OPS ಗಾಗಿ ಬೆಂಗಳೂರಿಗೆ ಹೊರಟಿದ್ದಿರಾ ಮೊದಲು ಈ ನಿಯಮಗಳು ಗಮನದಲ್ಲಿರಲಿ ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘ ಜಿಲ್ಲಾ ಘಟಕ ಧಾರವಾಡ ದಿಂದ ಒಂದಿಷ್ಟು ಮಾಹಿತಿ

Suddi Sante Desk
OPS ಗಾಗಿ ಬೆಂಗಳೂರಿಗೆ  ಹೊರಟಿದ್ದಿರಾ ಮೊದಲು ಈ ನಿಯಮಗಳು ಗಮನದಲ್ಲಿರಲಿ ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘ ಜಿಲ್ಲಾ ಘಟಕ ಧಾರವಾಡ ದಿಂದ ಒಂದಿಷ್ಟು ಮಾಹಿತಿ

ಧಾರವಾಡ

ಆತ್ಮೀಯ NPS ನೌಕರ ಬಾಂಧವರೆ…..ನಾಳೆ ನಾವೆಲ್ಲಾ NPS ವಿರುದ್ಧದ ಮಾಡು ಇಲ್ಲವೇ ಮಡಿ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಹೊರಟಿದ್ದೇವೆ. ಲಕ್ಷಾಂತರ ನೌಕರರು ಸೇರುವ ನಿರೀಕ್ಷೆ ಇದೆ. ಈ ಸಮಯದಲ್ಲಿ ನಾವು ಕೆಲವೊಂದು ನಿಯಮ ಗಳನ್ನು ಪಾಲಿಸೋಣ

ಬರುವಾಗ  ಅವಶ್ಯವಾಗಿ ನಮ್ಮ ಬ್ಯಾಗ್ ಗಳಲ್ಲಿ ಹಣ್ಣುಗಳು,ಡ್ರೈ ಪ್ರೂಟ್ಸ್, ನೀರಿನ ಬಾಟಲಿ.  ಬಿಸ್ಕೆಟ್ , ಚಾಕೋಲೇಟ್ ಹಾಗೂ ಒಂದು  ಹೊತ್ತಿಗೆ ಆಗುವಷ್ಟು ಉಪಹಾರ ವ್ಯವಸ್ಥೆ ಇರಲಿ ಕಾರಣ ತುಂಬಾ ಜನಜಂಗುಳಿಯ ಮಧ್ಯದಿಂದ ಊಟಕ್ಕೆ ಹೋಗಲು ಸಾಧ್ಯವಾಗದಿದ್ದರೂ ಸಹ ಇರುವ ಜಾಗದಲ್ಲೇ ಹೊಟ್ಟೆ ತುಂಬಿಸಿಕೊಳ್ಳಲು ಸಹಾಯವಾಗುತ್ತದೆ

ಹೆಚ್ಚು ದಿನಗಳು ಉಳಿಯುವುದರಿಂದ  ಬೇಕಾಗುವ ಹೆಚ್ಚುವರಿ ಬಟ್ಟೆ ನಮ್ಮ  ಬ್ಯಾಗ್ ಅಲ್ಲಿ ಇರಲಿ.ಪೇಸ್ಟ್ ,ಬ್ರಶ್,ಸೋಪು,ಕನ್ನಡಿ,ಟವಲ್  ಬಾಚಣಿಗೆ ಮುಂತಾದ ವಸ್ತುಗಳನ್ನು ಮರೆಯ ಬೇಡಿ.ನೀವು ದಿನನಿತ್ಯ ಸೇವಿಸುವ ಯಾವುದಾ ದರೂ ಮಾತ್ರೆಗಳಿದ್ದರೆ ಮರೆಯದೆ ಇಂದೇ ಬ್ಯಾಗ್ ಅಲ್ಲಿ ಹಾಕಿಕೊಳ್ಳಿ.ಬೆಲೆಬಾಳುವ ವಸ್ತುಗಳನ್ನು ದಯವಿಟ್ಟು ತರಬೇಡಿ.

ಚಳಿಗಾಲ ಆದುದರಿಂದ ಪ್ರಯಾಣ ಸಮಯದಲ್ಲಿ ಚಳಿಯಿಂದ ರಕ್ಷಣೆ ಪಡೆಯಲು ಶ್ವೆಟರ್, ಟೋಪಿ ಶಾಲು ಸ್ಯಾಕ್ಸ್, ಗ್ಲೌಸ್ ಮುಂತಾದವು ತಮ್ಮೊಟ್ಟಿ ಗಿರಲಿ.ನಾವೆಲ್ಲರೂ ಸಂಯಮದಿಂದ ಇರೋಣ, ಹಾಗೆ ಯಾರಾದರೂ ಪ್ರಯಾಣದಲ್ಲಿ ಅಸಕ್ತ ರಾದರೆ ಅವರಿಗೆ ಸಹಕರಿಸೋಣ.ಸಣ್ಣ ಪುಟ್ಟ ವ್ಯತ್ಯಯಗಳನ್ನು  ಯಾರು ದೊಡ್ಡದು ಮಾಡದೆ ಶಿಸ್ತಿನಿಂದ ಹೋರಾಟದಲ್ಲಿ ಭಾಗವಹಿಸೋಣ.

ತುಂಬಾ ಜನ ಒಂದೇ ಕಡೆ ಸೇರುವುದರಿಂದ ನಮ್ಮ ಪೋನ್ ಗಳು ಜಾಮ್ ಆಗುವ ಸಾಧ್ಯತೆ ಇದ್ದು ಎಲ್ಲರೂ ಒಟ್ಟಿಗೆ ಒಂದೇ ಕಡೆ ಇರೋಣ. ಖರ್ಚಿಗೆ ಆಗುವಷ್ಟು ಹಣ ನಮ್ಮ  ಜೇಬಿನಲ್ಲಿರಲಿ. (ಜಾಸ್ತಿ ಬೇಡ).ಮೊಬೈಲ್ ಸ್ವಿಚ್ ಆಫ್ ಆಗುವ  ಸಾದ್ಯತೆ ಇದ್ದು ಪವರ್ ಬಾಂಕ್ ಇದ್ದರೆ ಇಂದೇ ಚಾರ್ಜ್ ಮಾಡಿಕೊಂಡು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ.ಎಲ್ಲರೂ ಸಮಯ ಪಾಲನೆ ಮಾಡೋಣ.ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು.

ವಂದನೆಗಳೊಂದಿಗೆ…..ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘ ಜಿಲ್ಲಾ ಘಟಕ ಧಾರವಾಡ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.