ಹುಬ್ಬಳ್ಳಿ –
ಖಾಸಿಂಸಾಬ್ ಕುಟುಂಬಕ್ಕೆ ಆಸರೆಯಾದ ಶ್ರೀಗಂಧ ಶೇಟ್ – ಬಡೆಖಾನ್ ಕುಟುಂಬದ ಹತ್ತಾರು ಸಮಸ್ಯೆಗಳಿಗೆ ಕಿವಿಯಾದ KGP ಫೌಂಡೇಶನ್…..ಸರ್ಕಾರಗಳು ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಮಾಡಿದ ಶ್ರೀಗಂಧ ಶೇಟ್ …..
ಸದಾ ಒಂದಿಲ್ಲೊಂದು ಕೆಲಸ ಕಾರ್ಯಗಳ ಮೂಲಕ ಸಮಾಜ ಸೇವೆಯನ್ನು ಮಾಡುತ್ತಿರುವ ಹುಬ್ಬಳ್ಳಿಯ ಯುವ ಉತ್ಸಾಹಿ ಸಮಾಜಸೇವಕ ಶ್ರೀಗಂಧ ಶೇಟ್ ಅವರ ಸೇವಾ ಕಾರ್ಯ ನಗರದಲ್ಲಿ ಮುಂದುವರೆದಿದೆ.ಯಾವುದೇ ಸಮಸ್ಯೆ ಯಾವುದೇ ವಿಚಾರ ಗಮನಕ್ಕೆ ಬರುತ್ತಿದ್ದಂತೆ ತಕ್ಷಣವೇ ಕೆಜಿಪಿ ಟೀಮ್ ಕರೆಯಿಸಿಕೊಟ್ಟು ಸಮಸ್ಯೆಯನ್ನು ಆಲಿಸಲು ತಿಳಿಸಿ ನಂತರ ತಾವೇ ಖುದ್ದಾಗಿ ಹೋಗಿ ಆ ಕುಟಂಂಬಕ್ಕೆ ನೆರವಾಗುತ್ತಾ ಇದರೊಂದಿಗೆ ಸಮಾಜ ಸೇವೆಯನ್ನು ಶ್ರೀಗಂಧ ಶೇಟ್ ಅವರು ಮಾಡ್ತಾ ಇದ್ದಾರೆ.
ತಂದೆ ಗಣೇಶ ಶೇಟ್ ಅವರ ಮಾರ್ಗದರ್ಶನದಲ್ಲಿ ಈ ಒಂದು ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರ್ತಾ ಇದ್ದು ಇದಕ್ಕೆ ಮತ್ತೊಂದು ಉದಾಹರಣೆ ಬೈರಿದೇವರಕೊಪ್ಪದಲ್ಲಿನ ಕುಟುಂಬದ ಕಣ್ಣೀರಿನ ಕಥೆ ಹೌದು ಖಾಸಿಂಸಾಬ್ ಬಡೆಕಾನ್ ಎಂಬುವರು ಪತ್ನಿಯೊಂದಿಗೆ ಇಬ್ಬರೂ ಮಾತ್ರ ಮನೆಯಲ್ಲೇ ವಾಸವಾಗಿದ್ದರು
ಮಳೆಗಾಲದಲ್ಲಿ ಮಳೆಯಿಂದ ಕುಸಿದು ಬಿದ್ದರೂ ಕೂಡಾ ಬೇರೆ ಯಾವುದೇ ಆಶ್ರಯವಿಲ್ಲದೆ ಅದೇ ಅಪಾಯಕಾರಿ ಮನೆಯಲ್ಲಿ ವಾಸಿಸುತ್ತಾ ಜೀವನ ನಡೆಸುತ್ತಿದ್ದರು ಅಲ್ಲದೇ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ವಿಶೇಷವಾಗಿ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ತೀವ್ರವಾಗಿ ನರಳುತ್ತಿದ್ದರು ಈ ಒಂದು ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಶ್ರೀಗಂಧ ಶೇಟ್ ಅವರು ಕೆಜಿಪಿ ಫೌಂಡೇಶನ್ ತಂಡವನ್ನು ಅವರ ಮನೆಗೆ ಕಳುಹಿಸಿಕೊಟ್ಟು ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡರು
ನಂತರ ಕುಟಂಬಕ್ಕೆ ನೆರವನ್ನು ನೀಡಲಾಯಿತು ಮಾನವೀಯ ತೆಯ ನೆಲೆಯಲ್ಲಿ, ಧನ ಸಹಾಯದೊಂದಿಗೆ ದಿನಸಿ ಸಾಮಗ್ರಿ ಗಳನ್ನು ನೀಡಿ ಅವರಿಗೆ ಧೈರ್ಯ ತುಂಬುವ ಪ್ರಯತ್ನವನ್ನು ಶ್ರೀಗಂಧ ಶೇಟ್ ಅವರ ನೇತ್ರತ್ವದಲ್ಲಿ ಮಾಡಲಾಯಿತು ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ, ಕಿಡ್ನಿ ಸ್ಟೋನ್ ಸಮಸ್ಯೆಗೆ ಉತ್ತಮ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಿ ಸಂಪೂರ್ಣವಾಗಿ ಗುಣಮುಖರಾಗುವಂತೆ ಮಾಡುವ ಭರವಸೆಯನ್ನು ಕೂಡಾ ನೀಡಲಾಯಿತು
ಈ ಸಣ್ಣ ಸಹಾಯವೇ ಅವರ ಜೀವನದಲ್ಲಿ ಹೊಸ ಆಶಾಕಿರಣ ವಾಗಲಿ ಎಂಬ ನಂಬಿಕೆಯನ್ನು ಉತ್ಸಾಹಿ ತರುಣರಾಗಿರುವ ಶ್ರೀಗಂಧ ಶೇಟ್ ಅವರು ಕಂಡುಕೊಂಡಿದ್ದು ಕೆಜಿಪಿ ಫೌಂಡೇಶನ್ ಸದಾ ಅವರ ಜೊತೆಯಲ್ಲಿರುತ್ತದೆ ಎಂಬ ಸಂದೇಶವನ್ನು ನೀಡಿದ್ರು.ಇನ್ನೂ ಈ ಒಂದು ಸಮಯದಲ್ಲಿ ಶ್ರೀಗಂಧ ಶೇಟ್ ಅವರೊಂದಿಗೆ ಹರೀಶ್ ಅಂಗಡಿ,ನಂದೀಶ ಚುರಮರಿ,ರವೀಶ್ರೀ ಧವಲ್,ಜೀವನ್,ಅನುಪ ಕಮ್ಮಾರ,ನಾಗರಾಜ ಸೋಗಿ,ವಿನಾಯಕ ಕಿತ್ತೂರು,ವೆಂಕಟೇಶ ಕಲಬುರ್ಗಿ,ಸೇರಿದಂತೆ ಕೆಜಿಪಿ ಗ್ರೂಪ್ ನ ಸದಸ್ಯರು ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.



