ಗದಗ –
ತವರು ಮನೆಗೆ ಹೋಗುವ ಆತುರದಲ್ಲಿ ಶಿಕ್ಷಕಿಯೊಬ್ಬರು ಚಿನ್ನ ಇಟ್ಟಿದ್ದ ಬ್ಯಾಗನ್ನು ಬಸ್‌ನಲ್ಲೇ ಮರೆತು ಇಳಿದಿದ್ದರು. ವಿಷಯ ತಿಳಿದ ಕೂಡಲೇ ಕಾರ್ಯ ಪ್ರವೃತ್ತರಾದ ಶಿರಹಟ್ಟಿ ಪೊಲೀಸರು ಚಿನ್ನ, ಬೆಳ್ಳಿ ಆಭರಣ ತುಂಬಿದ್ದ ವ್ಯಾನಿಟಿ ಬ್ಯಾಗ್ ಪತ್ತೆ ಹಚ್ಚಿ ಮಹಿಳೆಗೆ ಹಿಂತಿರುಗಿಸಿದ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ನಡೆದಿದೆ.ಗದಗ ಜಿಲ್ಲೆ ಶಿರ ಹಟ್ಟಿ ತಾಲೂಕಿನ ತಂಗೋಡಕ್ಕೆ ಹೊರಟಿದ್ದ ಧಾರವಾಡ ಮೂಲದ ಮಹಿಳೆ ಸಹೋದರನ ಮನೆ ಕಾರ್ಯದಲ್ಲಿ ಭಾಗಿಯಾಗಬೇಕು ಅನ್ನೋ ಖುಷಿಯಲ್ಲಿದ್ರು.ಜೊತೆಗೆ 10 ತೊಲೆ ಚಿನ್ನದ ಆಭರಣ.ಸಹೋದರನಿಗೆ ಉಡುಗೊರೆ ಕೊಡೋದಕ್ಕೆ ಅಂತಾ ತಂದಿದ್ದ 50 ಗ್ರಾಂ ತೂಕದ ಬೆಳ್ಳಿ ಆರತಿ ತಟ್ಟೆಯನ್ನ ವ್ಯಾನಿಟಿ ಬ್ಯಾಗ್‌ನಲ್ಲಿ ತೆಗೆದುಕೊಂಡು ಹೊರಟಿದ್ರು.ಧಾರವಾಡ ಮೂಲಕ ಹುಬ್ಬಳ್ಳಿಗೆ ಬಂದು ಅಲ್ಲಿಂದ ಶಿರಹಟ್ಟಿ ಬಸ್ ಹತ್ತಿದ್ರು.ಸಂಜೆ ಏಳು ಗಂಟೆ ಸುಮಾರಿಗೆ ಶಿರಹಟ್ಟಿ ತಲುಪಿದ್ರು.ತಂಗೋಡ ಬಸ್ ಏರೋದಕ್ಕೆ ಅಂತಾ ಶಿರಹಟ್ಡಿ ಬಸ್ ನಿಲ್ದಾಣದಲ್ಲಿ ಇಳಿ ದಿದ್ರು.ಮಗುವನ್ನ ಜೊತೆಗೆ ಕರೆದುಕೊಂಡು ಬಸ್ ಇಳಿಯೋ ಆತುರದಲ್ಲಿ ಬ್ಯಾಗ್ ಬಸ್‌ನಲ್ಲೇ ಉಳಿದಿತ್ತು. ಬಸ್ ಇಳಿಯುವ ದಾವಂತದಲ್ಲಿ ವ್ಯಾನಿಟಿ ಬ್ಯಾಗ್ ಮಿಸ್ ಆಗಿದ್ದು ಗೀತಾ ಅವರ ಗಮನಕ್ಕೆ ಬಂದಿರಲಿಲ್ಲ.ಬಸ್ ಇಳಿದ ಕೂಡಲೇ ಬ್ಯಾಗ್ ಚೆಕ್ ಮಾಡುವ ಸಂಧರ್ಭದಲ್ಲಿ ವ್ಯಾನಿಟಿ ಬ್ಯಾಗ್ ನಾಪತ್ತೆಯಾಗಿದ್ದು ಗಮನಕ್ಕೆ ಬಂದಿದ್ದು ನಂತರ ಕೂಡಲೇ ಶಿರಹಟ್ಡಿ ಪೊಲೀಸರಿಗೆ ಭೇಟಿಯಾಗಿ ವಿಷಯ ತಿಳಿಸಿದರು.ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಬ್ಯಾಗ್ ಪತ್ತೆ ಹಚ್ಚಿದ್ದಾರೆ.
