ಹೊಸಪೇಟೆ –
ಸಾಮಾನ್ಯವಾಗಿ ಸಾರ್ವಜನಿಕರ ಮನೆ ಅಂಗಡಿ ಮುಂಗಟ್ಟು ಹೀಗೆ ಕಳ್ಳತನ ಮಾಡೊದನ್ನು ನೋಡಿದ್ದೇವೆ ಕೇಳಿದ್ದೇವೆ.ಆದರೆ ಪೊಲೀಸರ ಮನೆಗೆ ಕನ್ನ ಹಾಕೊದು ತುಂಬಾ ಕಡಿಮೆ ಹೌದು ಆದರೂ ಹೊಸಪೇಟೆಯಲ್ಲಿ ಪೊಲೀಸರ ಮನೆ ಕಳ್ಳರು ಕನ್ನ ಹಾಕಿದ್ದಾರೆ. ಹೌದು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂಥಹದೊಂದು ಪ್ರಕರಣ ನಡೆದಿದೆ.
ಪೊಲೀಸರ ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ದೋಚಿಕೊಂಡು ಖದೀಮರು ಪರಾರಿಯಾಗಿದ್ದಾರೆ. ಹೊಸಪೇಟೆ ನಗರದ ಪಾಂಡುರಂಗ ಕಾಲೊನಿ ಯಲ್ಲಿದ್ದ ಪೊಲೀಸರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈರಣ್ಣ ಎಂಬ ಪೊಲೀಸಪ್ಪನ ಮನೆಯಲ್ಲಿ ಕಳ್ಳತನ ನಡೆದಿದೆ.ರಾತ್ರಿ ಪಾಳೇಯದಲ್ಲಿ ಕರ್ತವ್ಯ ನಿರ್ವಹಿಸಲು ಠಾಣೆಗೆ ಹೋದಾಗ ಮನೆಗೆ ನುಗ್ಗಿ ಮನೆಯಲ್ಲಿದ್ದವರ ಕೈ ಕಾಲು ಕಟ್ಟಿ ಕಳ್ಳತನ ಎಸಗಿದ್ದಾರೆ ಖದೀಮರು.
ಠಾಣೆಗೆ ಕರ್ತವ್ಯ ಕ್ಕೆ ಹಾಜರಾದ ಹೆಡಕಾನ್ಸಟೇಬಲ್ ಮನೆಯಲ್ಲಿ ಸಂಭಂದಿಗಳಿದ್ದರೂ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದೇ ಕಳ್ಳತನಕ್ಕೆ ಕಾರಣ ಎನ್ನಲಾಗಿದೆ. ಮನೆಗೆ ಬೀಗ ಹಾಕಿರುವುದನ್ನು ಕಂಡು ಮನೆಯಲ್ಲಿ ಯಾರು ಇಲ್ಲ ಎಂದು ಮನೆಗೆ ಕಳ್ಳತನಕ್ಕೆ ಮುಂದಾಗಿದ್ದಾರೆ ಖದೀಮರು.
ಈ ಸಂಭಂದ ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಒಟ್ಟಾರೆಯಾಗಿ ಜನಸಾಮಾನ್ಯರ ಪರಸ್ಥಿತಿ ಒಂದೆಡೆಯಾದರೆ ಇನ್ನೂ ಪೊಲೀಸರ ಪರಸ್ಥಿತಿ ಇದೇ ಆದರೆ ರಾಜ್ಯದಲ್ಲಿ ಯಾರಿಗೆ ಇದೆ ಭದ್ರತೆ ಎಂಬ ಅನುಮಾನ ಕಾಡುತ್ತಿದ್ದು ನಿಜಕ್ಕೂ ಇದು ದುರಂತವೇ ಸರಿ.