ತುಮಕೂರು –
ಶಾಲೆ ದೇವಸ್ಥಾನವಿದ್ದಂತೆ.ಶಾಲಾ ಪ್ರವೇಶದ ಪ್ರತಿಯೊಬ್ಬ ಮಗು ದೇಗುಲವೆಂದೇ ತಿಳಿದು,ಕೈಮುಗಿದು ಒಳಗೆ ಬರ್ತಾರೆ.ಆದ್ರೇ ಹೀಗಿರೋ ಶಾಲೆಯೊಂದರ ಬಾಗಿಲನ್ನೇ ಮುರಿದು ಒಳನುಗಿದ್ದಂತ ಪುಂಡರು ಮಾಡಿದ್ದು ಮಾತ್ರ, ಹೀನಕೃತ್ಯವಾಗಿದೆ.ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಕರ್ನಾಟಕ ಪಬ್ಲಿಕ್ ಉರ್ದು ಶಾಲೆಯ ಬಾಗಿಲನ್ನೇ ಮುರಿದು ಪುಂಡರು ಒಳನುಗ್ಗಿ ನಿನ್ನೆ ರಾತ್ರಿ ಶಾಲೆಯ ಕೊಠಡಿಯಲ್ಲಿಯೇ ಗುಂಡು,ತುಂಡಿನ ಪಾರ್ಟಿ ಮಾಡಿದ್ದಾರೆ.

ಅಂದಹಾಗೇ ಈ ಶಾಲೆ ಕೊರಟಗೆರೆಯ ಉಪ ಪೊಲೀಸ್ ಠಾಣೆ ಕೂಗಳತೆಯ ದೂರದಲ್ಲೇ ಇದಲ್ಲಿದೆ.ಜೊತೆಗೆ ಗ್ರಾಮ ಪಂಚಾಯ್ತಿ ಕಚೇರಿಗೂ ಸಮೀಪವೇ ಇದೆ.ಹೀಗಿದ್ದೂ ಶಾಲೆ ಯಲ್ಲಿ ನಿನ್ನೆ ರಾತ್ರಿ ಗುಂಡು ತುಂಡು ಪಾರ್ಟಿ ಮಾಡಿದ ಕುಡುಕರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿ ದ್ದಾರೆ.ಜೊತೆಗೆ ಅನೈತಿಕ ಚಟುವಟಿಕೆ ತಾಣವಾದಂತ ಶಾಲೆಯಲ್ಲಿನ ಈ ಚಟುವಟಿಕೆಯನ್ನು ತಡೆಯುವಂತೆಯೂ ಒತ್ತಾಯಿಸಿದ್ದಾರೆ.