ಮತ್ತೊಂದು ಧಾರ್ಮಿಕ ಕಾರ್ಯಕ್ಕೆ ಕೈ ಜೋಡಿಸಿದ KGP ಗ್ರೂಪ್ – ಶ್ರೀರಾಮ ನವಮಿ,ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಶುಭಾಶಯ ಕೋರಿದ ಶ್ರೀಗಂಧ ಶೆಟ್…..

Suddi Sante Desk
ಮತ್ತೊಂದು ಧಾರ್ಮಿಕ ಕಾರ್ಯಕ್ಕೆ ಕೈ ಜೋಡಿಸಿದ KGP ಗ್ರೂಪ್ – ಶ್ರೀರಾಮ ನವಮಿ,ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಶುಭಾಶಯ ಕೋರಿದ ಶ್ರೀಗಂಧ ಶೆಟ್…..

ಹುಬ್ಬಳ್ಳಿ

ಸರ್ವರಿಗೂ ರಾಮ ನವಮಿ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಶುಭಾಶಯಗಳು….. ಸರ್ವರಿಗೂ ಹಿಂದೂಗಳ ಸಾಮ್ರಾಟ ಮರ್ಯಾದ ಪುರಷೋತ್ತಮ ಶ್ರೀರಾಮ ಮತ್ತು ಛತ್ಪಪತಿ ಶಿವಾಜಿ ಮಹಾರಾಜರು ಸರ್ವರಿಗೂ ಒಳ್ಳೇಯದನ್ನು ಮಾಡಲಿ ಎಂದ ಕೆಜಿಪಿ ಗ್ರೂಪ್ ಅಧ್ಯಕ್ಷ ಶ್ರೀಗಂಧ ಶೆಟ್ ಹೌದು

ಕೆಜಿಪಿ ಗ್ರೂಪ್ ಕೇವಲ ವ್ಯಾಪಾರ ವಹಿವಾಟುಗಳಿಗೆ ಮಾತ್ರ ತನ್ನ ಕಾರ್ಯವನ್ನು ಸಿಮೀತವಾಗಿಟ್ಟುಕೊಳ್ಳದೇ ಸಾಮಾಜಿಕ ಧಾರ್ಮಿಕ ಕಾರ್ಯಗಳೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು ಹತ್ತು ಹಲವಾರು ಕಾರ್ಯಕ್ರಮಗಳನ್ನು ಸಂಘಟನೆ ಮಾಡಿಕೊಂಡು ಬರುತ್ತಿದೆ.ಸಮಾಜದೊಂದಿಗೆ ಸಂಘಟನೆ ಯಾವಾಗಲೂ ಇದ್ದೇ ಇದೆ

ಈ ಒಂದು ನಿಟ್ಟಿನಲ್ಲಿ ಫೌಂಡೇಶನ್ ವತಿಯಿಂದ ಪ್ರತಿದಿನ ಹತ್ತು ಹಲವಾರು ಧಾರ್ಮಿಕ ಸಾಮಾಜಿಕ ಕಾರ್ಯಕ್ರಮ ಗಳನ್ನು ಮಾಡಲಾಗುತ್ತಿದೆ.ಇನ್ನೂ ರಾಮ ನವಮಿ ಆಚರಣೆ ಹಲವು ವರ್ಷಗಳಿಂದ ಮಾಡಲಾಗು ತ್ತಿದ್ದು ಅದರಲ್ಲೂ ಇಂದು ಈ ಒಂದು ಆಚರಣೆ ವಿಶೇಷ ವಾಗಿ ಕಂಡು ಬರುತ್ತಿದ್ದು ಇದಕ್ಕೆ ಶ್ರೀರಾಮನವಮಿ ಉತ್ಸವ ಸಮಿತಿ ಈ ಒಂದು ಸಂಘಟನೆಯ ಕಾರ್ಯಕ್ರ ಮವೇ ಸಾಕ್ಷಿಯಾಗಿದ್ದ

ಈ ಒಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಕೆಜಿಪಿ ಗ್ರೂಪ್ ಕೂಡಾ ಕೈ ಜೋಡಿಸಿದ್ದು ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನವನ್ನು ಶ್ರೀರಾಮನವಮಿ ಹಬ್ಬವೆಂದು ನಾವೆಲ್ಲರೂ ಆಚರಣೆ ಮಾಡುತ್ತೇವೆ. ರಾಮನವಮಿ ಸಕಲ ಹಿಂದೂ ಧರ್ಮ ಸಂಜಾತರಿಗೂ ಆರಾಧಕನಾಗಿದ್ದು ಭಾರತದಲ್ಲಿ ಇಂದು ಜನಪ್ರಿಯ ಧಾರ್ಮಿಕ ಹಬ್ಬವಾಗಿದೆ.

