ಚಿತ್ತಾಪೂರ –
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮತ್ತು ದಿವಂಗತ ಕರಿಬಸಪ್ಪ ಮಹದೇವಪ್ಪ ಬಬ್ಬಜ್ಜಿ ಅವರ ಸ್ಮರಣಾರ್ಥ ಶಿಕ್ಷಕರಿಗಾಗಿ ವಿಶೇಷವಾದ ಕಾರ್ಯಕ್ರಮವನ್ನು ಶಿಕ್ಷಕ ಮಾಲತೇಶ್ ಬಬ್ಬಜ್ಜಿ ನಾಳೆ ಹಮ್ಮಿಕೊಂಡಿದ್ದಾರೆ ಹೌದು ಶಿಕ್ಷಕರಲ್ಲಿನ ಪ್ರತಿಭೆಯನ್ನು ಗುರುತಿಸುವ ಉದ್ದೇಶ ದಿಂದ ಜೊತೆಗೆ ಅವರಿಗೊಂದು ವೇದಿಕೆಯನ್ನು ಕಲ್ಪಿಸುವ ದೃಷ್ಟಿಯಿಂದಾಗಿ ಶಿಕ್ಷಕ ಮಾಲತೇಶ್ ಅವರು ಈ ಒಂದು ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ದಿಗ್ಗಾವಂಕರ್ ಚಾರಿಟೇಬಲ್ ಟ್ರಸ್ಟ್ ಚಿತ್ತಾಪೂರ ಮತ್ತು ನಾಗಾವಿ ಸಾಂಸ್ಕ್ರತಿಕ ಪ್ರತಿಷ್ಠಾನ ಚಿತ್ತಾಪೂರ ಇವರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 15 ರಂದು ಚಿತ್ರಾಪೂರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಈ ಒಂದು ಕಾರ್ಯಕ್ರಮ ನಡೆಯಲಿದ್ದು.ಕಾರ್ಯಕ್ರಮದ ಉದ್ಘಾಟಕ ರಾಗಿ ಕಲಬುರಗಿ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿರುವ ಮಲ್ಲಯ್ಯಾ ಗುತ್ತೇದಾರ ಉದ್ಘಾಟನೆಯನ್ನು ಮಾಡಲಿದ್ದು ಇನ್ನೂ ನಾಗಾವಿ ಸಾಂಸ್ಕ್ರತಿಕ ಟ್ರಸ್ಟ್ ನ ನಾಗಯ್ಯಾಸಾವಾಮಿ ಅಲ್ಲೂರ್ ಅಧ್ಯಕ್ಷತೆಯನ್ನು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ಸೇಡಂ,ಮಾಲತೇಶ್ ಬಬ್ಬಜ್ಜಿ,ವಿರೇಂದ್ರ ಕೋವಲ್ಲೂರ್,ಮಹಾಂತೇಶ ಪಂಚಾಳ.ಶಿವಪುತ್ರ ಕರ್ಣಿಕ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ
ಇನ್ನೂ ಈ ಒಂದು ವೇದಿಕೆಯ ಸಭಾ ಕಾರ್ಯಕ್ರಮದ ನಂತರ ಕವಿಗಳಿಂದ ಕವನ ವಾಚನ ನಡೆಯಲಿದೆ.ಆಸಕ್ತ ಶಿಕ್ಷಕರು ಕವಿಗಳು ಸಾಹಿತ್ಯಾಭಿಮಾನಿಗಳು ಬಿಡುವು ಮಾಡಿಕೊಂಡು ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿ ಯಶಶ್ವಿಗೊಳಿಸುವಂತೆ ಎರಡು ವೇದಿಕೆಯ ಪರವಾಗಿ ಶಿಕ್ಷಕರು ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ರುವ ಮಾಲತೇಶ್ ಬಬ್ಬಜ್ಜಿ ಆಮಂತ್ರಣ ನೀಡಿದ್ದಾರೆ.