KAS ಅಧಿಕಾರಿ ಅಮಾನತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಯಿಂದ ಅಮಾನತು ಮಾಡಿ ಆದೇಶ…..

Suddi Sante Desk

ಬೆಂಗಳೂರು –

ನಗರಾಭಿವೃದ್ಧಿ ಇಲಾಖೆ ಉಪಕಾರ್ಯದರ್ಶಿ ಎಲಿಷಾ ಆಂಡ್ರೋಸ್ ಅವರನ್ನು ಕರ್ತವ್ಯಲೋಪ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತ್ತು ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಕೆಎಎಸ್ ಅಧಿ ಕಾರಿ ಎಲಿಷಾ ಆಂಡ್ರೋಸ್ ಅವರು ಎಂಜಿನಿಯರ್‌ ಗಳಿಗೆ ಭಡ್ತಿ ನೀಡುವ ವಿಚಾರದಲ್ಲಿ ಬಾಹ್ಯ ಫಲಾಪೇಕ್ಷೆಯಿಂದ ಕಾರ್ಯನಿರ್ವಹಿಸಿರುವುದು ಹಾಗೂ ಹಿರಿಯ ಅಧಿಕಾರಿಗಳು ಸತತ ನಿರ್ದೇಶನ ನೀಡಿದಾಗ್ಯೂ ಕಡತ ವಿಲೇವಾರಿ ಮಾಡದೆ ದುರ್ವತನೆ, ಗಂಭೀರ ಸ್ವರೂಪದ ಕರ್ತವ್ಯಲೋಪ ಎಸಗಿರುವುದು ಮೇಲುನೋ ಟಕ್ಕೆ ಕಂಡುಬಂಡಿದೆ ಎಂದು ಆದೇಶದಲ್ಲಿ ಉಲ್ಲೇಖಿಸ ಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.