ಬೆಂಗಳೂರು –
ಪೊಲೀಸರ ಮನೆಗೇ ಕನ್ನ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಚೋರರು ಶೇಷಾದ್ರಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪೊಲೀಸ್ ಸಿಬ್ಬಂದಿ ಮನೆಗೆ ಕನ್ನ ಹಾಕಿ ಕಳ್ಳತನ ಮಾಡಿದ್ದಾರೆ. ಈ ಒಂದು ಕಳ್ಳತನ ನಡೆದಿದೆ. ಆನಂದರಾವ್ ವೃತ್ತ ಸಮೀಪದ ಪೊಲೀಸ್ ಕ್ವಾಟರ್ಸ್ ನಲ್ಲಿರುವ ಕಬ್ಬನ್ ಪಾರ್ಕ್ ಠಾಣೆಯ ಮುಖ್ಯಪೇದೆ ಮಾರುತಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.
ಕರ್ತವ್ಯಕ್ಕೆ ಹೋದ ಸಮಯದಲ್ಲಿ ಮನೆಗೆ ಬೀಗ ಹಾಕಿರುವ ವಿಚಾರ ತಿಳಿದ ಕಳ್ಳರು ಕಳ್ಳತನ ಮಾಡಿದ್ದಾರೆ.ಇವರ ಮನೆಯ ಬೀಗ ಒಡೆದು ಹಣ, ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.ಮಾರನೆಯ ದಿನ ಮಾರುತಿ ಅವರು ಮನೆ ಬಳಿ ಬಂದು ನೋಡಿದಾಗ ಬಾಗಿಲಿನ ಬೀಗ ಒಡೆದಿರುವುದನ್ನು ಗಮನಿಸಿ ಒಳಗೆ ಹೋಗಿ ನೋಡಿದಾಗ ಕಳ್ಳತನ ನಡೆದಿರುವುದು ಕಂಡು ಬಂದಿದೆ. ಈ ಸಂಬಂಧ ಶೇಷಾದ್ರಿಪುರ ಠಾಣೆ ಪೊಲೀಸರು ಕಳ್ಳತನ ಪ್ರಕರಣ ದಾಖಲಿಸಿಕೊಂಡು ಚೋರರಿಗಾಗಿ ಬಲೆ ಬೀಸಿದ್ದಾರೆ.