ಹುಬ್ಬಳ್ಳಿಯಿಂದ ಶಿಂಗಟಾಲೂರಿಗೆ ಬಸ್ ಹೊರಟಿತ್ತು. ಶಿರಹಟ್ಟಿಯಲ್ಲಿ ಗೀತಾ ಇಳಿದುಕೊಂಡಿದ್ರು.ಬ್ಯಾಗ್ ಮಿಸ್ ಆಗಿದ್ದ ಬಗ್ಗೆ ತಿಳಿದೊಡನೆ ತಡ ಮಾಡದೆ ಗೀತಾ ಅವರು ವಿಷಯವನ್ನ ಪೊಲೀಸರಿಗೆ ತಿಳಿಸಿದ್ದಾರೆ.ಪಿಎಸ್‌ಐ ಪ್ರವೀಣ್ ಗಂಗೋಳ ಆ್ಯಂಡ್ ಟೀಮ್ ಬ್ಯಾಗ್‌ನಲ್ಲಿ ಏನು ಇಟ್ಟಿದ್ರಿ ಅನ್ನೋ ಮಾಹಿತಿ ಪಡೆದರು.ಚಿನ್ನ ಬೆಳ್ಳಿ ಜೊತೆ ಮೊಬೈಲ್ ಫೋನ್ ಇಟ್ಟಿರೋ ಬಗ್ಗೆಯೂ ಗೀತಾ ಪೊಲೀ ಸರಿಗೆ ಮಾಹಿತಿ ನೀಡಿದರು.ಕೂಡಲೇ ಮೊಬೈಲ್ ಲೊಕೇ ಷನ್ ಟ್ರೇಸ್ ಮಾಡಿದ ಪೊಲೀಸರು ಶಿರಹಟ್ಟಿ ಬಸ್ ನಿಲ್ದಾಣಕ್ಕೆ ತೆರಳಿ ಪರಿಶೀಲನೆ ನಡೆಸಿದ್ರು.ಬೆಳ್ಳಟ್ಟಿ ಕಡೆಗೆ ಬಸ್ ಹೊರಟಿರೋ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗುತ್ತೆ.
ಮೊಬೈಲ್ ಲೊಕೇಷನ್‌ನಲ್ಲೂ ಬೆಳ್ಳಟ್ಟಿ ಬಸ್ ನಿಲ್ದಾಣ ತೋರಿಸಿತ್ತು.ಬೆಳ್ಳಟ್ಟಿ ಹೊರಠಾಣೆಗೆ ವೈಯಲ್ ಲೆಸ್ ಮೆಸೇಜ್ ನ್ನ ಪೊಲೀಸರು ನೀಡಿದರು.ಬಸ್ ನಿಲ್ದಾಣಕ್ಕೆ ತೆರಳಿದ ಪೊಲೀಸ್ ಸಿಬ್ಬಂದಿ,ಬಸ್ ಪರಿಶೀಲಿಸಿದಾಗ ಬ್ಯಾಗ್ ಸೀಟ್ ಮೇಲೆ ಇರೋದು ಪತ್ತೆಯಾಗಿದೆ.ಕೂಡಲೇ ಬೆಳ್ಳಟ್ಟಿಗೆ ತೆರಳಿದ ಗೀತಾ ಕುಟುಂಬ ಬ್ಯಾಗ್ ಪಡೆದುಕೊಂ ಡಿತ್ತು.ಬ್ಯಾಗ್‌ನಲ್ಲಿ ಹತ್ತು ತೊಲೆಯ ಚಿನ್ನದ ವಿವಿಧ ಆಭರಣ 50 ತೊಲೆ ಬೆಳ್ಳಿ ತಟ್ಟೆ 5 ಸಾವಿರ ನಗದು ಇತ್ತು. ಜೊತೆಗೆ ಒಂದು ಮೊಬೈಲ್ ಇತ್ತು ಯಾವುದೇ ಆಭರಣ ಮಿಸ್ ಆಗಿಲ್ಲ ಅಂತಾ ಗೀತಾ ಖುಷಿಯಿಂದ ಪೊಲೀಸರಿಗೆ ಧನ್ಯವಾದಗಳನ್ನು ಹೇಳುತ್ತಾ ನಗು ನಗುತ್ತಾ ಮಗುವಿನೊ ಂದಿಗೆ ಮನೆಯತ್ತ ಹೆಜ್ಜೆ ಹಾಕಿದರು.
ಬ್ಯಾಗ್ ಹುಡುಕಿ ಕೊಡುವಲ್ಲಿ ಶಿರಹಟ್ಟಿ ಪೊಲೀಸರು ನೆರವಾಗಿದ್ದಾರೆ.ಹೀಗಾಗಿ ಶಿರಹಟ್ಟಿ ಪೊಲೀಸರ ಕಾರ್ಯ ಖುಷಿ ನೀಡಿದೆ ಅಂತಾ ಗೀತಾ ಕೃತಜ್ಞತೆ ಸಲ್ಲಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಕಾರ್ಯಪ್ರವೃತ್ತರಾಗಿ ಚಿನ್ನ ಹುಡು ಕುವಲ್ಲಿ ಸಹಾಯ ಮಾಡಿದ ಶಿರಹಟ್ಟ ಸಿಪಿಐ ವಿಕಾಸ ಲಮಾಣಿ, ಪಿಎಸ್‌ಐ ಪ್ರವೀಣ ಗಂಗೋಳ ಪಿಎಸ್‌ಐ ಶಿವಾನಂದ ಶಿಂಗಣ್ಣವರ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಎಸ್ ಪಿ ಶಿವಪ್ರಕಾಶ ದೇವರಾಜು, ಡಿವೈಎಸ್ ಪಿ ಎಸ್ ಆರ್ ಪವಾಡಶೆಟ್ಟಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.