ಬೆಂಗಳೂರು –
ಪೊಲೀಸ್ ಇಲಾಖೆಯಲ್ಲಿ ಉತ್ತಮ ತನಿಖೆಗಾಗಿ ಕೇಂದ್ರ ಸರ್ಕಾರವು ನೀಡುವ ಕೇಂದ್ರ ಗೃಹ ಇಲಾಖೆಯ ಶೇಷ್ಠ ತನಿಖಾ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ನೀಡಿ ಗೌರವಿಸಲಾಯಿತು.ಹೌದು 2021 ರಲ್ಲಿ ಹುಬ್ಬಳ್ಳಿಯ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆ ಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಶಿವಾನಂದ ಕಮತಗಿ ಅವರಿಗೆ ಪ್ರಧಾನ ಮಾಡಲಾಯಿತು.
ಅವಧಿಯಲ್ಲಿ ನಡೆದ ರೌಡಿ ಶೀಟರ್ ಫ್ರೂಟ್ ಇರ್ಫಾನ್ ಕೊಲೆ ಪ್ರಕರಣದಲ್ಲಿ ಉತ್ತಮವಾಗಿ ತನಿಖೆಯನ್ನು ಮಾಡಿದ ಇವರಿಗೆ ಪ್ರಶಸ್ತಿಗೆ ಲಭಿಸಿತ್ತು.ಹೀಗಾಗಿ ಈ ಒಂದು ಪ್ರಶಸ್ತಿಯನ್ನು ಇಂದು ಬೆಂಗಳೂರಿನಲ್ಲಿ ಪ್ರಧಾನ ಮಾಡಲಾ ಯಿತು.ರಾಜ್ಯದ ಪೊಲೀಸ್ ಇಲಾಖೆಯ ಬೇರೆ ಬೇರೆ ವಿಭಾಗಗಳಲ್ಲಿ ವಿವಿಧ ಪ್ರಶಸ್ತಿಗಳನ್ನು ಗೃಹ ಸಚಿವರು ನೀಡಿ ಗೌರವಿಸಿದರು.
ಇನ್ನೂ ಕೇಂದ್ರ ಗೃಹ ಇಲಾಖೆಯ ಶ್ರೇಷ್ಠ ತನಿಖಾ ಪದಕವನ್ನು ಶಿವಾನಂದ ಕಮತಗಿ ಅವರಿಗೆ ನೀಡಿ ಗೌರವಿಸಲಾಯಿತು.2021 ರಲ್ಲಿ ಫ್ರೂಟ್ ಇರ್ಫಾನ್ ಪ್ರಕರಣದಲ್ಲಿ ಈ ಒಂದು ಪ್ರಶಸ್ತಿ ಯನ್ನು ನೀಡಿ ಅಭಿನಂದಿಸಲಾಯಿತು.2018 ರಿಂದ ಈ ಒಂದು ಪ್ರಶಸ್ತಿಯನ್ನು ನೀಡಲಾಗು ತ್ತಿದ್ದು ಅಪರಾಧ ಪ್ರಕರಣಗಳ ಉತ್ತಮವಾಗಿ ತನಿಖೆಗಾಗಿ ಶಿವಾನಂದ ಕಮತಗಿ ಅವರಿಗೆ ಲಭಿಸಿದ್ದು ಹೀಗಾಗಿ ಪ್ರಶಸ್ತಿಯನ್ನು ನೀಡಲಾಯಿತು.
ಕೇಂದ್ರ ಗೃಹ ಸಚಿವರ ಶ್ರೇಷ್ಠ ತನಿಖಾ ಪದಕ ಪ್ರಶಸ್ತಿಯನ್ನು ಈ ಹಿಂದೆಯೇ ಘೋಷಿಸಲಾಗಿತ್ತು ಇನ್ನೂ ಪ್ರಶಸ್ತಿ ಪಡೆದವರಲ್ಲಿ ಕೇಂದ್ರೀಯ ತನಿಖಾ ದಳ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶದ ಪೊಲೀಸರು ಕೂಡ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಅಪರಾಧದ ತನಿಖೆಯ ಉನ್ನತ ವೃತ್ತಿಪರ ಮಾನದಂಡಗಳನ್ನು ಉತ್ತೇಜಿಸುವ ಮತ್ತು ತನಿಖೆಯಲ್ಲಿ ಅಂತಹ ಶ್ರೇಷ್ಠತೆಯನ್ನು ಗುರುತಿಸುವ ಉದ್ದೇಶದಿಂದ 2018ರಲ್ಲಿ ಈ ಪದಕ ನೀಡಿಕೆ ಆರಂಭಿಸಲಾಗಿದೆ.
