ವಿಶೇಷ ಕಾರ್ಯಕ್ರ‌ಮಕ್ಕೆ ಸಾಕ್ಷಿಯಾಯಿತು ಕೆಲೂರ ಸರ್ಕಾರಿ ಶಾಲೆ – ಖಾಸಗಿ ಶಾಲೆಗಳಿಗಿಂತ ವಿಭಿನ್ನವಾಗಿ ಕಂಡು ಬಂದವು ಕಾರ್ಯಕ್ರಮಗಳು…..

Suddi Sante Desk
ವಿಶೇಷ ಕಾರ್ಯಕ್ರ‌ಮಕ್ಕೆ ಸಾಕ್ಷಿಯಾಯಿತು ಕೆಲೂರ ಸರ್ಕಾರಿ ಶಾಲೆ – ಖಾಸಗಿ ಶಾಲೆಗಳಿಗಿಂತ ವಿಭಿನ್ನವಾಗಿ ಕಂಡು ಬಂದವು ಕಾರ್ಯಕ್ರಮಗಳು…..

ಗದಗ

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೆಲೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಅದ್ದೂರಿಯಾಗಿ‌ ಗಣರಾಜ್ಯೋತ್ಸವ ಆಚರಣೆ ಮಾಡಿದರು, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ದೇವಪ್ಪ ಕಲಿವಾಲ ಹಾಗೂ ಭೂಧಾನಿಗಳಾದ ಮಳ್ಳಪ್ಪ ಬುಡ್ರಿಯವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು,

ಗ್ರಾಮದ ಪ್ರಮುಖರಾದ ಬೂದಿಹಾಳ ಮಳ್ಳಪ್ಪ ನವರು ಮಾತನಾಡಿ ಶಾಲೆಯ ಸಮಗ್ರ ಅಭಿವೃ ದ್ದಿಗೆ ಸದಾ ಸಿದ್ದ ಎಂಬ ಮಾತುಗಳನ್ನಾಡಿದರು, ದೇವಪ್ಪ ಬನ್ನಿಕೋಪ್ಪ ರವರು ಮಾತನಾಡಿ ಮಕ್ಕಳ ಭಾಷಣ,ನೃತ್ಯಗಳನ್ನು ಬಹುವಾಗಿ ಮೆಚ್ಚಿಕೊಂಡರು ಗ್ರಾಮದ ಯುವಕ ಕುರ್ವತ್ತೆಪ್ಪ ಮಾತನಾಡಿ ಡಾ:ಬಿ.ಆರ್.ಅಂಬೇಡ್ಕರರು ನೀಡಿದ ಸಂವಿಧಾನ ಅನುಸರಿಸಿ ದೇಶದ ಏಳಿಗೆಗೆ ಸಂವಿಧಾನದ ಅನುಪಾಲನೆಗೆ ಮೂಲಮಂತ್ರ ಎಂದು ತಿಳಿಸಿ ಶಾಲೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಗೆ ವ್ಯಕ್ತಪಡಿಸಿದರು.

ಕಪ್ಪತಗುಡ್ಡದ ತಪ್ಪಲಿನ ಸುಂದರ ನಿಸರ್ಗದಲ್ಲಿ ಇರುವ ಈ ಕುಗ್ರಾಮದ ಸರ್ಕಾರಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮದ ಯುವಕರು ಸದಾ ಜೋತೆಯಾಗುವ ಭರವಸೆಯ ಮಾತುಗಳನ್ನು ಶಿವಕುಮಾರ ಆಡಿದರು.

ಶಾಲೆಯ ಶಿಕ್ಷಕರ ಕೊರತೆ ಶಾಲೆಯ ಅಭಿವೃದ್ದಿಗೆ ಸಿಬ್ಬದ್ದಿವರ್ಗದವರು ಹಾಕುತ್ತಿರಯವ ಶ್ರಮದ ಬಗ್ಗೆ ಬಡ್ತಿಮುಖ್ಯಗುರುಗಳಾದ F.M.ಮಾನಶೆಟ್ಟರ ತಿಳಿಸಿದರು ಗ್ರಾಮದ ಸರ್ವಜನರ ಸಹಕಾರದಿಂದ‌ ಮಾತ್ರ ಶಾಲೆಯ ಏಳಿಗೆ ಸಾದ್ಯ ಶಾಲೆಯ ಸರ್ವ ತೋಮುಖ ಏಳಿಗೆಗೆ ಯುವಕರ ಸಹಕಾರ ಅತ್ಯಮೂಲ್ಯ ಹಾಗಾಗಿ ಗ್ರಾಮ ಶಾಲೆಯ ಹಳೆಯ ವಿದ್ಯಾರ್ಥಿಗಳು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸರ್ಕಾರದ ಆಶಯದಂತೆ ಕೈಜೋಡಿಸಿ ಕೆಲೂರ ಗ್ರಾಮದ ಶಾಲೆಯ ಸರ್ವತೋಮುಖ ಅಭಿವೃ ದ್ದಿಗೆ ಶ್ರಮಿಸಲು ಶಿಕ್ಷಕ ಈರಪ್ಪ ಸೊರಟೂರ ಮನವಿ ಮಾಡಿದರು.

ಅತಿಥಿ ಶಿಕ್ಷಕಿಯರಾದ ಶ್ರೀಮತಿ ಭಾರತಿ ಕಲಿವಾಳ, ಶ್ರೀಮತಿ ಕಾವ್ಯರವರು ಮಕ್ಕಳಿಗೆ ಸುಂದರ ನೃತ್ಯ ಸಂಯೋಜನೆ ಮಾಡಿಸಿದ್ದು ಎಲ್ಲರ ಗಮನ ಸೇಳೆಯಿತು, ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಭೀಮಣ್ಣ, ಹಾಗು ಶ್ರೀಮತಿ ಲಕ್ಷೀ ಒಂಟೆಲಿ, ಪ್ರಮುಖರಾದ ಬಸವಣ್ಣೇಪ್ಪ ಕೊಂಚಿಗೇರಿ, ಸೇರಿದಂತೆ SDMC ಸರ್ವ ಸದಸ್ಯರು, ಶಿಕ್ಷಣ ಪ್ರೇಮಿಗಳು.

ಮಹಿಳೆಯರು,ಯುವಕರು ಮಕ್ಕಳ ವಿವಿಧ ವೇಷಭೂಷಗಳ ನೃತ್ಯಗಳ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು 75ನೇ ಗಣರಾಜ್ಯೋತ್ಸವಕ್ಕೆ ಸಾಕ್ಷೀಯಾದರು, ಅತಿಥಿ ಶಿಕ್ಷಕಿಯರಾದ ಶ್ರೀಮತಿ ಭಾರತಿ‌ ಕಲಿವಾಳ ಪ್ರಾರ್ಥಿಸಿದರು, ಶಿಕ್ಷಕ  ಈರಪ್ಪ ಸೊರಟೂರ ಕಾರ್ಯಕ್ರಮ ನಿರೂಪಣೆ ಮಾಡಿದರು ಅತಿಥಿ ಶಿಕ್ಷಕಿಯಾದ ಕಾವ್ಯರವರು ವಂದಿಸಿದರು.

ಸುದ್ದಿ ಸಂತೆ ನ್ಯೂಸ್ ಗದಗ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.