ಬೆಂಗಳೂರು –
ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್-2 ಹುದ್ದೆಗಳಿಗೆ ಬಡ್ತಿ ಪಡೆಯಲು 1 ರಿಂದ 5ನೇ ತರಗತಿಗೆ ಬೋಧಿಸುವ ಪ್ರಾಥಮಿಕ ಶಾಲಾ ಶಿಕ್ಷಕರು ಅರ್ಹರಲ್ಲ ಎಂದು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಆದೇಶಿಸಿದೆ.ಶಿಕ್ಷಕರಿಗೆ ಈಗಾಗಲೇ ಬಡ್ತಿ ನೀಡಿದ್ದರೆ ಅದನ್ನು ರದ್ದುಪಡಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ. ಹೀಗಾಗಿ ರಾಜ್ಯದಲ್ಲಿ ಈಗಾಗಲೇ ಬಡ್ತಿ ಪಡೆದಿರುವ ಸುಮಾರು 8 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಬಡ್ತಿಯಾಗಲಿದೆ.

2018 ರಿಂದ 2021ರವರೆಗೆ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 1.30 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮನ್ನು ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್ 2 ಹುದ್ದೆಯ ಪದೋನ್ನತಿಗೆ ಪರಿಗಣಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ತಂದಿದ್ದರು. 7 ರಿಂದ 8 ಸಾವಿರ ಶಿಕ್ಷಕರಿಗೆ ಪದೋನ್ನತಿಯೂ ದೊರೆತಿತ್ತು. ಇದರ ಬೆನ್ನಲ್ಲೇ ಕೆಎಟಿಗೆ ಮೊರೆ ಹೋಗಿದ್ದ 6 ರಿಂದ 8ನೇ ತರಗತಿಗಳಿಗೆ ಬೋಧಿಸುವ ನೂರಾರು ಪದವೀ ಧರ ಶಿಕ್ಷಕರು,ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್-2 ಹುದ್ದೆಗೆ ಬಡ್ತಿ ಪಡೆಯಲು 6ರಿಂದ 8ನೇ ತರಗತಿ ಬೋಧಿಸುವ ಪದವೀಧರ ಶಿಕ್ಷಕರು ಮಾತ್ರವೇ ಅರ್ಹರಾಗಿದ್ದು ತಮ್ಮನ್ನು ಬಡ್ತಿಗೆ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿದ್ದರು.

