ಬೆಂಗಳೂರು –
ಪಿಎಸ್ ಐ ಪರೀಕ್ಷೆಯ ತನಿಖೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ತನಿಖೆಯ ವೇಳೆ ಮತ್ತೊಂದು ಸ್ಪೋಟಕ ವಿಚಾರವು ಪತ್ತೆಯಾಗಿದ್ದು ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಲೀಕ್ ಮಾಡಿದ್ದು ಜ್ಞಾನಜ್ಯೋತಿ ಶಾಲೆಯ ಮುಖ್ಯಶಿಕ್ಷಕ ಕಾಶಿನಾಥ್.ಹೌದು ಒಂದು ಕಡೆ ಸಿಐಡಿ ಅಧಿಕಾರಿಗಳು ಬಿಡುವಿಲ್ಲದೇ ತನಿಖೆಯನ್ನು ನಡೆಸುತ್ತಿದ್ದಾರೆ ತನಿಖೆ ವೇಳೆ ಒಂದೊಂದೇ ಸ್ಫೋಟಕ ಮಾಹಿತಿ ಲಭ್ಯವಾಗು ತ್ತಿದೆ.ಇನ್ನು ತನಿಖೆಯಲ್ಲಿ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯ ಹೆಡ್ ಮಾಸ್ಟರ್ ಆಗಿರುವ ಕಾಶೀನಾಥ್ ಕಳ್ಳಾಟ ಬಯಲಾ ಗಿದೆ.
ಜ್ಞಾನಜ್ಯೋತಿ ಶಾಲೆಯಲ್ಲಿ ಪ್ರಶ್ನೆಪತ್ರಿಕೆ ಲೀಕ್ ಮಾಡಿದ್ದೇ ಕಾಶಿನಾಥ್ ಎನ್ನುವ ಸತ್ಯ ಬಯಲಾಗಿದೆ.ಶಾಲೆಗೆ ಬಂದ ಪ್ರಶ್ನೆ ಪತ್ರಿಕೆ ಬಂಡಲ್ ಓಪನ್ ಮಾಡಿ ಶಾಲೆಯಲ್ಲೇ ಜೆರಾಕ್ಸ್ ಮಾಡಿದ್ದನಂತೆ.ಜೆರಾಕ್ಸ್ ಪ್ರತಿಯನ್ನ ಹೊರಗಡೆ ಇರೋ ಕಿಂಗ್‌ಪಿನ್‌ಗಳಿಗೆ ನೀಡುತ್ತಿದ್ದ ಅಲ್ಲದೇ ಕಿಂಗ್‌ಪಿನ್ ಗಳು ಬ್ಲೂಟೂಥ್ ಮೂಲಕ ಅಭ್ಯರ್ಥಿಗಳಿಗೆ ಕೀ ಉತ್ತರಗ ಳನ್ನು ಹೇಳುತ್ತಿದ್ದರು.ಸಿಐಡಿ ಅಧಿಕಾರಿಗಳು ಜ್ಞಾನಜ್ಯೋತಿ ಶಾಲೆಗೆ ಭೇಟಿ ನೀಡಿ ಸ್ಥಳ ಮಹಜರು ಮಾಡಿದ್ದಾರೆ.
ಶಾಲೆ ಯಲ್ಲಿನ ಕಂಪ್ಯೂಟರ್, ಹಾರ್ಡ್‌ಡಿಸ್ಕ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನ ಸೀಜ್ ಮಾಡಿದ್ದು ಈ ಕುರಿತಂತೆ ಮತ್ತೊಂದು ಆಯಾಮದಲ್ಲಿ ತನಿಖೆಯನ್ನು ಮಾಡುತ್ತಿ ದ್ದಾರೆ.