ಶ್ರೀರಾಮನ ಹುಟ್ಟಿದ ದಿನವನ್ನು ಇಂದು ನಾವೆಲ್ಲರೂ ಸೇರಿಕೊಂಡು ಈ ಹಬ್ಬವನ್ನು ದೇಶದಾದ್ಯಂತ ಬಹಳಷ್ಟು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದ್ದು ಹುಬ್ಬಳ್ಳಿಯಲ್ಲಿ ಇಂದು ಶ್ರೀರಾಮನವಮಿ ಉತ್ಸವ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಶಿರಕೋಳ ಮತ್ತು ಗೆಳೆಯರ ನೇತ್ರತ್ವದಲ್ಲಿ ಸಂಘಟನೆ ಹಮ್ಮಿಕೊಂಡಿರುವ ಈ ಒಂದು ದೊಡ್ಡ ಕಾರ್ಯಕ್ರಮ ನಮ್ಮ ಮುಂದೆ ಕಂಡು ಬರುತ್ತಿದ್ದು ಸಂಘಟನೆಯ ಮುಖಂಡರೆಲ್ಲರೂ ಸೇರಿ ಕೊಂಡು ಶ್ರೀರಾಮನ ಹುಟ್ಟಿದ ದಿನವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಶ್ರೀಗಂಧ ಶೆಟ್ ಅವರು ಅಭಿಪ್ರಾಯ ಪಟ್ಟಿದ್ದಾರೆ

ಇಂದಿನ ಯುವ ಸಮುದಾಯದಲ್ಲಿ ಒಂದಿಷ್ಟು ಧಾರ್ಮಿಕ ಮನೋಭಾವನೆ ಮೂಡಿಸಬೇಕು ಎಂಬ ಕಲ್ಪನೆ ಇಟ್ಟುಕೊಂಡು ಈ ಒಂದು ದೊಡ್ಡ ಕಾರ್ಯಕ್ರಮ ವನ್ನು ಆಯೋಜಿಸಿದ್ದು ನಮ್ಮ ಮುಂದೆ ಕಂಡು ಬರುತ್ದಿದೆ ಹೀಗಾಗಿ ಇಂದು ನಾವೆಲ್ಲರೂ ಮಹಾನ್ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳೊಣಾ ಅದು ನಮ್ಮ ಭಾಗ್ಯ ಎಂದರು

ಇನ್ನೂ ಇದರೊಂದಿಗೆ ಇಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕೂಡಾ ಇಂದು ಹಿಂದು ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾದದ್ದು ಛತ್ರಪತಿ ಶಿವಾಜಿ ಮಹಾರಾಜರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ನೀವು ಪ್ರತಿಯೊಬ್ಬರು ನಡೆಯಬೇಕಿದೆ ಶ್ರೀರಾಮ ಜಯಂತಿ ಜೊತೆಯಲ್ಲಿ ಇಂದು ಶಿವಾಜಿ ಮಹಾರಾಜರ ಜಯಂತೋತ್ಸ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತೋಷದ ವಿಚಾರ.

ಹಿಂದೂ ಸಾಮ್ರಾಜ್ಯ ಸ್ಥಾಪನೆ ಮಾಡುವಲ್ಲಿ ತನ್ನ ವೀರ ಸಾಹಸ ದಿಟ್ಟತನವನ್ನು ತೋರಿಸಿ ಹಿಂದೂ ಸಮಾಜ ನಿರ್ಮಾಣ ಮಾಡಿದ ಶಿವಾಜಿ ಮಹಾರಾಜರು ದೇಶದಲ್ಲಿ ಧರ್ಮವನ್ನು ಉಳಿಸುವಲ್ಲಿ ಅಪಾರವಾದ ಕೊಡುಗೆ ನೀಡಿದ್ದಾರೆ ಅಂತಹ ಮಹಾನ್ ವ್ಯಕ್ತಿಯ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು.ಛತ್ರಪತಿ ಶಿವಾಜಿ ಮರಾಠ ಸಮುದಾಯಕ್ಕೆ ಮಾತ್ರ ಸೀಮಿತರಾದವರಲ್ಲ ಅವರು ದೇಶದ ಪ್ರತಿಯೊಬ್ಬ ಹಿಂದುಗಳ ಆರಾಧ್ಯ ದೈವರಾದವರು. ಧರ್ಮ ಉಳಿಸಿ ಬೆಳೆಸುವಲ್ಲಿ ಶಿವಾಜಿ ಮಹಾರಾಜರ ಪಾತ್ರ ಅಪಾರವಾದದ್ದು ಎಂದರು

ಹೀಗಾಗಿ ಕೆಜಿಪಿ ಗ್ರೂಪ್ ಇಂದು ವ್ಯಾಪಾರ ವಹಿವಾಟ ಅಷ್ಟೇ ಎಂದುಕೊಳ್ಳದೇ ಇದರೊಂದಿಗೆ ಹತ್ತಾರು ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಸಮಾಜದ ಸೇವೆಯನ್ನು ಮಾಡುತ್ತಿದ್ದೇವೆ ಎನ್ನುತ್ತಾ ಸಮಾಜದೊಂದಿಗೆ ನಿಮ್ಮೊಂದಿಗೆ ನಾವು ಕೆಜಿಪಿ ಗ್ರೂಪ್ ಇದ್ದೇವೆ ಎಂದು ಶ್ರೀಗಂಧ ಶೆಟ್ ಅವರು ಹೇಳಿದ್ದಾರೆ

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.