ಅರ್ಜಿ ವಿಚಾರಣೆ ನಡೆಸಿದ ಕೆಎಟಿ ಹಂಗಾಮಿ ಅಧ್ಯಕ್ಷ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ನೇತೃತ್ವದ ಪೀಠ, ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್-2 ಹುದ್ದೆಗೆ ಪದೋನ್ನತಿ ಪಡೆಯಲು ಪ್ರಾಥಮಿಕ ಶಾಲಾ ಶಿಕ್ಷಕ ರು ಅರ್ಹರಲ್ಲ.ಬದಲಿಗೆ,6 ರಿಂದ 8 ನೇ ತರಗತಿ ಬೋಧಿಸುವ ಹಿರಿಯ ಪ್ರಾಥಮಿಕ ಶಿಕ್ಷಕರು ಮಾತ್ರ ಅರ್ಹರೆಂದು ಆದೇಶಿಸಿದೆ. ಇದರಿಂದ ರಾಜ್ಯದಲ್ಲಿ 6 ರಿಂದ 8ನೇ ತರಗತಿಗಳಿಗೆ ಬೋಧಿಸುತ್ತಿರುವ 13 ಸಾವಿರ ಶಿಕ್ಷಕರಿಗೆ ಸಿಹಿ ಸುದ್ದಿ ದೊರೆತಂತಾಗಿದೆ. ಇನ್ನೂ ಈ ಒಂದು ಆದೇಶವನ್ನು ಪ್ರಶ್ನಿಸಿ ಈ ಕುರಿತಂತೆ ಶೀಘ್ರದಲ್ಲೇ ಶಿಕ್ಷಕರ ಸಂಘಟನೆಯವರು ಚರ್ಚೆ ಮಾಡಿ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್ 2 ಹುದ್ದೆಗೆ ಪದೋನ್ನತಿಯನ್ನು 2018 ರಿಂದ 21ರವರೆಗೆ ನೀಡುತ್ತಲೇ ಬಂದಿದ್ದಾರೆ. ಕೆಲವು ಶಿಕ್ಷಕರು ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಈ ರೀತಿ ಪದೋನ್ನತಿ ಪಡೆದಿರುವ ಬಗ್ಗೆ ಆರೋಪ ಕೂಡ ಕೇಳಿ ಬಂದಿದೆ.ಇದೀಗ ಕೆಎಟಿ ಆದೇಶ ನೀಡಿರುವು ದು ಮತ್ತು ಬಡ್ತಿ ಪಡೆದಿರುವವರಿಗೆ ಹಿಂಬಡ್ತಿ ನೀಡು ತ್ತಿರುವುದನ್ನು ಪ್ರಶ್ನಿಸಿ ಇವರು ಹೈಕೋರ್ಟ್ ಮೆಟ್ಟಿ ಲೇರುವ ನಿರ್ಧರಿಸಲಾಗಿದೆ.ಇನ್ನೂ ಈ ಒಂದು ಆದೇ ಶ ಕುರಿತಂತೆ ನೋಡಿದರೆ ಇದರಲ್ಲಿ ಒಂದರಿಂದ 5ನೇ ತರಗತಿ ಬೋಧಿಸುವ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಹಿರಿತನದ ಪಟ್ಟಿಯಲ್ಲಿರುವವರಿಗೆ ಪ್ರೌಢ ಶಾಲಾ ಸಹ ಶಿಕ್ಷಕ ಗ್ರೇಡ್- 2 ಹುದ್ದೆಗೆ ಬಡ್ತಿ ನೀಡಲು ಸಾಧ್ಯವಿಲ್ಲ.

ಈ ಹುದ್ದೆಗಳು ಪ್ರಾಥಮಿಕ ಶಾಲಾ ಸಹಶಿಕ್ಷಕರ ಶ್ರೇಣಿ ಯ ನಂತರದ ಶ್ರೇಣಿಯ ಹುದ್ದೆಗಳಲ್ಲ.1 ರಿಂದ 5 ನೇ ತರಗತಿ ಬೋಧಿಸುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್-2 ಹುದ್ದೆಗಳಿಗೆ ಬಡ್ತಿ ನೀಡಿದ್ದಲ್ಲಿ ತಕ್ಷಣ ಅಂಥ ಶಿಕ್ಷಕರಿಗೆ ನೋಟಿಸ್ ನೀಡಿ ಬಡ್ತಿ ಹಿಂಪಡೆಯಬೇಕು.ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಪ್ರೌಢಶಾಲಾ ಸಹಶಿಕ್ಷಕ ಗ್ರೇಡ್ 2 ಶ್ರೇಣಿಗೆ 6 ರಿಂದ 8ನೇ ತರಗತಿ ಬೋಧಿಸುವ ಪದ ವೀಧರ ಹಿರಿಯ ಪ್ರಾಥಮಿಕ ಶಿಕ್ಷಕರು ಆರ್ಹರಾಗಿರು ತ್ತಾರೆ.

