ಕಲಬುರಗಿ –
ಮಾಹಾಮಾರಿ ಕೋವಿಡ್ ಗೆ ಮಾಜಿ ರಾಜ್ಯಸಭಾ ಸದಸ್ಯ ಮಾಜಿ ಸಚಿವ ಕೆ.ಬಿ ಶಾಣಪ್ಪ ಸಾವಿಗೀಡಾಗಿ ದ್ದಾರೆ.ಕಳೆದ ಹಲವು ದಿನಗಳಿಂದ ಕೊರೊನಾದ ಸೋಂಕಿನಿಂದ ಬಳಲುತ್ತಿದ್ದ ಕೆ.ಬಿ ಶಾಣಪ್ಪ ಅವರು ಇಂದು ಮೃತರಾಗಿದ್ದಾರೆ.

ಕಲಬುರಗಿ ಜಿಮ್ಸ್ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೆ.ಬಿ ಶಾಣಪ್ಪ ಅವರು ಇಂದು ನಿಧನ ರಾದರು.ಕಳೆದ ಎಂಪಿ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು ಕೆ.ಬಿ.ಶಾಣಪ್ಪ ಅವರು.

ಕಲಬುರಗಿ ಜಿಲ್ಲೆಯ ಹಿರಿಯ ರಾಜಕೀಯ ಮುತ್ಸದ್ದಿ ಯಾಗಿದ್ದರು.ಜೆ.ಹೆಚ್ ಪಟೇಲ್ ಸಂಪುಟದಲ್ಲಿ ಮಂತ್ರಿಯಾಗಿದ್ದ ಕೆ.ಬಿ ಶಾಣಪ್ಪ ಅವರು ರಾಜ್ಯದಲ್ಲಿ ಹಿರಿಯ ಮುತ್ಸದ್ದಿ ರಾಜಕಾರಣಿಯಾಗಿದ್ದರು.