗಳನ್ನು ಬರೆದು ಶಾಲೆಯ ಅಂದ ಹೆಚ್ಚಿಸಿದ ಈ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಮುಖ್ಯ ಶಿಕ್ಷಕ ಎಂ ಎಸ್ ಅಕ್ಕಿ ಮಲ್ಲಿಕಾರ್ಜುನ ಉಪ್ಪಿನ ತಂಡದ ರಾಮಣ್ಣ ಅಂಬಣ್ಣ, ಮಾಲತೇಶ ಹಂಚಿನಾಳ ಸೇರಿದಂತೆ ಅನೇಕರು ಇದ್ದರು.ಸಹಶಿಕ್ಷಕ ಎಚ್ ಎಸ್ ಚನ್ನಪ್ಪಗೌಡರ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..