1ರಿಂದ 5ನೇ ತರಗತಿಗಳಿಗೆ ಬೋಧಿಸುವ ಪ್ರಾಥಮಿ ಕ ಶಿಕ್ಷಕರು ಮತ್ತು 6 ರಿಂದ 8 ನೇ ತರಗತಿ ಬೋಧಿ ಸುವ ಪದವೀಧರ ಶಿಕ್ಷಕರ ಹುದ್ದೆಗಳು ವಿಭಿನ್ನ ಶ್ರೇಣಿಗಳಾಗಿದ್ದು ಸೇವಾ ಹಿರಿತನದ ಆಧಾರದಲ್ಲಿ ಬೇರೆ ಬೇರೆ ಪಟ್ಟಿ ಮಾಡಬೇಕು.ಪ್ರೌಢಶಾಲಾ ಸಹಶಿ ಕ್ಷಕರ ಹುದ್ದೆಗಳಿಗೆ ಬಡ್ತಿ ನೀಡುವ ಪ್ರಕ್ರಿಯೆಯಲ್ಲಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಹಿರಿತನ ವನ್ನು ಪರಿಗಣಿಸಬೇಕು.

ಈ ಆದೇಶ ರಾಜ್ಯದ ಎಲ್ಲ ಜಿಲ್ಲೆಗಳ ಪ್ರೌಢಶಾಲಾ ಸಹ ಶಿಕ್ಷಕ ಬಡ್ತಿಗೆ ಅನ್ವಯವಾಗಲಿದೆ.ಹಾಗೇ ಅರ್ಜಿದಾರ ಶಿಕ್ಷಕರು ವೃಂದ ಮತ್ತು ನೇಮಕಾತಿ ನಿಯಮಗಳ ಅಡಿಯಲ್ಲಿ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗಳಿಗೆ ಬಡ್ತಿ ಪಡೆಯಲು ಅರ್ಹರಿದ್ದಲ್ಲಿ ರಾಜ್ಯ ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅವರನ್ನು ಸರ್ಕಾರ ಪರಿಗಣಿಸಬೇಕು ಕೆಎಟಿ ನೀಡಿರುವ ತೀರ್ಪಿಗೆ ನಾವು ತಲೆಬಾಗಬೇಕಿದೆ.ಇದರಿಂದ ಪ್ರಾಥಮಿಕ ಶಾಲಾ ಶಿಕ್ಷಕರು ಧೃತಿಗೆಡುವ ಅವಶ್ಯಕತೆ ಇಲ್ಲ. ಇದರ ವಿರು ದ್ಧವಾಗಿ ಹೋರಾಟ ಮಾಡುವುದಕ್ಕೆ ಸಿದ್ಧರಾಗುತ್ತೇವೆ ಎನ್ನುತ್ತಾರೆ ರಾಜ್ಯದ ಶಿಕ್ಷಕರ ಸಂಘಟನೆಯ ಮುಖಂ ಡರು.

ಇನ್ನೂ ಈ ಕುರಿತಂತೆ ಸುದ್ದಿಸಂತೆ ಯ ನ್ಯೂಸ್ ನೊಂದಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ ಮಾತನಾಡಿ ನ್ಯಾಯಾಲಯಕ್ಕೆ ತಪ್ಪು ಮಾಹಿ ತಿಯಿಂದಾಗಿ ಹೀಗೆ ಆಗಿದೆ ಈ ಕುರಿತಂತೆ ಸಂಘವು ಶೀಘ್ರದಲ್ಲೇ ಚರ್ಚೆಯನ್ನು ಮಾಡಿ ಮುಂದಿನ ನಿರ್ಧಾರವನ್ನು ತಗೆದುಕೊಳ್ಳುತ್ತದೆ.ಯಾವುದೇ ಕಾರಣಕ್ಕೂ ಶಿಕ್ಷಕರಿಗೆ ಅನ್ಯಾಯ ಆಗಲು ಬಿಡೊದಿ ಲ್ಲ ಎಂದಿದ್ದಾರೆ.ಒಟ್ಟಾರೆ ಕೆಎಟಿ ಆದೇಶ ಶಿಕ್ಷಕರಿಗೆ ದೊಡ್ಡ ಶಾಕ್ ನೀಡಿದ್ದು ಇದರ ನಡುವೆ ಏನಾಗುತ್ತದೆ ಏನೋ ಎಂಬ ಆತಂಕದಲ್ಲಿ ಶಿಕ್ಷಕರಿದ್ದಾರೆ