ತನಿಖೆಯಲ್ಲಿನ ಅತ್ಯುತ್ತಮ ಸೇವೆಯನ್ನು ಗುರುತಿಸಿ ಕೇಂದ್ರ ತನಿಖಾ ಸಂಸ್ಥೆಗಳು, ರಾಜ್ಯ ಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಪಡೆಯ ಸದಸ್ಯರಿಗೆ ತನಿಖೆಯಲ್ಲಿ ಶ್ರೇಷ್ಠತೆಯ ಆಧಾರದ ಮೇಲೆ ಪದಕವನ್ನು ನೀಡಲಾಗುತ್ತದೆ. ಹೆಡ್ ಕಾನ್ ಸ್ಟೇಬಲ್ ಹಿಡಿದು ಪೊಲೀಸ್ ಅಧೀಕ್ಷಕರವರೆಗೆ ಶ್ರೇಣಿಯ ಅರ್ಹ ಅಧಿಕಾರಿಗಳ ಶಿಫಾರಸುಗಳನ್ನು ಆನ್ ಲೈನ್‌ನಲ್ಲಿ ಸಲ್ಲಿಸಲು ಕೇಳಲಾಗಿತ್ತು.
ಇದರಂತೆ ಶಿವಾನಂದ ಕಮತಗಿ ಅವರು ತಾವು ಕೈಗೊಂಡ ರೌಡಿ ಶೀಟರ್ ಫ್ರೂಟ್ ಇರ್ಫಾನ್ ಕೊಲೆ ಪ್ರಕರಣದಲ್ಲಿ ಉತ್ತಮ ವಾಗಿ ತನಿಖೆ ಯನ್ನು ಮಾಡಿದ್ದಕ್ಕಾಗಿ ಪ್ರಶಸ್ತಿ ನೀಡಲಾಗಿದ್ದು ಇಂದು ಬೆಂಗಳೂರಿನಲ್ಲಿ ಗೃಹ ಸಚಿವರಿಂದ ಈ ಒಂದು ದೊಡ್ಡ ಪ್ರಶಸ್ತಿಯನ್ನು ಸ್ವೀಕಾರವನ್ನು ಮಾಡಿದರು.
ಪ್ರಶಸ್ತಿ ಸ್ವೀಕರಿಸುವ ಸುಮಧುರ ಕ್ಷಣಕ್ಕೆ ತಂದೆ ಶಿವಾನಂದ ಕಮತಗಿ ಸೇರಿದಂತೆ ಕುಟುಂಬಸ್ಥರು ಬಂಧು ಬಳಗ ಆಪ್ತರು ಸಾಕ್ಷಿಯಾಗಿ ಅಭಿನಂದಿಸಿ ಗೌರವಿಸಿ ಸಂತೋಷದ ಕ್ಷಣಕ್ಕೆ ಸಾಕ್ಷಿಯಾದರು. ಸದಾ ಉತ್ಸಾಹಿ ಖಡಕ್ ದಕ್ಷ ಪೊಲೀಸ್ ಅಧಿಕಾರಿ ಯಾಗಿರುವ ಶಿವಾನಂದ ಕಮತಗಿ ಅವರಿಗೆ ಇನ್ನಷ್ಟು ಪ್ರಶಸ್ತಿಗಳು ಲಭಿಸಲಿ ಸದಾ ಒಳ್ಳೇಯ ದಾಗಲಿ ಎಂಬೊದು ಸುದ್ದಿ ಸಂತೆಯ ಆಶಯ ವಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..